Online cheating: ಮಿಲಿಟರಿಯಲ್ಲಿದ್ದೇನೆ ಎಂದು ವಂಚಿಸಿದ ವ್ಯಕ್ತಿ- ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿ ವಂಚನೆಗೊಳಗಾದ ಮನೆ ಮಾಲೀಕ!

Kalaburagi; ವಂಚನೆಗೊಳಗಾಗಲು ನಾಮುಂದು ತಾಮುಂದು ಎಂದು ತಹತಹಿಸುವವರು ಇರೋವರಗೆ ವಂಚನೆ ಮಾಡೋರು ಇದ್ದೇ ಇರುತ್ತಾರೆ! ಹೀಗಾಗಿ ಜನರು ಹೆಚ್ಚು ಜಾಗುರೂಕತೆಯಿಂದ ಇರಬೇಕು. ಆದರು ಕೂಡಾ ಆವಾಗಾವಾಗ ...

Online cheating: ಮಿಲಿಟರಿಯಲ್ಲಿದ್ದೇನೆ ಎಂದು ವಂಚಿಸಿದ ವ್ಯಕ್ತಿ- ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿ ವಂಚನೆಗೊಳಗಾದ ಮನೆ ಮಾಲೀಕ!
Online cheating ನಕಲಿ ಆರ್ಮಿ ಆಫೀಸರ್ ಹೆಸರಲ್ಲಿ ವಂಚನೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಸಾಧು ಶ್ರೀನಾಥ್​

Updated on: Jul 27, 2023 | 10:42 AM

ಕಲಬುರಗಿ, ಜುಲೈ 27: ಇತ್ತೀಚೆಗೆ ನಾವು ದೂರದ ಯಾವುದೋ ಊರಲ್ಲಿ ಇದ್ದರು ಕೂಡಾ, ನಮಗೆ ಬೇಕಾದ ನಗರದಲ್ಲಿ ಬಾಡಿಗೆ ಮನೆಗಳನ್ನು ಹುಡುಕಬಹುದು, ಮನೆ ನೋಡಬಹುದು, ಸೈಟ್ ಗಳ ಬಗ್ಗೆ ಮಾಹಿತಿ ಪಡೆಯಬಹುದು. ಮನೆ ಬಾಡಿಗೆ, ಮನೆ ಖರೀದಿ, ಆಸ್ತಿ ಖರೀದಿಗೆ ಬೇಕಾದ ಮಾಹಿತಿ ಪಡೆಯಲು ಓಎಲ್ಎಕ್ಸ್ ಸೇರಿದಂತೆ ಅನೇಕ ಆ್ಯಪ್ ಗಳು ಇವೆ. ಆದರೆ ಈ ಆ್ಯಪ್ ಗಳನ್ನು ಬಳಸುವಾಗ ಹಣದ ವ್ಯವಹಾರ ಮಾಡುವಾಗ ಪ್ರತಿ ಸಲವು ಓಎಲ್ಎಕ್ಸ್ ಸೇರಿದಂತೆ ಕೆಲ ಆ್ಯಪ್ ಗಳು ಎಚ್ಚರಿಕೆ ನೀಡುತ್ತಲೇ ಇರುತ್ತವೆ. ಆದರೆ ಎಚ್ಚರಿಕೆಯನ್ನು ಮೀರಿಯೂ ಕೆಲವರು ಹಣದ ವ್ಯವಹಾರ ಮಾಡಿ, ಸಂಕಷ್ಟಕ್ಕೆ ಸಿಲುಕುವುದು, ವಂಚನೆಗೀಡಾಗುವುದು… (Online cheating) ಇಂತಹವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಲಬುರಗಿ ನಗರದಲ್ಲಿ (Kalaburagi) ಓಎಲ್ಎಕ್ಸ್ ನಲ್ಲಿ (OLX) ಮನೆ ಬಾಡಿಗೆಗೆ (House Rent) ಇದೆ ಎಂದು ಜಾಹೀರಾತು ಹಾಕಿ ವ್ಯಕ್ತಿಯೊಬ್ಬರು ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ನಕಲಿ ಆರ್ಮಿ ಆಫೀಸರ್ ಹೆಸರಲ್ಲಿ ವಂಚನೆ

ಕಲಬುರಗಿ ನಗರದ ಐವಾನ್ ಈ ಶಾಹಿ ಬಡಾವಣೆ ನಿವಾಸಿಯಾಗಿರುವ ಅಬ್ದುಲ್ ಖದೀರ್ ಪಟೇಲ್ ಅನ್ನೋರು, ನಗರದ ಪಿಡಬ್ಲೂಡಿ ಕಚೇರಿ ಪಕ್ಕದಲ್ಲಿ ಎಸ್ ಆರ್ ಸಿ ಅನ್ನೋ ಹೆಸರಿನ ಮೂರು ಅಂತಸ್ಥಿನ ಅಪಾರ್ಟಮೆಂಟ್ ಹೊಂದಿದ್ದಾರೆ. ಸೌದಿಯಲ್ಲಿ ಮೆಕ್ಯಾನಿಕಲ್ ಎಂಜನಿಯರ್ ಆಗಿ ಕೆಲಸ ಮಾಡಿದ್ದ ಅಬ್ದುಲ್ ಖದೀರ್, ನಿವೃತ್ತಿಯಾದ ನಂತರ ಕಲಬುರಗಿ ನಗರದಲ್ಲಿಯೇ ವಾಸವಾಗಿದ್ದಾರೆ.

ಇನ್ನು ತಮ್ಮ ಅಪಾರ್ಟಮೆಂಟ್ ನಲ್ಲಿದ್ದ ಫ್ಲ್ಯಾಟ್ ವೊಂದು ಕಳೆದ ಮೂರು ತಿಂಗಳಿಂದ ಖಾಲಿಯಿತ್ತು. ಯಾವುದೇ ಬಾಡಿಗೆದಾರರು ಬಂದಿರಲಿಲ್ಲಾ. ಈ ಬಗ್ಗೆ ಅಬ್ದುಲ್ ಖದೀರ್ ಅವರ ಪುತ್ರ ಮಲ್ಲಿಕ್ ಅವರು ಕೆಲ ದಿನಗಳ ಹಿಂದಷ್ಟೇ ಓಎಲ್ಎಕ್ಸ್ ನಲ್ಲಿ ಜಾಹೀರಾತು ಪ್ರಕಟ ಮಾಡಿದ್ದರು. ಫ್ಲ್ಯಾಟ್ ಖಾಲಿಯಿದ್ದು ಮಾಸಿಕ 12,500 (ಹನ್ನೆರಡು ಸಾವಿರದಾ ಐನೂರು) ರೂಪಾಯಿ ಬಾಡಿಗೆ ಮತ್ತು 50,000 (ಐವತ್ತು ಸಾವಿರ ರೂಪಾಯಿ) ಅಡ್ವಾನ್ಸ್ ಇದೆ. ಆಸ್ತಕರು ಸಂಪರ್ಕಿಸಿ ಅಂತ ತನ್ನ ಮತ್ತು ತನ್ನ ತಂದೆಯ ಮೊಬೈಲ್ ನಂಬರ್ ಅನ್ನು ಶೇರ್ ಮಾಡಿದ್ದರು.

ಓಎಲ್ಎಕ್ಸ್ ಪ್ರಕಟವಾಗಿದ್ದ ಜಾಹೀರಾತು ನೋಡಿದ್ದ ವ್ಯಕ್ತಿಯೊಬ್ಬರು ಜುಲೈ 21 ರಂದು ಅಬ್ದುಲ್ ಖದೀರ್ ಪುತ್ರ ಅಬ್ದುಲ್ ಮಲ್ಲಿಕ್ ಗೆ ಕರೆ ಮಾಡಿ, ಹಿಂದಿ ಭಾಷೆಯಲ್ಲಿ ಮಾತನಾಡಿದ್ದ ವ್ಯಕ್ತಿ, ತಾನು ಸಂದೀಪ್ ರಾವತ್ ಅಂತ. ತಾನು ಇಂಡಿಯನ್ ಆರ್ಮಿ ಆಫೀಸರ್ ಆಗಿದ್ದೇನೆ. ನನಗೆ ಕಲಬುರಗಿಗೆ ವರ್ಗಾವಣೆಯಾಗಿದೆ. ನನಗೆ ಕಲಬುರಗಿ ನಗರದಲ್ಲಿ ಇರಲು ಫ್ಲ್ಯಾಟ್ ಬೇಕಾಗಿದೆ. ನಿಮ್ಮ ಫ್ಲ್ಯಾಟ್ ನಮಗೆ ಇಷ್ಟವಾಗಿದೆ ಅಂತ ಹೇಳಿದ್ದರು.

ಇನ್ನು ಜುಲೈ 23 ರಂದು ಅಬ್ದುಲ್ ಖದೀರ್ ಪಟೇಲ್ ಅವರಿಗೆ ಜೋರಾಸಿಂಗ್ ಅನ್ನೋ ವ್ಯಕ್ತಿ ಕರೆ ಮಾಡಿ, ಸಂದೀಪ್ ರಾವತ್ ಅವರು ಇಂಡಿಯನ್ ಆರ್ಮಿ ಆಫೀಸರ್ ಇದ್ದಾರೆ. ನಾನು ಇಂಡಿಯನ್ ಆರ್ಮಿ ಫೈನಾನ್ಸ್ ಮ್ಯಾನೇಜರ್ ಇದ್ದೇನೆ ಅಂತ ಹೇಳಿ ಪರಿಚಯ ಮಾಡಿಕೊಂಡಿದ್ದ. ಅನೇಕ ದಾಖಲಾತಿಗಳನ್ನು ಕೇಳಿ, ತನ್ನ ವಾಟ್ಸಪ್ ನಂಬರಿಗೆ ಜೋರಾಸಿಂಗ್ ಅನ್ನೋ ವ್ಯಕ್ತಿ ಹಾಕಿಸಿಕೊಂಡಿದ್ದ.

ಒಂದು ರೂಪಾಯಿಯಿಂದ ಆರಂಭವಾದ ವಂಚನೆ

ಫ್ಲ್ಯಾಟ್​ ನಮಗೆ ಇಷ್ಟವಾಗಿದೆ. ನಿಮಗೆ ಅಡ್ವಾನ್ಸ್ ನ್ನು ಅಕೌಂಟ್ ಗೆ ಹಾಕ್ತೇವೆ ಅಂತ ಹೇಳಿದ್ದ ಜೋರಾಸಿಂಗ್, ಜುಲೈ 24 ರಂದು, ನೀವು ನಮ್ಮ ಅಕೌಂಟ್ ಗೆ ಒಂದು ರೂಪಾಯಿ ಹಾಕಿ, ಮರಳಿ ನಿಮ್ಮ ಖಾತೆಗೆ ಅಟೋಮ್ಯಾಟಿಕ್ ಆಗಿ ಹಣ ಜಮೆಯಾಗುತ್ತದೆ ಅಂತ ಹೇಳಿದ್ದ. ಆತನ ಮಾತು ನಂಬಿದ್ದ ಅಬ್ದುಲ್ ಖದೀರ್ ಪಟೇಲ್ ಅವರು ಒಂದು ರೂಪಾಯಿ ಜೋರಾಸಿಂಗ್ ಹೇಳಿದ್ದ ಅಕೌಂಟ್ ಗೆ ಜಮೆ ಮಾಡಿದ್ದರು.

ತಕ್ಷಣವೇ ಅಬ್ದುಲ್ ಖದೀರ್ ಪಟೇಲ್ ಅವರ ಅಕೌಂಟ್ ಗೆ ಒಂದು ರೂಪಾಯಿ ಮರಳಿ ಜಮೆಯಾಗಿತ್ತು. ಇದನ್ನೇ ನಂಬಿದ್ದ ಅಬ್ದುಲ್ ಖದೀರ್ ಪಟೇಲ್ ಅವರು ವಂಚಕರು ಹೇಳಿದ ಎರಡು ಬ್ಯಾಂಕ್ ಖಾತೆಗೆ 20,22,224 (ಇಪ್ಪತ್ತು ಲಕ್ಷ ಇಪ್ಪತ್ತೆರಡು ಸಾವಿರದಾ ಇನ್ನೂರಾ ಇಪ್ಪತ್ನಾಲ್ಕು ರೂಪಾಯಿ) ಹಣವನ್ನು ಜಮೆ ಮಾಡಿದ್ದಾರೆ. ವಂಚಕರು ಇನ್ನೂ ಹೆಚ್ಚಿನ ಹಣವನ್ನು ಕೇಳಿದ್ದಾರೆ. ಆಗ ತಾವು ಅಕೌಂಟ್ ಗೆ ಹಾಕಿರೋ ಹಣವನ್ನು ಮರಳಿ ತನ್ನ ಅಕೌಂಟ್ ಗೆ ಹಾಕುವಂತೆ ಕೇಳಿದಾಗ ವಂಚಕರು ಹಣವನ್ನು ಮರಳಿ ಅಕೌಂಟ್ ಗೆ ಹಾಕಿಲ್ಲಾ. ಆವಾಗ ಅಬ್ದುಲ್ ಖದೀರ್ ಪಟೇಲ್ ಅವರಿಗೆ ಗೊತ್ತಾಗಿದೆ, ತಾನು ವಂಚನೆಗೊಳಗಾಗಿದ್ದೇನೆ ಅನ್ನೋದು.

ವಂಚನೆಗೊಳಗಾದ ನಂತರ ಅಬ್ದುಲ್ ಖದೀರ್ ಪಟೇಲ್ ಅವರು ಕಲಬುರಗಿ ನಗರದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಆರ್ಮಿ ಆಫೀಸರ್ ಹೆಸರಲ್ಲಿ ನನಗೆ ಜೋರಾಸಿಂಗ್ ಮತ್ತು ಸಂದೀಪ್ ರಾವುತ್ ವಂಚನೆ ಮಾಡಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ನಾನು ಅವರ ಅಕೌಂಟ್ ಗೆ ಹಾಕಿರೋ ಹಣವನ್ನು ಮರಳಿ ಕೊಡಿಸಬೇಕು ಅಂತ ಮನವಿ ಮಾಡಿದ್ದಾರೆ.

ವಂಚನೆಗೊಳಗಾಗಲು ನಾಮುಂದು ತಾಮುಂದು ಎಂದು ತಹತಹಿಸುವವರು ಇರೋವರಗೆ ವಂಚನೆ ಮಾಡೋರು ಇದ್ದೇ ಇರುತ್ತಾರೆ! ಹೀಗಾಗಿ ಜನರು ಹೆಚ್ಚು ಜಾಗುರೂಕತೆಯಿಂದ ಇರಬೇಕು. ಹಣಕಾಸಿನ ವ್ಯವಹಾರ ಮಾಡುವಾಗ ಹೆಚ್ಚಿನ ಜಾಗೃತಿ ಇರಬೇಕು, ಗೊತ್ತಿಲ್ಲದ ವ್ಯಕ್ತಿ ಜೊತೆ ಹಣಕಾಸಿನ ವ್ಯವಹಾರವನ್ನು ಮಾಡಬಾರದು ಅಂತ ಪೊಲೀಸರು ಸಾರ್ವಜನಿಕರಿಗೆ ಅನೇಕ ಬಾರಿ ಮಾಹಿತಿ ನೀಡುತ್ತಲೇ ಇರುತ್ತಾರೆ. ಆದರು ಕೂಡಾ…

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ