ಪಾದರಾಯನಪುರ ಗಲಭೆ ಪ್ರಕರಣ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 19, 2024 | 7:42 PM

2020 ರ ಏಪ್ರಿಲ್​.19 ರಂದು ಪಾದರಾಯನಪುರದಲ್ಲಿ ಕೋವಿಡ್ 19 ಸೋಂಕಿತರ ಪತ್ತೆ ಕಾರ್ಯದ ವೇಳೆ ಅಡ್ಡಿಪಡಿಸಿದ್ದ ಹಿನ್ನಲೆ 375 ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್ (High Court) ರದ್ದುಪಡಿಸಿ ಆದೇಶಿ ಹೊರಡಿಸಿದೆ.

ಪಾದರಾಯನಪುರ ಗಲಭೆ ಪ್ರಕರಣ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಪಾದರಾಯನಪುರ ಗಲಭೆ ಕೇಸ್
Follow us on

ಬೆಂಗಳೂರು, ಮಾ.19: ಪಾದರಾಯನಪುರ(Padarayanapura)ದಲ್ಲಿ ಕೊರೊನಾ ಸೋಂಕಿತರ ಪತ್ತೆ ಕಾರ್ಯದ ವೇಳೆ ಬಿಬಿಎಂಪಿ ಮತ್ತು ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನಲೆ 375 ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್ (High Court) ರದ್ದುಪಡಿಸಿ ಆದೇಶಿ ಹೊರಡಿಸಿದೆ.

2020 ರ ಏಪ್ರಿಲ್​.19 ರಂದು ಕೋವಿಡ್ 19 ಸೋಂಕಿತರ ಪತ್ತೆ ಕಾರ್ಯದ ವೇಳೆ ಅಡ್ಡಿಪಡಿಸಿ ಬೆದರಿಕೆ ಹಾಕಿ, ಟೇಬಲ್, ಟೆಂಟ್ ಕಿತ್ತೆಸೆದು ದಾಂಧಲೆ ನಡೆಸಿದ ಆರೋಪವಿತ್ತು. ನವಾಜ್ ಪಾಷಾ ಸೇರಿ 375 ಆರೋಪಿಗಳ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ ಮೆಂಡ್ ಕಾಯ್ದೆ, ಐಪಿಸಿ ಸೆಕ್ಷನ್​ 188 ಅಡಿ ಪ್ರಕರಣ ದಾಖಲಾಗಿತ್ತು. ಸಕ್ಷಮ ಪ್ರಾಧಿಕಾರಿ ಖಾಸಗಿ ದೂರು ದಾಖಲಿಸದ ಹಿನ್ನೆಲೆ ನ್ಯಾಯಮೂರ್ತಿ.ಕೆ.ನಟರಾಜನ್ ತಾಂತ್ರಿಕ ಕಾರಣಗಳಿಂದ ಕೇಸ್ ರದ್ದುಪಡಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ:ನಿಲ್ಲದ ಪಾದರಾಯನಪುರ ಗಲಭೆಯ ಕಿಂಗ್​​ಪಿನ್​​ ಪುಂಡಾಟ, ಪೊಲೀಸರಿಗೆ ತಲೆನೋವಾಗಿದ್ದ ರೌಡಿಶೀಟರ್ ಪರ್ವೇಜ್ ಕಾಲಿಗೆ ಬಿತ್ತು ಗುಂಡೇಟು

ಪಾದರಾಯನಪುರದ ಕೆಲ ಪುಂಡರು ಕೊರೊನಾ ಆರ್ಭಟದ ನಡುವೆ ಅಟ್ಟಹಾಸ ಮೆರೆದಿದ್ದು, ಬೆಂಗಳೂರಿಗೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಇಲ್ಲಿನ ಪಾದರಾಯನಪುರದಲ್ಲಿ ದುಷ್ಕರ್ಮಿಗಳಿಂದ ಗಲಭೆ ಪ್ರಕರಣ, ಹೆಲ್ತ್ ವರ್ಕರ್ಸ್​ ಮೇಲಿನ ದಾಳಿಯಿಂದ ಹೈಕೋರ್ಟ್ ಕಳವಳಗೊಂಡು. ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ವರದಿ ನೀಡಲು ಸಹ ಹೈಕೋರ್ಟ್ ಸೂಚನೆ ನೀಡಿತ್ತು. ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು? ಎಂದು ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಒಕಾ ಪ್ರಶ್ನೆ ಹಾಕಿದ್ದರು. ಜೊತೆಗೆ ರಾಜ್ಯ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿತ್ತು. ಇದೀಗ ತಾಂತ್ರಿಕ ಕಾರಣಗಳಿಂದ ಕೇಸ್ ರದ್ದುಪಡಿಸಿ ಹೈಕೋರ್ಟ್​ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Tue, 19 March 24