ವಕ್ಫ್ ಅವ್ಯವಹಾರ ಕುರಿತ ವರದಿ ಸುಳ್ಳು ಎಂದಾದರೆ ತಲೆ ಕಡಿಯಿರಿ: ಅನ್ವರ್ ಮಾಡಿಪ್ಪಾಡಿ

ಯಡಿಯೂರಪ್ಪ ಮತ್ತು ಅವರ ಮಗ ವರದಿಯನ್ನು ಮಾರಿಕೊಂಡಿದ್ದರು ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.

ವಕ್ಫ್ ಅವ್ಯವಹಾರ ಕುರಿತ ವರದಿ ಸುಳ್ಳು ಎಂದಾದರೆ ತಲೆ ಕಡಿಯಿರಿ: ಅನ್ವರ್ ಮಾಡಿಪ್ಪಾಡಿ
ಕರ್ನಾಟಕ ವಕ್ಫ್ ಮಂಡಳಿ ಮತ್ತು ಅನ್ವರ್ ಮಾಣಿಪ್ಪಾಡಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 20, 2022 | 3:13 PM

ಮಂಗಳೂರು: ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಇಂದು ಅನ್ವರ್ ಮಣಪ್ಪಾಡಿ ಅವರು 2012ರಲ್ಲಿ ಸಲ್ಲಿಸಿರುವ ವಕ್ಫ್ ಆಸ್ತಿ ಅಕ್ರಮಕ್ಕೆ ಸಂಬಂಧಿಸಿದ ವರದಿ ಮಂಡನೆಯಾಗುವ ಸಾಧ್ಯತೆಯಿದೆ. ಈ ವರದಿಯ ಪ್ರಕಾರ ವಕ್ಫ್​ ಮಂಡಳಿಗೆ ಸಂಬಂಧಿಸಿದ ₹ 2.30 ಸಾವಿರ ಕೋಟಿ ಮೊತ್ತದ ಅವ್ಯವಹಾರ ನಡೆದಿದೆ. ವರದಿಯ ಕುರಿತು ಮಂಗಳೂರಿನಲ್ಲಿ ಬಿಜೆಪಿ ನಾಯಕ ಅನ್ವರ್ ಮಣಪ್ಪಾಡಿ ಟಿವಿ9ಗೆ ಮಾಹಿತಿ ನೀಡಿದರು. ಈ ವರದಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನ್ಯಾಯ ಸಿಗಲಿಲ್ಲ. ಯಡಿಯೂರಪ್ಪ ಮತ್ತು ಅವರ ಮಗ ವರದಿಯನ್ನು ಮಾರಿಕೊಂಡಿದ್ದರು. ಸತ್ಯ ಹೊರಗೆಳೆಯಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಗ ಸದವಕಾಶವಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಇಂದು ಸುಳ್ಳು ಕತೆ ಇರಿಸಿಕೊಂಡು ಸದನಕ್ಕೆ ಬಂದಿದ್ದಾರೆ. ಆ ಸುಳ್ಳು ಕಂತೆಯ ಬಲೆಗೆ ನೀವು ಬೀಳಬೇಡಿ. ವಕ್ಫ್​ ಆಸ್ತಿಯ ಮೇಲೆ ಹಲವು ಸಂಕೀರ್ಣಗಳು, ಪಂಚತಾರ ಹೊಟೆಲ್​ಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗಿವೆ.

ಈ ಹಗರಣದಲ್ಲಿ ಸಿ.ಎಂ.ಇಬ್ರಾಹಿಮ್, ಹ್ಯಾರಿಸ್, ಕಮರುಲ್ಲಾ ಇಸ್ಲಾಂ, ಮಲ್ಲಿಕಾರ್ಜುನ ಖರ್ಗೆ, ಇಕ್ಬಾಲ್ ಅನ್ಸಾರಿ, ಜಾಫರ್ ಷರೀಫ್, ರೆಹಮಾನ್ ಖಾನ್, ಧರಂಸಿಂಗ್, ಸೂರ್ಯವಂಶಿ, ರೋಷನ್ ಬೇಗ್ ಸೇರಿದಂತೆ ಅಂದಿನ ಎಲ್ಲಾ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ‌. ವರದಿಯ ಪರವಾಗಿ ಹೈಕೋರ್ಟ್, ಸುಪ್ರಿಂಕೋರ್ಟ್​ವರೆಗೂ ಹೋಗಿ ಗೆದ್ದಿದ್ದೇನೆ. ಇನ್ನು ದೇವರ ಹತ್ತಿರ ಹೋದ ಮೇಲೆ ಕ್ರಮ ಕೈಗೊಳ್ತೀರಾ ಎಂದು ಪ್ರಶ್ನಿಸಿದರು.

ಈ ವರದಿಯು ಸುಳ್ಳು ಎಂದಾದರೆ ತಲೆ ಕಡಿದು ಇಡುತ್ತೇನೆ‌. ಬೊಮ್ಮಾಯಿಯವರೇ ದೈರ್ಯವಾಗಿ ಮುಂದೆ ಹೋಗಿ. ಬೆಂಗಳೂರಿನ ಬೆಲ್ಲಳ್ಳಿ ಸರ್ವೇ ನಂಬರ್ 55ರ 602 ಎಕರೆ, ಜಾಫರ್ ಷರೀಫ್ ಎಂಜಿನಿಯರಿಂಗ್ ಕಾಲೇಜು, ಪಂಚತಾರ ಹೋಟೇಲ್, ವಿಂಡ್ಸರ್ ಮ್ಯಾನರ್ ಕೂಡ ವಕ್ಫ್ ಆಸ್ತಿ ಎಂದು ವಿವರಿಸಿದರು.

ಅಕ್ರಮ ತಡೆಯಲು ಬಹಿರಂಗ ಪತ್ರ ಬರೆದಿದ್ದ ಅನ್ವರ್ ಮಾಣಿಪ್ಪಾಡಿ

ವಕ್ಫ್​ ಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ, ಐಎಎಸ್ ಅಧಿಕಾರಿ ಮಹೇಂದ್ರ ಜೈನ್​ ಅವರಿಗೆ ಅನ್ವರ್ ಮಾಣಿಪ್ಪಾಡಿ ಡಿಸೆಂಬರ್ 4, 2020ರಂದು ಬಹಿರಂಗ ಪತ್ರ ಬರೆದಿದ್ದರು. ತಮ್ಮ ಪತ್ರದಲ್ಲಿ ಅವರು ಅಕ್ರಮದ ಹಲವು ವಿವರಗಳನ್ನು ನೀಡಿದ್ದರು. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಕಂಬಲ್ ಪೋಶ್ ದರ್ಗಾಕ್ಕೆ ನಿವೃತ್ತ ಕೆಎಎಸ್​ ಅಧಿಕಾರಿ ಆತೀಕ್ ಅಹ್ಮದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಆದರೆ, ಅವರಿಗೆ ಅಧಿಕಾರ ಹಸ್ತಾಂತರಿಸಲು 8 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧಿಕಾರಿ ಸತಾಯಿಸಿದ್ದರು ಎಂದು ಅನ್ವರ್ ತಮ್ಮ ಪತ್ರದಲ್ಲಿ ದೂರಿದ್ದರು.

ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಆತೀಕ್ ಅಹ್ಮದ್ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಮೊದಲಿದ್ದ ಸಮಿತಿ 12 ವರ್ಷದಲ್ಲಿ ₹ 26 ಲಕ್ಷ ಮೊತ್ತವನ್ನು ಮಾತ್ರ ಸಂಗ್ರಹಿಸಿತ್ತು. ಆದರೆ ಆತೀಕ್ ಅಹ್ಮದ್ ಕೇವಲ ₹ 5 ತಿಂಗಳಲ್ಲಿ 35 ಲಕ್ಷ ಸಂಗ್ರಹಿಸಿದ್ದಾರೆ. ಹಾಗಾದರೆ ಮೊದಲು ಎಷ್ಟು ಅವ್ಯವಹಾರ ನಡೆದಿತ್ತು ಎಂದು ಅನ್ವರ್ ಪ್ರಶ್ನಿಸಿದ್ದರು. ಅಹ್ಮದ್ ಬಂದ ನಂತರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇದು ಮೊದಲಿದ್ದವರಿಗೆ ಏಕೆ ಸಾಧ್ಯವಾಗಲಿಲ್ಲ? ಇದು ವಕ್ಫ್ ಇಲಾಖೆಯ ಅವ್ಯವಹಾರಕ್ಕೆ ಒಂದು ಉದಾಹರಣೆಯಷ್ಟೇ. ಇದೇ ರೀತಿ ಕೋಲಾರದ ಚಿಂತಾಮಣಿಯ ಮುರುಗಮಲ್ಲಾ ದರ್ಗಾದಲ್ಲೂ ಅವ್ಯವಹಾರ ನಡೆಯುತ್ತಿದೆ. ಇವೆಲ್ಲವನ್ನೂ ಮಟ್ಟ ಹಾಕಬೇಕು. ದರ್ಗಾಗಳಲ್ಲಿ 8-10 ವರ್ಷಗಳಿಂದ ದುಡಿಯುತ್ತಿರುವವರಿಗೆ ಮೂರು ಕಾಸಿನ ಸಂಬಳ ನೀಡಲಾಗುತ್ತಿದೆ. ಬಂದ ಆದಾಯವೆಲ್ಲವೂ ಯಾರದ್ದೋ ಪಾಲಾಗುತ್ತಿದೆ ಎಂದು ಆರೋಪಿಸಿದ್ದರು.

ಇನ್ನಾದರೂ ಸರ್ಕಾರ ವಕ್ಫ್ ಇಲಾಖೆಯ ಭ್ರಷ್ಟ ಚಟುವಟಿಕೆಗಳಿಗೆ ಇತಿಶ್ರೀ ಹಾಡಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವ ಮೂಲಕ ಪಾರದರ್ಶಕ ಆಡಳಿತ ಆಗುವಂತೆ ಗಮನ ಹರಿಸಬೇಕು ಎಂದು ಅನ್ವರ್ ಮಾಣಿಪ್ಪಾಡಿ ಮನವಿ ಮಾಡಿದ್ದರು.

Published On - 2:02 pm, Tue, 20 September 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ