ಬೆಂಗಳೂರು ಪ್ರೆಸ್ ಕ್ಲಬ್​ನಿಂದ ಅಗತ್ಯವುಳ್ಳ ಪತ್ರಕರ್ತರ ಮನೆಗೆ ಆಕ್ಸಿಜನ್ ಕಾನ್ಸ್ಂಟ್ರೇಟರ್ ಸೌಲಭ್ಯ

|

Updated on: May 24, 2021 | 9:36 PM

Bengaluru Press Club Medical Oxygen: ಪ್ರೆಸ್ ಕ್ಲಬ್​ ನೀಡುವ ಆಕ್ಸಿಜನ್ ಕಾನ್ಸ್ಂಟ್ರೇಟರ್​ನ್ನು ಉಚಿತವಾಗಿ ರೋಗಿಯ ಮನೆಗೆ ತಲುಪಿಸಲು ಸಮಾಜ ಸೇವಕ ಯತೀಶ್ ಮತ್ತು ಅವರ ಉತ್ಸಾಹಿ ತಂಡ ತಲುಪಿಸಲಿದೆ. ಅಗತ್ಯವುಳ್ಳವರು ಯತೀಶ್ ಅವರ ಸಂಪರ್ಕ ಸಂಖ್ಯೆ 9845900666 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು ಪ್ರೆಸ್ ಕ್ಲಬ್​ನಿಂದ ಅಗತ್ಯವುಳ್ಳ ಪತ್ರಕರ್ತರ ಮನೆಗೆ ಆಕ್ಸಿಜನ್ ಕಾನ್ಸ್ಂಟ್ರೇಟರ್ ಸೌಲಭ್ಯ
ಬೆಂಗಳೂರು ಪ್ರೆಸ್ ಕ್ಲಬ್​ ಆಕ್ಸಿಜನ್ ಕಾನ್ಸ್ಂಟ್ರೇಟರ್ ವ್ಯವಸ್ಥೆ ಮಾಡಿದೆ
Follow us on

ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತೊಮ್ಮೆ ಪತ್ರಕರ್ತರ ರಕ್ಷಣೆಗೆ ಮುಂದೆ ಬಂದಿದೆ. ಕೊವಿಡ್​ನ ಮೊದಲ ಅಲೆಯ ವೇಳೆ ಅಗತ್ಯವಿರುವವರಿಗೆ ಕ್ಲಬ್ ಫುಡ್ ಕಿಟ್ ನೀಡಿದ್ದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಈ ಬಾರಿ ಕೊವಿಡ್ ಲಸಿಕೆ ವಿತರಣೆಯ ವ್ಯವಸ್ಥೆ ಮಾಡಿದೆ. ಜತೆಗೆ ತನ್ನ ಸದಸ್ಯರ ಮತ್ತು ಅವರ ಕುಟುಂಬದ ಮಂದಿ ಉಸಿರಾಟದ ಸಮಸ್ಯೆಗೆ ಒಳಗಾದರೆ ಉಚಿತವಾಗಿ ಅವರ ಮನೆಗೆ ಆಕ್ಸಿಜನ್ ಒದಗಿಸುವ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಬಹುಮುಖ್ಯವಾಗಿ ಪ್ರೆಸ್ ಕ್ಲಬ್ ಸದಸ್ಯರಲ್ಲದ ಪತ್ರಕರ್ತರಿಗೂ ಈ ಸೌಲಭ್ಯವನ್ನು ಕಾರ್ಯಕಾರಿಣಿ ಸಮಿತಿ ವಿಸ್ತರಿಸಿದೆ. ಪ್ರೆಸ್ ಕ್ಲಬ್ ಸದಸ್ಯರ ಶಿಫಾರಸ್ಸು ಪಡೆದು ಬಂದಲ್ಲಿ ಮಾತ್ರ ಈ ಸೇವೆ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರ ಶಿಫಾರಸ್ಸು ಇದ್ದಲ್ಲಿ ಕ್ಲಬ್​ನ ಮ್ಯಾನೇಜರ್ ಮಂಜುನಾಥ್ (9845482307) ಅವರನ್ನು ಸಂಪರ್ಕಿಸಿದರೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್ ಹೆಚ್.ವಿ. ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

ಪ್ರೆಸ್ ಕ್ಲಬ್​ನ ಈ ಯೋಜನೆಗೆ ಯಶ್ ಟೆಲ್ ಸಂಸ್ಥೆಯ ಮಾಲಿಕ ಮಂಜುನಾಥ್ ಸಹಕಾರ ನೀಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ 4 ಆಕ್ಸಿಜನ್ ಕಾನ್ಸ್​ಂಟ್ರೇಟರ್ ಒದಗಿಸಿಕೊಟ್ಟಿದ್ದಾರೆ. ಆಂಬ್ಯುಲೆನ್ಸ್ ಯೋಜನೆಯನ್ನೂ ಜಾರಿಗೆ ತಂದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಪ್ರೆಸ್ ಕ್ಲಬ್​ ನೀಡುವ ಆಕ್ಸಿಜನ್ ಕಾನ್ಸ್ಂಟ್ರೇಟರ್​ನ್ನು ಉಚಿತವಾಗಿ ರೋಗಿಯ ಮನೆಗೆ ತಲುಪಿಸಲು ಸಮಾಜ ಸೇವಕ ಯತೀಶ್ ಮತ್ತು ಅವರ ಉತ್ಸಾಹಿ ತಂಡ ತಲುಪಿಸಲಿದೆ. ಅಗತ್ಯವುಳ್ಳವರು ಯತೀಶ್ ಅವರ ಸಂಪರ್ಕ ಸಂಖ್ಯೆ 9845900666 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಕೊವಿಡ್ ವಾರ್​ರೂಂನಲ್ಲಿ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಗೆ ಸ್ವತಃ ಬೆಡ್ ವ್ಯವಸ್ಥೆ ಮಾಡಿದ ಸಿಎಂ ಯಡಿಯೂರಪ್ಪ

ಕೊವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ ಸುಪ್ರೀಂಕೋರ್ಟ್
(Oxygen Constrictor Facility for the home of the needy from Bangalore Press Club)

Published On - 8:50 pm, Mon, 24 May 21