ಬೆಂಗಳೂರು: ರಾಜಧಾನಿಯ ಸಿಸಿಬಿ ಪೊಲೀಸರಿಂದ (bangalore ccb police) ಪ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ (pre-activated sims) ಮೂಲಕ ಕ್ಯಾಬ್ ಆಪರೇಟಿವ್ ಸಂಸ್ಥೆಗಳಿಗೆ ವಂಚಿಸುತಿದ್ದ ಅರೋಪಿಗಳು ಅರೆಸ್ಟ್ ಆಗಿದ್ದಾರೆ. ಅರೋಪಿಗಳಿಂದ 1,055 ಸಿಮ್ ಕಾರ್ಡ್, 15 ಮೊಬೈಲ್, 4 ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು (miscreants) ಎರಡು ಮಾದರಿಯಲ್ಲಿ ಅಪರಾಧ ಎಸಗುತ್ತಿದ್ದರು. ಒಂದು – ಊಬರ್, ರ್ಯಾಪಿಡೊ ಆ್ಯಪ್ಗಳ ಲೂಪ್ ಪತ್ತೆ ಮಾಡಿಕೊಂಡಿದ್ದರು. ವಿವಿಧ ಸಿಮ್ ನಂಬರ್ ಹಾಗೂ ಆ್ಯಪ್ ಮೂಲಕ ಫೇಕ್ ರೇಡ್ ಗಳನ್ನು ಮಾಡಿಸುತ್ತಿದ್ದರು. ನಂತ್ರ ದಿನಕ್ಕೆ ಇಂತಿಷ್ಟು ರೇಡ್ ಗಳನ್ನು ಮಾಡಿದ್ರೆ ಇನ್ಸೆಂಟಿವ್ ಪಡೆಯುತಿದ್ರು. ಕಾರುಗಳು ಇಲ್ಲಾ… ಡ್ರೈವರ್ ಗಳು ಇಲ್ಲಾ. ಅಸಲಿಗೆ ಟ್ರಿಪ್ ಗಳೂ ಇಲ್ಲಾ! ಆದ್ರೆ ಸಾಫ್ಟ್‌ವೇರ್ ನಲ್ಲಿ ಮಾತ್ರ ಟ್ರಿಪ್ ಮಾಡಿದ ರೀತಿ ಬಿಂಬಿಸಲಾಗುತಿತ್ತು! ನಂತರ ಕಂಪನಿಗಳು ನೀಡುವ ಇನ್ಸೆಂಟಿವ್ ಗಳನ್ನು ಪಡೆದು ವಂಚಿಸುತಿದ್ರು.
ಇನ್ನು ಎರಡನೆಯ ರೀತಿ ಅಪರಾಧವೆಂದರೆ:
ಸಾರ್ವಜನಿಕರು ಸಿಮ್ ಕಾರ್ಡ್ ಕೊಂಡಾಗ ನೀಡಿದ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಸಾರ್ವಜನಿಕರು ನೀಡಿದ ದಾಖಲಾತಿ ಮೂಲಕವೇ ಸಿಮ್ ಖರೀದಿಸುತ್ತಿದ್ದರು. ನಂತರ ಆ ಸಿಮ್ ಗಳನ್ನು ಅಕ್ರಮ ಎಸಗಲು ಬಳಕೆ ಮಾಡ್ತಿದ್ದರು. ಈ ರೀತಿ ಸಾರ್ವಜನಿಕರ ಐಡೆಂಟಿಟಿ ಮಿಸ್ ಯೂಸ್ ಮಾಡಲಾಗುತ್ತಿತ್ತು.
ಇದನ್ನೂ ಓದಿ: ಇದನ್ನೂ ಓದಿ: 40 ಸೆಕೆಂಡ್ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಚರರ ಕೃತ್ಯ
ಅರೋಪಿಗಳ ಪೈಕಿ ಒರ್ವ ಫೈನಾನ್ಸ್ ಆಫೀಸ್ ನಲ್ಲಿ ಕೆಲಸ ಮಾಡ್ತಿದ್ದ… ಆತ ಹಾಗೂ ವೋಡಫೋನ್ (WI) ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಗಳು ದಾಖಲಾತಿ ಸಂಗ್ರಹಿಸಿ ಸಿಮ್ ಖರೀದಿ ಮಾಡ್ತಿದ್ರು.
ಬಂಧಿತ ಆರೋಪಿಗಳು:
1. ಮನೋಜ್ ಕುಮಾರ್ – ಟ್ರಾವಲ್ಸ್ ಕಂಪನಿಗೆ ಕಾರುಗಳು ಅಟ್ಯಾಚ್ ಮಾಡಿದ್ದ ಅರೋಪಿ, 2. ಸಚಿನ್ – ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ಮತ್ತು, 3. ಶಂಕರ್ – ಸಿಮ್ ಕಾರ್ಡ್ ಕಂಪನಿಯಲ್ಲಿ ಕೆಲಸ ಮಾಡಿ ಪ್ರೀ ಆಕ್ಟಿವ್ ಸಿಮ್ ನೀಡ್ತಿದ್ದವ
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:46 pm, Tue, 6 June 23