
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆ ಸರ ಕದಿಯಲು ಬಂದ ಕಳ್ಳರು(Chain Snatching) ಮಹಿಳೆಯ ಕೈಯನ್ನೇ ಕತ್ತರಿಸಿರುವ ಘಟನೆ ನಡೆದಿದೆ. ಸದ್ಯ ಪೊಲೀಸರು ಆರೋಪಿಗಳನ್ನು(Puttenahalli Police) ಪತ್ತೆ ಮಾಡಿ ಬಂಧಿಸಿದ್ದಾರೆ. ಮಾರ್ಚ್ 6 ರಂದು ಪುಟ್ಟೇನಹಳ್ಳಿ ಲೇಕ್ ಬಳಿ ನಡೆದಿದ್ದ ಘಟನೆ ಸಂಬಂಧಿಸಿ ಪೊಲೀಸರು ಈಗ ಆರೋಪಿಗಳನ್ನು ಬಂಧಿಸಿದ್ದಾರೆ.
ದೇವಸ್ಥಾನಕ್ಕೆ ಹೋಗ್ತಿದ್ದ ಮಹಿಳೆ ಆಭರಣದ ಮೇಲೆ ಕಣ್ಣಾಕಿದ ಖದೀಮರು ಬೈಕ್ನಲ್ಲಿ ಫಾಲೋ ಮಾಡಿಕೊಂಡು ಬಂದು ಚಿನ್ನ ಎಗರಿಸಲು ಸ್ಕೆಚ್ ಹಾಕಿದ್ದರು. ಈ ವೇಳೆ ಪ್ರತಿರೋಧ ಒಡ್ಡಿದಕ್ಕೆ ಮಹಿಳೆಯ ಕೈ ಕತ್ತರಿಸಿದ್ದರು. ಆದರೂ ಚಿನ್ನದ ಸರ ಕಳ್ಳರ ಪಾಲಾಗಲು ಬಿಡದ ಮಹಿಳೆ ನೋವಿನಲ್ಲೂ ಖದೀಮರ ವಿರುದ್ಧ ಹೋರಾಡಿದ್ದರು. ಬಳಿಕ ಚಿನ್ನದ ಸರ ತಮಗೆ ಸಿಗುವುದಿಲ್ಲ ಎಂದು ಕೊಂಡ ಖದೀಮರು ಬರಿಗೈಯಲ್ಲಿ ಎಸ್ಕೇಪ್ ಆಗಿದ್ದದ್ದರು. ಸದ್ಯ ಈಗ ಪುಟ್ಟೇನಹಳ್ಳಿ ಪೊಲೀಸರು ಖದೀಮರನ್ನು ಬಂಧಿಸಿದ್ದಾರೆ. ಮನೋಜ್ ಕುಮಾರ್ ಮತ್ತು ಫ್ರಾಂಕ್ಲಿನ್ ಬಂಧಿತ ಆರೋಪಿಗಳು. ವಿಚಾರಣೆ ವೇಳೆ ಮನೋಜ್ ಈ ಹಿಂದೆ ಕೊಲೆ ಕೇಸ್ ನಲ್ಲಿ ಭಾಗಿಯಾಗಿರೋದು ಪತ್ತೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯ ಬರ್ಬರ ಕೊಲೆ; ನಾಲ್ವರಿಂದ ಅತ್ಯಾಚಾರ ಶಂಕೆ
ಚಾಮರಾಜನಗರ: ಮಗಳ ಮೃತದೇಹದ ಎದುರು ಆಕ್ರಂಧನ ವ್ಯಕ್ತಪಡಿಸುತ್ತಿರುವ ಮೃತ ಶಾಲಿನಿ (22) ತಂದೆ ಶಾಂತಪ್ಪ ಮತ್ತು ಚಿಕ್ಕಮ್ಮ ಚಿನ್ನಮ್ಮ. ಮರಣೋತ್ತರ ಪರೀಕ್ಷೆ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ, ಶವ ಪರೀಕ್ಷೆಗೆ ಅನುವು ಮಾಡಿಕೊಡಿ ಎನ್ನುತ್ತಿರುವ ಪೊಲೀಸರು. ಇದೆಲ್ಲ ಕಂಡುಬಂದಿದ್ದು ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ. ಕಳೆದ ಒಂಬತ್ತು ತಿಂಗಳ ಹಿಂದೆ ಮಾದಾಪಟ್ಟಣ ಗ್ರಾಮದ ಶಾಲಿನಿ ಅವರನ್ನ ಮೂಡ್ನಾಕೂಡು ಗ್ರಾಮದ ಮಹೇಶ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಸರಳ ಮದುವೆ ಮಾಡಿಕೊಟ್ಟಿದ್ದ ಶಾಂತಪ್ಪ 50 ಸಾವಿರ ರೂಪಾಯಿ ವರದಕ್ಷಿಣೆ ಸಹ ನೀಡಿದ್ದನಂತೆ. ಆದರೆ ಪತಿ ಮಹೇಶ್ ಹಾಗೂ ಆತನ ಪೋಷಕರು ಶಾಲಿನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಂತೆ. ಈ ವಿಚಾರವಾಗಿ ಆಗಾಗ ಗಲಾಟೆಯಾಗಿ ಶಾಲಿನಿ ತವರು ಮನೆಗೆ ಹೋಗಿದ್ದಳಂತೆ. ಆದರೆ ಶನಿವಾರ ಬೆಳಗ್ಗೆ ಗ್ರಾಮದ ತಮ್ಮದೇ ಜಮೀನಿನ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದ್ದು ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:46 am, Sun, 26 March 23