ಪ್ರಧಾನಿ ಮೋದಿ ನೀಡಿದ ‘ಮಿತವ್ಯಯ ಮಂತ್ರ’ದ ಹಿಂದಿನ ಲೆಕ್ಕಾಚಾರವೇನು? 23 ಲಕ್ಷ ಕೋಟಿ ರೂ. ಉಳಿತಾಯಕ್ಕೆ ಸಜ್ಜಾಗುತ್ತಿದೆ ಭಾರತ!

ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಚಿನ್ನ ಖರೀದಿ ನಿಲ್ಲಿಸಲು, ಇಂಧನ ಬಳಕೆ ಕಡಿಮೆ ಮಾಡಲು ಮತ್ತು ವಿದೇಶಿ ಪ್ರವಾಸಕ್ಕೆ ಕಡಿವಾಣ ಹಾಕಲು ಮನವಿ ಮಾಡಿದ್ದಾರೆ. ಕುಸಿಯುತ್ತಿರುವ ವಿದೇಶಿ ವಿನಿಮಯ ಸಂಗ್ರಹ ಮತ್ತು ಹೆಚ್ಚುತ್ತಿರುವ ಕರೆಂಟ್ ಅಕೌಂಟ್ ಡೆಫಿಸಿಟ್‌ನಂತಹ ಸವಾಲುಗಳನ್ನು ಎದುರಿಸಲು ಈ ಕ್ರಮಗಳು ದೇಶಕ್ಕೆ 23 ಲಕ್ಷ ಕೋಟಿ ರೂಪಾಯಿ ಉಳಿತಾಯ ಮಾಡುವ ಗುರಿಯನ್ನು ಹೊಂದಿವೆ. ಇದು ದೇಶದ ಆರ್ಥಿಕ ಸ್ಥಿರತೆಗೆ ಸಹಕಾರಿ.

ಪ್ರಧಾನಿ ಮೋದಿ ನೀಡಿದ ಮಿತವ್ಯಯ ಮಂತ್ರದ ಹಿಂದಿನ ಲೆಕ್ಕಾಚಾರವೇನು? 23 ಲಕ್ಷ ಕೋಟಿ ರೂ. ಉಳಿತಾಯಕ್ಕೆ ಸಜ್ಜಾಗುತ್ತಿದೆ ಭಾರತ!
ಸಾಂದರ್ಭಿಕ ಚಿತ್ರ

Updated on: May 12, 2026 | 2:39 PM

ದೆಹಲಿ, ಮೇ.12: ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ನೀಡಿರುವ ಆರ್ಥಿಕ ಶಿಸ್ತಿನ ಕರೆ ಕೇವಲ ಸಲಹೆಯಲ್ಲ, ಅದು 23 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಉಳಿತಾಯದ ಮಾಸ್ಟರ್ ಪ್ಲಾನ್. ಜಾಗತಿಕ ಯುದ್ಧ ಮತ್ತು ಅನಿಶ್ಚಿತತೆಯ ನಡುವೆ ಭಾರತದ ವಿದೇಶಿ ವಿನಿಮಯ ಸಂಗ್ರಹವನ್ನು ರಕ್ಷಿಸಲು ಪ್ರಧಾನಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಆರ್‌ಬಿಐ ದತ್ತಾಂಶದಂತೆ, ಫೆಬ್ರವರಿಯಲ್ಲಿ 728 ಶತಕೋಟಿ ಡಾಲರ್ ಇದ್ದ ವಿದೇಶಿ ವಿನಿಮಯ ಸಂಗ್ರಹವು ಏಪ್ರಿಲ್ ವೇಳೆಗೆ 691 ಶತಕೋಟಿ ಡಾಲರ್ಗೆ ಕುಸಿದಿದೆ. ರಫ್ತಿಗಿಂತ ಆಮದು ಹೆಚ್ಚಾಗುತ್ತಿರುವುದು (Current Account Deficit – CAD) ಇದಕ್ಕೆ ಮುಖ್ಯ ಕಾರಣ. 2026ರ ವೇಳೆಗೆ ಈ ಕೊರತೆಯು 8.05 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಬಹುದು ಎಂದು ಐಎಂಎಫ್ ಎಚ್ಚರಿಸಿದೆ. ಇದನ್ನು ತಡೆಯಲು ಮೋದಿ ಅವರು ಮೂರು ಪ್ರಮುಖ ವಲಯಗಳ ಮೇಲೆ ಕಣ್ಣಿಟ್ಟಿದ್ದಾರೆ.

ಇಲ್ಲಿದೆ ನೋಡಿ ಸಂಪೂರ್ಣ ವಿಡಿಯೋ


ಭಾರತವು ವಿಶ್ವದ 2ನೇ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರ. 2026ರಲ್ಲಿ 6.75 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಚಿನ್ನ ಖರೀದಿಸಲು ಡಾಲರ್ ಬಳಸುವುದರಿಂದ ರೂಪಾಯಿ ಮೌಲ್ಯ ಕುಸಿಯುತ್ತದೆ. ಚಿನ್ನದ ಖರೀದಿ ಕಡಿಮೆ ಮಾಡಿದರೆ 2 ರಿಂದ 3 ಲಕ್ಷ ಕೋಟಿ ರೂ. ಉಳಿತಾಯ ಸಾಧ್ಯ. ಭೌತಿಕ ಚಿನ್ನದ ಬದಲು ಸಾವರಿನ್ ಗೋಲ್ಡ್ ಬಾಂಡ್ (SGB) ಕಡೆಗೆ ಜನರನ್ನು ಸೆಳೆಯುವುದು ಸರ್ಕಾರದ ಉದ್ದೇಶ.

ಇದನ್ನೂ ಓದಿ: ಆನ್​​ಲೈನ್​​ ತರಗತಿಗೆ ಅಪಸ್ವರ: ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ

ಭಾರತವು ವಾರ್ಷಿಕವಾಗಿ 17 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದ ಯುದ್ಧಗಳಿಂದಾಗಿ ತೈಲ ಬೆಲೆ ಏರುತ್ತಿರುವುದು ಆರ್ಥಿಕತೆಗೆ ಹೊರೆಯಾಗಿದೆ. ವರ್ಕ್ ಫ್ರಮ್ ಹೋಮ್, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಇಂಧನ ಮಿತಬಳಕೆಯ ಮೂಲಕ ಡಾಲರ್ ಹೊರಹರಿವನ್ನು ತಗ್ಗಿಸುವುದು. ಕಳೆದ ವರ್ಷ 1.83 ಲಕ್ಷ ಕೋಟಿ ರೂ. ಮೌಲ್ಯದ ಎಣ್ಣೆ ಆಮದು ಮಾಡಿಕೊಳ್ಳಲಾಗಿದೆ. ಇದರ ಮಿತಬಳಕೆಯಿಂದ ಆರ್ಥಿಕ ಮತ್ತು ದೈಹಿಕ ಆರೋಗ್ಯ ಎರಡೂ ಸುಧಾರಿಸುತ್ತದೆ. 1.34 ಲಕ್ಷ ಕೋಟಿ ರೂ. ಮೌಲ್ಯದ ರಸಗೊಬ್ಬರ ಆಮದನ್ನು ಸಾವಯವ ಕೃಷಿಯ ಮೂಲಕ ಕಡಿಮೆ ಮಾಡಲು ಪ್ರಧಾನಿ ಕರೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Tue, 12 May 26

Follow Us