ಇದು ಬೆಂಗಳೂರಿನ ಡೆಲಿವರಿ ಬಾಯ್ (delivery boy) ಗಳು ನೋಡಲೇ ಬೇಕಾದ ಸ್ಟೋರಿ.. ಬೆಂಗಳೂರಿನಲ್ಲಿ ಖತರ್ನಾಕ್ ಮೊಬೈಲ್ ಸುಲಿಗೆಕೋರರ (Mobile snatching) ಬಂಧನವಾಗಿದೆ. ಹೊಟ್ಟೆಪಾಡಿಗಾಗಿ ರಾತ್ರಿ ವೇಳೆ ಎಲೆಕ್ಟ್ರಿಕ್ ಬೈಕ್ನಲ್ಲಿ ಡೆಲಿವರಿ ಮಾಡೋ ಹುಡುಗರೇ ಇವರ ಟಾರ್ಗೇಟ್. ರಾತ್ರಿ ವೇಳೆ ಡೆಲಿವರಿ ಬಾಯ್ ಗಳ ಮೊಬೈಲ್ ಗಳನ್ನ ಸುಲಿಗೆ ಮಾಡೋ ಆರೋಪಿಗಳು ಇವರು. ಯುಲು ಅಂತಹ ಸಣ್ಣ ಎಲೆಕ್ಟ್ರಿಕ್ ಬೈಕ್ ಗಳ ಮುಂದೆ ಕ್ಲಿಪ್ ಹಾಕಿ ಮೊಬೈಲ್ ಸಿಕ್ಕಿಸುತ್ತಾರೆ. ಒಂದು ಕಡೆ ರೂಟ್ ಮ್ಯಾಪ್ ನೋಡಲು ಹೀಗೆ ಕ್ಲಿಪ್ ಹಾಕಿ ಸಿಕ್ಕಿಸಿಕೊಳ್ಳೂವ ಡೆಲಿವರಿ ಬಾಯ್ ಗಳು ಮತ್ತೊಂದು ಕಡೆ ಅದನ್ನೇ ಬಂಡವಾಳ ಮಾಡಿಕೊಳ್ಳೊ ಆರೋಪಿಗಳು ಇವರು. ಕ್ಷಣಾರ್ಧದಲ್ಲಿ ಹಿಂಬದಿಯಿಂದ ಬೈಕ್ನಲ್ಲಿ ಬಂದು ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಆರೋಪಿಗಳು -ಅಸ್ಸಾಂ ಮೂಲದ ರಾಕೇಶ್ ಹಾಗೂ ಮಲ್ಲಿಕ್ ಬಂಧಿತ ಆರೋಪಿಗಳು.
ಕಳೆದ ಕೆಲ ದಿನಗಳ ಹಿಂದೆ ಸದ್ದುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೆಲಿವರಿ ಬಾಯ್ ಮೊಬೈಲ್ ಸುಲಿಗೆಯಾಗಿತ್ತು. ಸುಲಿಗೆ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಡನ್ಜೋ ಡೆಲಿವರಿ ಬಾಯ್ ತನ್ನ ಕೈ ಮುರಿದುಕೊಂಡಿದ್ದ. ನಂತರ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ (saddugunte palya police station) ಪ್ರಕರಣ ದಾಖಲಿಸಿದ್ದ. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ಬರೊಬ್ಬರಿ 32 ಮೊಬೈಲ್ ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸುದ್ದಗುಂಟೆ ಪಾಳ್ಯ ಪೊಲೀಸರು, ಸದ್ಯ 25 ಮೊಬೈಲ್ ರಿಕವರಿ ಮಾಡಿದ್ದು, ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 6:28 pm, Wed, 2 August 23