ನಿಲ್ಲದ ಪಾದರಾಯನಪುರ ಗಲಭೆಯ ಕಿಂಗ್​​ಪಿನ್​​ ಪುಂಡಾಟ, ಪೊಲೀಸರಿಗೆ ತಲೆನೋವಾಗಿದ್ದ ರೌಡಿಶೀಟರ್ ಪರ್ವೇಜ್ ಕಾಲಿಗೆ ಬಿತ್ತು ಗುಂಡೇಟು

ರೌಡಿಶೀಟರ್ ಪರ್ವೇಜ್, ಕಳೆದ ವರ್ಷ ಏಪ್ರಿಲ್ 19ರಂದು ನಡೆದಿದ್ದ ಪಾದರಾಯನಪುರ ಗಲಭೆ ಸೃಷ್ಟಿ ಕರ್ತ. ಅಂದು ರಾತ್ರಿ ಗಲಭೆ ಸೃಷ್ಟಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ. ನಾಲ್ಕು ತಿಂಗಳ ಬಳಿಕ ಚಿಂತಾಮಣಿಯಲ್ಲಿ ಸಿಕ್ಕಿ ಬಿದಿದ್ದ. ಪರ್ವೇಜ್ ಬಂಧಿಸಿ ಜೆಜೆ ನಗರ ಪೊಲೀಸರು ಕರೆತಂದಿದ್ದರು.

ನಿಲ್ಲದ ಪಾದರಾಯನಪುರ ಗಲಭೆಯ ಕಿಂಗ್​​ಪಿನ್​​ ಪುಂಡಾಟ, ಪೊಲೀಸರಿಗೆ ತಲೆನೋವಾಗಿದ್ದ ರೌಡಿಶೀಟರ್ ಪರ್ವೇಜ್ ಕಾಲಿಗೆ ಬಿತ್ತು ಗುಂಡೇಟು
ಪೊಲೀಸ್ ಫೈರಿಂಗ್​ನಿಂದ ಗಾಯಗೊಂಡಿರುವ ಆರೋಪಿ ಪರ್ವೇಜ್
Follow us
TV9 Web
| Updated By: ಆಯೇಷಾ ಬಾನು

Updated on:Jan 04, 2022 | 9:06 AM

ಬೆಂಗಳೂರು: ಪಾದರಾಯನಪುರ ಗಲಭೆಯ ಕಿಂಗ್ ಪಿನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರಿಗೆ ತಲೆನೊವ್ವಾಗಿದ್ದ, ಅಂದಿನ ಗಲಭೆ ಸೃಷ್ಟಿಕರ್ತ ರೌಡಿಶೀಟರ್ ಪರ್ವೇಜ್ ಒಂದರ ನಂತರ ಒಂದರಂತೆ ಅಟ್ಟಾಹಾಸ ಹೆಚ್ಚು ಮಾಡಿದ್ದ. ಸದ್ಯ ಪೊಲೀಸರು ರೌಡಿಶೀಟರ್ ಪರ್ವೇಜ್ ಹೆಡೆಮುರಿ ಕಟ್ಟಿದ್ದಾರೆ.

ರೌಡಿಶೀಟರ್ ಪರ್ವೇಜ್, ಕಳೆದ ವರ್ಷ ಏಪ್ರಿಲ್ 19ರಂದು ನಡೆದಿದ್ದ ಪಾದರಾಯನಪುರ ಗಲಭೆ ಸೃಷ್ಟಿ ಕರ್ತ. ಅಂದು ರಾತ್ರಿ ಗಲಭೆ ಸೃಷ್ಟಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ. ನಾಲ್ಕು ತಿಂಗಳ ಬಳಿಕ ಚಿಂತಾಮಣಿಯಲ್ಲಿ ಸಿಕ್ಕಿ ಬಿದಿದ್ದ. ಪರ್ವೇಜ್ ಬಂಧಿಸಿ ಜೆಜೆ ನಗರ ಪೊಲೀಸರು ಕರೆತಂದಿದ್ದರು. ಬಳಿಕ ಜೈಲಿನಿಂದ ಹೊರ ಬಂದ್ರೂ ರೌಡಿ ಪರ್ವೇಜ್ ಶೋಕಿ ನಿಂತಿರಲಿಲ್ಲ. ಮೈಸೂರು ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದ. ಶೋಕಿಗೊಸ್ಕರ ಕಂಡ ಕಂಡವರಿಗೆ ಡ್ರಗರ್ ತೋರಿಸಿ ರಾಬರಿ ಮಾಡ್ತಿದ್ದ.

ಈ ಘಟನೆ ಸಂಬಂಧ ಪೊಲೀಸರು ಪರ್ವೇಜ್ನನ್ನು ಅರೆಸ್ಟ್ ಮಾಡಿದ್ದು ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಬೆಂಗಳೂರು ಪೊಲೀಸರು ಗುಂಡು ಹಾರಿಸಿದ್ದಾರೆ. ತಲಘಟ್ಟಪುರದ 2ನೇ ಹಂತದಲ್ಲಿ ಆರೋಪಿ ಪರ್ವೇಜ್ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಸಿದ್ದಾಪುರ ಠಾಣೆ ಇನ್ಸ್ಪೆಕ್ಟರ್ ಆಂತೋಣಿರಾಜ್ ಗುಂಡು ಹಾರಿಸಿದರು. ಗಾಯಾಳು ಪರ್ವೇಜ್ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಂಚನಾಮೆ ನಡೆಸಲು ತೆರಳಿದ್ದ ವೇಳೆ ಹಲ್ಲೆ ಮಾಡಿದ್ದ ಆರೋಪಿಯು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಡಿಸೆಂಬರ್ 30ರಂದು ಲಾಲ್ಬಾಗ್ ಬಳಿ ಬೈಕ್ನಲ್ಲಿ ತನ್ನ ಸಹಚರನ ಜೊತೆ ಬಂದು ಮೊಬೈಲ್ ಕಿತ್ತುಕೊಂಡಿದ್ದ. ಸುಲಿಗೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ಸಂಬಂಧ ನಿನ್ನೆ (ಜನವರಿ 2) ರೌಡಿಶೀಟರ್ ಪರ್ವೇಜ್ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ ಡ್ರಾಗರ್ ಎಸೆದ ಸ್ಥಳದ ಪಂಚನಾಮೆ ನಡೆಸಲು ಮುಂದಾಗಿದ್ದರು. ಈ ವೇಳೆ ಕಾನ್ಸ್ಟೆಬಲ್ ಪರಮೇಶ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪರ್ವೇಜ್ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಪರ್ವೇಜ್ನ ಎಡಗಾಲಿಗೆ ಇನ್ಸ್ಪೆಕ್ಟರ್ ಆಂತೋಣಿರಾಜ್ ಗುಂಡು ಹಾರಿಸಿದರು. ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಕಾನ್ಸ್ಟೆಬಲ್ ಹಾಗೂ ಆರೋಪಿ ಪರ್ವೇಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ತಪ್ಪಿಸಿಕೊಳ್ಳಲು ಯತ್ನಿಸಿದ ಸುಲಿಗೆ ಆರೋಪಿಯ ಕಾಲಿಗೆ ಬೆಂಗಳೂರು ಪೊಲೀಸರ ಗುಂಡು

Published On - 7:59 am, Tue, 4 January 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್