ಬೆಂಗಳೂರು: ರಾಜಕಾಲುವೆ (Rajakaluve) ಒತ್ತುವರಿ ಮಾಡಿಕೊಂಡು ಈಜುಕೋಳ, ಶೌಚಾಲಯ ನಿರ್ಮಿಸಿ ಕಾಂಪೌಂಡ್ ಹಾಕಿಕೊಂಡಿದ್ದ ಖಾಸಗಿ ಬಿಲ್ಡರ್ಸ್ಗೆ (Bliders) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 85 ಲಕ್ಷ ರೂ. ದಂಡ ವಿಧಿಸುವ ಮೂಲಕ ಶಾಖ್ ನೀಡಿದೆ. ಬೆಂಗಳೂರು ಪೂರ್ವ ತಾಲೂಕು ಕುಂಬೇನ ಅಗ್ರಹಾರ ಮೂಲಕ ಹಾದು ಹೋಗಿದ್ದ ರಾಜಕಾಲುವೆ ಹಾಗೂ 15 ಮೀಟರ್ ಬಪರ್ ಜೋನ್ನಲ್ಲಿ ಖಾಸಗಿ ಬಿಲ್ಡರ್ಗಳು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಸ್ಥಳಿಯ ಅಧಿಕಾರಿಗಳಿಗೆ ಎಷ್ಟೇ ದೂರು ನೀಡಿದರೂ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಮೀನಾಮೇಷ ಮಾಡುತ್ತಿದ್ದರು.
ಹೀಗಾಗಿ ಸ್ಥಳಿಯರೆಲ್ಲ ಸೇರಿ ರಾಜಕಾಲುವೆ ಹಾಗೂ ಬಪರ್ ಜೋನ್ ಉಳಿಸುವ ನಿಟ್ಟಿನಲ್ಲಿ ಚೆನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಮೊರೆ ಹೋಗಿದ್ದರು. ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಸಿದರು. ಎರಡು ಪರ ವಾದ-ವಿವಾದ ಆಲಿಸಿದ ನ್ಯಾಯಾಲಯ ಇದೀಗ ಒತ್ತುವರಿ ತೆರವುಗೊಳಿಸುವಂತೆ ಆದೇಶ ನೀಡಿ, ಒತ್ತುವರಿದಾರರಿಗೆ 85 ಲಕ್ಷ ದಂಡ ಹಾಕಿದೆ.
ಇನ್ನು ನ್ಯಾಯಾಲಯ ದಂಡ ಹಾಕ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಒತ್ತುವರಿಯಾಗಿದ್ದ ಕಾಲುವೆ ತೆರವುಗೊಳಿಸಿದ್ದು ರಾಜಕಾಲುವೆಯ ಬಪರ್ ಜೋನ್ನಲ್ಲಿ ಗ್ರೀನ್ ಲ್ಯಾಂಡ್ ಮಾಡಲು ಮುಂದಾಗಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Sat, 1 April 23