ಪೊಲೀಸರಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆ ಕಿಟಕಿ ಗಾಜು ಒಡೆದು ಜಿಗಿದ ಆರೋಪಿ: ಓಡಲು ಆಗದೇ ಸಿಕ್ಕಿಬಿದ್ದ

|

Updated on: Jun 26, 2023 | 1:58 PM

ಆರೋಪಿ ಚೇತನ್ ಸಿನಿಮೀಯ ರೀತಿಯಲ್ಲಿ ಆಪರೇಷನ್ ಥಿಯೇಟರ್​ನಿಂದ ಗಾಜು ಒಡೆದು ಪರಾರಿಗೆ ಯತ್ನಿಸಿದ್ದಾನೆ. ಆದ್ರೆ ಮಹಡಿ ಮೇಲಿಂದ ಜಂಪ್ ಮಾಡಿದ ಕಾರಣ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆ ಕಿಟಕಿ ಗಾಜು ಒಡೆದು ಜಿಗಿದ ಆರೋಪಿ: ಓಡಲು ಆಗದೇ ಸಿಕ್ಕಿಬಿದ್ದ
ಘಟನಾ ಸ್ಥಳ ಹಾಗೂ ಗಾಯಗೊಂಡ ಆರೋಪಿ
Follow us on

ಆನೇಕಲ್: ಪೊಲೀಸರಿಂದ(Police) ತಪ್ಪಿಸಿಕೊಳ್ಳಲು ಆರೋಪಿಯೊಬ್ಬ ಆಸ್ಪತ್ರೆಯ ಕಿಟಕಿ ಒಡೆದು ಜಂಪ್ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ(Robbery Accused). ಸಿನಿಮೀಯ ರೀತಿಯಲ್ಲಿ ರಾಬರಿ ಕೇಸ್ ಆರೋಪಿ ಮಹಡಿ ಮೇಲಿಂದ ಹಾರಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದ್ರೆ ಆರೋಪಿಗೆ ಗಂಭೀರ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

2 ವರ್ಷದ ಹಿಂದಿನ ರಾಬರಿ ಕೇಸ್​ನಲ್ಲಿ ಆರೋಪಿ ಚೇತನ್​ಗೆ ವಾರಂಟ್ ಜಾರಿ ಆಗಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿ ನಿನ್ನೆ (ಜೂನ್ 25) ಬೆಳಗ್ಗೆ 11 ಗಂಟೆಗೆ ಮೆಡಿಕಲ್‌ ಚೆಕಪ್​ಗೆಂದು ಆನೇಕಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಆರೋಪಿ ಚೇತನ್ ಸಿನಿಮೀಯ ರೀತಿಯಲ್ಲಿ ಆಪರೇಷನ್ ಥಿಯೇಟರ್​ನಿಂದ ಗಾಜು ಒಡೆದು ಪರಾರಿಗೆ ಯತ್ನಿಸಿದ್ದಾನೆ. ಆದ್ರೆ ಮಹಡಿ ಮೇಲಿಂದ ಜಂಪ್ ಮಾಡಿದ ಕಾರಣ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋಗಿದ್ದ ವಿದ್ಯಾರ್ಥಿನಿ ಸಾವು, ನಾನಾ ಕಾರಣ ಹೇಳುತ್ತಿರುವ ವೈದ್ಯರು

ಮೀನು ಹಿಡಿಯುವಾಗ ತೆಪ್ಪ ಮಗುಚಿ ಯುವಕ ಸಾವು

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ತಾರನಾಳ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯುವಾಗ ತೆಪ್ಪ ಮಗುಚಿ ಮಂಜುನಾಥ ಶಿವಪ್ಪ ಚಲವಾದಿ(17) ಎಂಬ ಯುವಕ ಸಾವನ್ನಪ್ಪಿದ್ದು ಮತ್ತೋರ್ವ ಯುವಕ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾನೆ. ಮನೆಯಲ್ಲಿ ಹೇಳದೆ ಕೆರೆಯಲ್ಲಿ ಮೀನು‌ ಹಿಡಿಯಲು ಇಬ್ಬರು ಯುವಕರು ತೆರಳಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕೆರೆಯಿಂದ ಮಂಜುನಾಥ ಮೃತದೇಹ ಹೊರತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೃತ ಯುವಕನ‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ