Bengaluru News: ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ

ವ್ಯಕ್ತಿಯೊಬ್ಬ ರ್ಯಾಪಿಡೋ ಬೈಕ್​ ಸೇವೆ ಪಡೆದಿದ್ದಾನೆ. ಬಳಿಕ ಅದೇ ವ್ಯಕ್ತಿ ಅನಾರೋಗ್ಯದ ಕಾರಣ ನೀಡಿ ಚಾಲಕನಿಂದ ಹಣ ಪಡೆದು ವಂಚಿಸಿದ್ದಾನೆ. ಈ ಘಟನೆ ಬೆಂಗಳೂರಿನ ಮೈಕೋಲೇಔಟ್​ನಲ್ಲಿ ನಡೆದಿದೆ.

Bengaluru News: ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ
ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ (ಸಾಂದರ್ಭಿಕ ಚಿತ್ರ)
Edited By: Rakesh Nayak Manchi

Updated on: Jul 28, 2023 | 10:23 PM

ಬೆಂಗಳೂರು, ಜುಲೈ 28: ಕಷ್ಟಕ್ಕೆ ಮರುಗಿದ ರ್ಯಾಪಿಡೋ (Rapido) ಚಾಲಕನಿಗೇ ಗ್ರಾಹಕನೊಬ್ಬ ವಂಚನೆ ಎಸಗಿದ ಘಟನೆ ನಗರದ ಮೈಕೋಲೇಔಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನಗೆ ಗ್ರಾಹಕನೊಬ್ಬ ನಾಲ್ಕು ಸಾವಿರ ರೂಪಾಯಿ ವಂಚಿಸಿರುವುದಾಗಿ ಆರೋಪಿಸಿ ರ್ಯಾಪಿಡೋ ಬೈಕ್ ಚಾಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಣವೀರ್ ಎಂಬಾತ ರ್ಯಾಪಿಡೋ ಬೈಕ್ ಸರ್ವೀಸ್ ಪಡೆದಿದ್ದಾನೆ. ನಂತರ ಬೈಕ್ ಚಾಲಕ ಮಣಿಕಂಠನ ಬಳಿ ತನ್ನ ಪತ್ನಿಯ ಅನಾರೋಗ್ಯದ ನೆಪ ಹೇಳಿದ್ದ ರಣವೀರ್, ಆಸ್ಪತ್ರೆಗೆ ದಾಖಲಿಸಿದ್ದ ಬಿಲ್ ಪಾವತಿಗೆ ಹಣ ಬೇಕಿದೆ. ನಾಲ್ಕು ಸಾವಿರ ಹಣ ಕೊಡಿ ಆನಂತರ ನೀಡುತ್ತೇನೆ ಎಂದಿದ್ದಾನೆ.

ಇದನ್ನೂ ಓದಿ: Online cheating: ಮಿಲಿಟರಿಯಲ್ಲಿದ್ದೇನೆ ಎಂದು ವಂಚಿಸಿದ ವ್ಯಕ್ತಿ- ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿ ವಂಚನೆಗೊಳಗಾದ ಮನೆ ಮಾಲೀಕ!

ಗ್ರಾಹಕನ ಸಂಕಷ್ಟಕ್ಕೆ ಮರುಗಿದ ಮಣಿಕಂಠ, ನಾಲ್ಕು ಸಾವಿರ ರೂಪಾಯಿ ಕಳುಹಿಸಿದ್ದಾರೆ. ಇದಾದ ಕೆಲ ಸಮಯದ ನಂತರ ರಣವೀರ್, ಮಣಿಕಂಠನಿಗೆ ಹಣ ಪಾವತಿಯ ಸ್ಕ್ರೀನ್ ಶಾಟ್​ವೊಂದನ್ನು ಕಳುಹಿಸಿದ್ದಾನೆ. ಆದರೆ ದುಡ್ಡು ಬಂದಿರಲಿಲ್ಲ. ಆತ ಕಳುಹಿಸಿದ್ದು ನಕಲಿ ಸ್ಕ್ರೀನ್ ಶಾಟ್ ಎಂದು ಅರಿತ ಮಣಿಕಂಠ, ರಣವೀರ್​ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಮಣಿಕಂಠ ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದಾನೆ.

ವಂಚನೆ ಸಂಬಂಧ ರ್ಯಾಪಿಡೋ ಚಾಲಕ ಮಣಿಕಂಠ, ಮೈಕೋ‌ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us