Tv9 Impact: ವಿಪ್ರೊ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭ

ವಿಪ್ರೊ ಮಾಡಿಕೊಂಡಿದ್ದ ರಾಜಲಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿತ್ತು. ಈ ಬಗ್ಗೆ Tv9 ವರದಿ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಬುಲ್ಡೋಜರ್​ಗಳು ಮತ್ತೆ ಘರ್ಜಿಸಲು ಆರಂಭಿಸಿದೆ.

Tv9 Impact: ವಿಪ್ರೊ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭ
ವಿಪ್ರೋ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ
Follow us
TV9 Web
| Updated By: Rakesh Nayak Manchi

Updated on:Sep 20, 2022 | 3:01 PM

ಬೆಂಗಳೂರು: ಮಹಾ ಮಳೆಯ ನಂತರ ಸಂಭವಿಸಿದ ಜಲಪ್ರವಾಹವ ಮುಂದೆ ಸಂಭವಿಸಬಾರದು ಎಂಬ ಕಾರಣಕ್ಕೆ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ (BBMP) ಮುಂದಾಗಿತ್ತು. ಅದರಂತೆ ತೆರವು ಕಾರ್ಯಾಚರಣೆ ಆರಂಭಗೊಂಡು ಕೆಲವು ದಿನಗಳವರೆಗೆ ನಗರದಲ್ಲಿ ಬುಲ್ಡೋಜರ್​ಗಳು ಘರ್ಷಿಸಿತ್ತು. ಆದರೆ ದೈತ್ಯ ಕಂಪನಿ ವಿಪ್ರೋ ಮಾಡಿಕೊಂಡಿದ್ದ ಒತ್ತವರಿಯನ್ನು ತೆರವುಗೊಳಿಸುವ ಬದಲು ಅದರ ಮುಂದೆ ಮಂಡಿಯೂರಿತ್ತು. ಅದರಂತೆ ಆರಂಭವಾಗಿದ್ದ ತೆರವು ಕಾರ್ಯಾಚರಣೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಸ್ಥಗತಿಗೊಂಡಿತ್ತು. ಈ ಬಗ್ಗೆ ವರದಿ ಮಾಡಿದ ಟಿವಿ9 ಮತ್ತೆ ಪಾಲಿಕೆಯನ್ನು ಎಚ್ಚರಿಸುವ ಕಾರ್ಯ ಮಾಡಿತು. ಅದರಂತೆ ಮತ್ತೆ ಬುಲ್ಡೋಜರ್​ಗಳು ಸ್ಥಳದಲ್ಲಿ ಘರ್ಷಿಸಲು ಆರಂಭಿಸಿವೆ.

ವಿಪ್ರೋ ಕಂಪನಿಯು ಒತ್ತುವರಿ ಮಾಡಿಕೊಂಡ ಸ್ಥಳವನ್ನು ತೆರವುಗೊಳಿಸಲು ಪಾಲಿಕೆ ಹಿಂದೇಟು ಹಾಕಿತ್ತು. ಆದರೆ ವರದಿ ಬಳಿಕ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ನಗರದ ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋ ಹಾಗೂ ಸಲಾರ್ ಪುರಿಯಾ ಅಪಾರ್ಟ್‌ಮೆಂಟ್ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ವಿಪ್ರೋ ಕಂಪನಿಯಿಂದ 2.4 ಮೀ. ಅಗಲ ಮತ್ತು 300 ಮೀ. ಒತ್ತುವರಿ ಆಗಿತ್ತು.

ಸ್ಥಳಕ್ಕೆ AEE ಮಾರ್ಕಾಂಡೇಯ ಭೇಟಿ

ವಿಪ್ರೋ ಕಂಪನಿಯಿಂದ ರಾಜಕಾಲುವೆ ಒತ್ತುವರಿ ತೆರವು ಹಿನ್ನೆಲೆ ಸ್ಥಳಕ್ಕೆ ಮಹದೇವಪುರ ವಲಯದ ಎಇಇ ಮಾರ್ಕಾಂಡೇಯ ಅವರು ಭೇಟಿ ನೀಡಿದರು. ಈ ವೇಳೆ ಹೇಳಿಕೆ ನೀಡಿದ ಅವರು, ನಿನ್ನೆ ಮೆಸ್ ಇದ್ದ ಕಾರಣ ಕಾಂಪೌಂಡ್ ತೆರವು ಆಗಲಿಲ್ಲ. ಇಂದು ವಿಪ್ರೋದವರೇ ಒತ್ತುವರಿ ತೆರವು ಮಾಡಿದ್ದಾರೆ. ಸರ್ವೆ ಮೂಲಕ ಸುಮಾರು 8 ಅಡಿಯಷ್ಟು ಒತ್ತುವರಿ ಮಾಡಿರುವುದು ಪತ್ತೆಯಾಗಿತ್ತು. ನಮ್ಮ ವಿಲೇಜ್ ಮ್ಯಾಪ್ ಪ್ರಕಾರ ಸರ್ವೇಯರ್ ಮಾರ್ಕ್ ಮಾಡಿಕೊಟ್ಟಿದ್ದಾರೆ. ಅದರ ಪ್ರಕಾರ ಒತ್ತುವರಿ ತೆರವು ಮಾಡುತ್ತೇವೆ. ಕಸವನಹಳ್ಳಿಯಲ್ಲಿ ಶೆಡ್ ಡೆಮಾಲಿಶನ್ ಇತ್ತು. ಹೀಗಾಗಿ ಇಲ್ಲಿಗೆ ಬರುವುದು ತಡವಾಯಿತು ಎಂದರು.

ಸೋಮವಾರ ಆಗಿದ್ದೇನು?

ವಿಪ್ರೋ ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮಾತ್ರ ಆಗಮಿಸಿರುವ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಇಷ್ಟೂ ದಿನ ಯಾವುದೇ ತೆರವು ಕಾರ್ಯಾಚರಣೆಗೆ ತಹಶೀಲ್ದಾರ್ ಆಗಮಿಸಿರಲಿಲ್ಲ. ಸೋಮವಾರ (ಸೆ.19) ಬೆಳಗ್ಗೆ 11:30ಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾರ್ಕಿಂಗ್ ಪರಿಶೀಲನೆ ಮಾಡಿದ್ದು, 12 ಗಂಟೆಗೆ ಬುಲ್ಡೋಜರ್ ಬಳಸಿ ವಿಪ್ರೋ ಕಂಪೌಂಡ್ ವಾಲ್ ತೆರವಿಗೆ ಮುಂದಾಗಿತ್ತು. ತೆರವು ಕಾರ್ಯಾಚರಣೆ ಶುರುವಾದ ಒಂದು ಗಂಟೆಯಲ್ಲಿ ಸ್ಥಳಕ್ಕೆ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ರೈ ಆಗಮಿಸಿದ್ದು, ನಂತರದ 20 ನಿಮಿಷಕ್ಕೆ ಇಡೀ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತವಾಗಿತ್ತು. ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ತಹಶೀಲ್ದಾರ್ ಗರಂ ಆಗಿದ್ದರು.

ಒತ್ತುವರಿ ತೆರವು ಆದೇಶ, ಬಾಗಮಾನೆ ಟೆಕ್ ಪಾರ್ಕ್ ಮತ್ತು ಪೂರ್ವಾ ಪಾರ್ಕಿಡ್ಜ್ ಸಂಕಷ್ಟ

ಒತ್ತುವರಿ ತೆರವು ಮಾಡುವಂತೆ ಬೆಂಗಳೂರು ತಹಶೀಲ್ದಾರ್ ಕೋರ್ಟ್ ಆದೇಶ ಮಾಡಿರುವ ಹಿನ್ನೆಲೆ ಬಾಗಮಾನೆ ಟೆಕ್ ಪಾರ್ಕ್ ಮತ್ತು ಪೂರ್ವಾ ಪಾರ್ಕಿಡ್ಜ್ ಸಂಕಷ್ಟ ಎದುರಾಗಿದೆ. ಸರ್ವೇ ನಂಬರ್ 35/1, 35/2, 35/3, 38/2, ಮತ್ತು ಸರ್ವೇ ನಂಬರ್ 85 ರಲ್ಲಿನ ಒತ್ತುವರಿ ತೆರವು ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದ್ದು, ಒತ್ತುವರಿದಾರರೆ ತಮ್ಮ ಸ್ವಂತ ಖರ್ಚಿನಲ್ಲೇ ತೆರವು ಮಾಡುವಂತೆ ಸೂಚನೆ ನೀಡಿದೆ. ಇಲ್ಲವಾದಲ್ಲಿ ಬಿಬಿಎಂಪಿ ಸರ್ವೆಯರ್ ನೆರವಿನಿಂದ ತೆರವುಗೊಳಿಸಬೇಕು, ಅದಕ್ಕಾಗುವ ಖರ್ಚನ್ನು ಕೂಡ ಒತ್ತುವರಿದಾರರೇ ಭರಿಸಬೇಕು.  ಒಂದೊಮ್ಮೆ ಒತ್ತುವರಿದಾರರು ತೆರವು ಮಾಡದಿದ್ದರೆ ಸರ್ಕಾರ ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ಅಲ್ಲದೆ ಒತ್ತುವರಿ ಮಾಡಿಕೊಂಡವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಹೇಳಿದೆ. ಅದರಂತೆ ಬಾಗಮಾನೆ ಮತ್ತು ಪೂರ್ವ ಪ್ರಾಕಿಡ್ಜ್​ಗೆ ಸಂಕಷ್ಟ ಎದುರಾಗಿದೆ. ಒತ್ತುವರಿ ತೆರವು ಮಾಡದಂತೆ ಬಿಲ್ಡರ್​ಗಳು ಕೋರ್ಟ್ ಮೊರೆ ಹೋಗಿದ್ದರು.

ಮತ್ತಷ್ಟು ಬೆಂಗಳೂರು ನಗರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Tue, 20 September 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM