ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ: 3,991 ಹುದ್ದೆಗಳಿಗೆ 4.54 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು; ಇಂಜಿನಿಯರಿಂಗ್‌, ಪಿಎಚ್‌ಡಿ ಪದವೀಧರರಿಂದಲೂ ಅರ್ಜಿ

Police Constable Recruitment: ರಾಜ್ಯದಲ್ಲಿ 3,991 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಆಗಸ್ಟ್ 2 ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಪಿಎಚ್‌ಡಿ, ಇಂಜಿನಿಯರಿಂಗ್ ಪದವೀಧರರು ಸೇರಿ 4.54 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಒಟ್ಟು ಹುದ್ದೆಗಳ ಪೈಕಿ 3,395 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಪ್ರದೇಶಕ್ಕೆ ಹಾಗೂ 596 ಹುದ್ದೆಗಳುಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿವೆ ಎನ್ನಲಾಗಿದೆ.

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ: 3,991 ಹುದ್ದೆಗಳಿಗೆ 4.54 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು; ಇಂಜಿನಿಯರಿಂಗ್‌, ಪಿಎಚ್‌ಡಿ ಪದವೀಧರರಿಂದಲೂ ಅರ್ಜಿ
ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ

Updated on: Jul 31, 2026 | 3:55 PM

ಬೆಂಗಳೂರು, ಜುಲೈ 31: ಕರ್ನಾಟಕ ಸರ್ಕಾರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 3,991 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ 2ರಂದು ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ನಡೆಯಲಿದ್ದು, ಬರೋಬ್ಬರಿ 4,54,536ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಕನಿಷ್ಠ ಅರ್ಹತೆಯಾಗಿದ್ದರೂ, ಪದವೀಧರರು, ಸ್ನಾತಕೋತ್ತರ ಪದವೀಧರರು, ಇಂಜಿನಿಯರಿಂಗ್‌ ಪದವೀಧರರು ಹಾಗೂ ಪಿಎಚ್‌ಡಿ ಪದವೀಧರರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರೋದು ಕಂಡುಬಂದಿದೆ.

ಒಟ್ಟು 7,925 ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಘೋಷಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಪ್ರದೇಶಗಳಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಒಟ್ಟು ಹುದ್ದೆಗಳ ಪೈಕಿ 3,395 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಪ್ರದೇಶಕ್ಕೆ ಹಾಗೂ 596 ಹುದ್ದೆಗಳುಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿವೆ. ಇದರ ಜೊತೆಗೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP), ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF), ವಿಶೇಷ ಮೀಸಲು ಪೊಲೀಸ್ ಪಡೆ (SRPF), ಸಿಟಿ ಆರ್ಮ್ಡ್ ರಿಸರ್ವ್ (CAR) ಹಾಗೂ ಜಿಲ್ಲಾ ಆರ್ಮ್ಡ್ ರಿಸರ್ವ್ (DAR) ಸೇರಿ ಇತರೆ ವಿಭಾಗಗಳ 3,934 ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಆರಂಭಗೊಂಡಿದ್ದು, ಅವುಗಳ ಪರೀಕ್ಷೆಯೂ ಶೀಘ್ರದಲ್ಲೇ ನಡೆಯಲಿದೆ. ಹೀಗೆ, ರಾಜ್ಯ ಸರ್ಕಾರ ಸಿವಿಲ್ ಹಾಗೂ ಇತರೆ ವಿಭಾಗಗಳನ್ನು ಸೇರಿ ಒಟ್ಟು 7,925 ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿಯನ್ನು ಘೋಷಿಸಿದೆ.

ಇದನ್ನೂ ಓದಿ: ಪೊಲೀಸ್ ಪರೀಕ್ಷೆಗೆ ಟಫ್ ರೂಲ್ಸ್: ಮಾಂಗಲ್ಯಸರ, ಜನಿವಾರಕ್ಕೆ ಓಕೆ; ಕಳ್ಳದಾರಿ ಹಿಡಿದ್ರೆ ಲೈಫ್‌ಟೈಮ್ ಡಿಬಾರ್

ನಿವೃತ್ತ ಐಪಿಎಸ್‌ ಅಧಿಕಾರಿಯೊಬ್ಬರ ಪ್ರಕಾರ, ಸರ್ಕಾರಿ ಉದ್ಯೋಗದ ಮೇಲಿನ ಆಕರ್ಷಣೆ ಹೆಚ್ಚಾಗಿದೆ. ಈಗ ವೇತನ ಶ್ರೇಣಿ ಸುಧಾರಿಸಿರುವುದರಿಂದ ಮಹಾನಗರಗಳ ಯುವಕರೂ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅನೇಕ ಇಂಜಿನಿಯರ್‌ಗಳು ಹಾಗೂ ಪಿಎಚ್‌ಡಿ ಪದವೀಧರರೂ ಸರ್ಕಾರಿ ನೌಕರಿಗಾಗಿ ಈ ಹುದ್ದೆಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ತಿಳಿಸಿರೋದಾಗಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us