
ಬೆಂಗಳೂರು, ಜ.5: ಬೆಂಗಳೂರಿಗರ ಬಹುದೊಡ್ಡ ಬೇಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎನ್ನುವ ಸಾಧ್ಯತೆ ಇದೆ. ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ (Greenfield Expressway) ಅಂತಿಮ ಸಂಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಸಂಪುಟವು 2026ರಲ್ಲಿ ಈ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದೆ. 2023ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಬೇಕಿತ್ತು. ಪುಣೆ-ಬೆಂಗಳೂರು NH48 ನಲ್ಲಿನ ದೀರ್ಘಕಾಲದ ದಟ್ಟಣೆ ಇದು ಬಹುದೊಡ್ಡ ಪರಿಹಾರವಾಗಲಿದೆ. ಇನ್ನು ಈ ಯೋಜನೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಲವು ಭಾರೀ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಯೋಜನೆಗೆ ಕೇಂದ್ರದಿಂದ ಅಂತಿಮ ಅನುಮತಿ ಇನ್ನೂ ಸಿಕ್ಕಿಲ್ಲ. ಸಚಿವ ಸಂಪುಟದ ಅನುಮೋದನೆಯ ನಂತರವೇ ಭೂಸ್ವಾಧೀನ ಪ್ರಾರಂಭವಾಗಬಹುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಇನ್ನು ಈ ರಸ್ತೆಯ ಕಾರ್ಯಯೋಜನೆಯ ಪ್ರಕ್ರಿಯೆಗಾಗಿ ಸುಮಾರು ಎರಡು ವರ್ಷಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪುಣೆ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮತ್ತು ಹೆಚ್ಚಿನ ಸಂಚಾರ ದಟ್ಟಣೆ ಇರುವ NH48ನಲ್ಲಿ ಭಾರಿ ಸಂಚಾರ ಹೊರೆ ಇರುವುದರಿಂದ ಪ್ರಸ್ತಾವಿತ ಕಾರಿಡಾರ್ ಬೇಕು ಎಂದು ಪರಿಗಣಿಸಲಾಗಿದೆ. ಹೆದ್ದಾರಿಯಲ್ಲಿ ನಿರಂತರ ನಿರ್ಮಾಣ ಕಾರ್ಯವು ಸಂಚಾರವನ್ನು ಮತ್ತಷ್ಟು ನಿಧಾನಗೊಳಿಸಿದೆ, ಪ್ರಯಾಣಿಕರು ಮತ್ತು ಸರಕು ಸಾಗಣೆದಾರರಿಗೆ ಪ್ರಯಾಣದ ಸಮಯವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?
700 ಕಿ.ಮೀ ಉದ್ದದ, ಆರು ಪಥಗಳ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿದ ನಂತರ ಪ್ರಯಾಣದ ಸಮಯವನ್ನು ಕಡಿಮೆ ಆಗುತ್ತದೆ. ಇದರಿಂದಾಗಿ ವಾಹನ ಚಾಲಕರು ಪುಣೆ ಹೊರ ವರ್ತುಲ ರಸ್ತೆಯಿಂದ ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಅನ್ನು ಕೇವಲ ಏಳು ಗಂಟೆಗಳಲ್ಲಿ ತಲುಪಬಹುದು. ಸಚಿವ ಸಂಪುಟದ ಅನುಮೋದನೆ ದೊರೆತರೆ ಯೋಜನೆ ತಕ್ಷಣದಿಂದ ಆರಂಭವಾಗುತ್ತದೆ. ಭೂಸ್ವಾಧೀನ, ರಸ್ತೆ ಜೋಡಣೆ, ಅಡಿಪಾಯ ಹಾಕುವ ಕೆಲಸಗಳು ನಡೆಯಲಿದೆ. ಕೆಲವೇ ವರ್ಷಗಳಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಇದೊಂದು ಮಹತ್ವದ ಯೋಜನೆ ಆಗಿದೆ. ಇದರಿಂದ ಪುಣೆ-ಬೆಂಗಳೂರು ಕಾರಿಡಾರ್ನಿಂದ ನಿವಾಸಿಗಳು ಮತ್ತು ರಸ್ತೆ ಬಳಕೆದಾರರಿಗೆ ಇದು ಹೆಚ್ಚು ಸಹಾಯವಾಗಲಿದೆ. 2026 ರಲ್ಲಿ ನಿರೀಕ್ಷೆಯಂತೆ ಅನುಮೋದನೆ ದೊರೆತರೆ, ದೀರ್ಘಕಾಲದಿಂದ ವಿಳಂಬವಾಗಿದ್ದ ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಕಾರ್ಯನಿರ್ವಹಿಸಲಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Mon, 5 January 26