ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ(Congress Government) ನುಡಿದಂತೆ ಶಕ್ತಿ ಯೋಜನೆ(Shakti Scheme) ಜಾರಿ ಮಾಡಿದೆ. ಜೂನ್ 11ರ ಭಾನುವಾರ ಜಾರಿಯಾದ ಮೊದಲ ದಿನದಿಂದಲೇ ಮಹಿಳೆಯರು ಉಚಿತ ಬಸ್ ಸೇವೆಯನ್ನು ಪಡೆದು ಆನಂದಿಸುತ್ತಿದ್ದಾರೆ(Free Bus Travel For Women Scheme). ತಮಗಿಷ್ಟವಾದ ಸ್ಥಳಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ. ಯಾವುದೇ ಸರ್ಕಾರಿ ಬಸ್ ನೋಡಿದರೂ ಅದರಲ್ಲಿ ಮಹಿಳೆಯರ ದಂಡೇ ಕಾಣಿಸುತ್ತಿದೆ. ಕಳೆದ ಒಂದು ವಾರದಲ್ಲಿ ಹಿಂದೆಂದೂ ಆಗದಂತಹ ರೀತಿಯಲ್ಲಿ ಮಹಿಳೆಯರು ಕಿಕ್ಕಿರಿದು ಪ್ರವಾಸಗಳು ಮಾಡುತ್ತಿದ್ದಾರೆ. ಜೂನ್ 11ರಿಂದ 17ರ ವರೆಗೆ ಎಷ್ಟು ಮಹಿಳೆಯರು ಪ್ರಯಾಣಿಸಿದರು, ಪ್ರಯಾಣದ ವೆಚ್ಚದ ಇಂಚಿಂಚು ಮಾಹಿತಿ ಇಲ್ಲಿದೆ.
ಯೋಜನೆ ಜಾರಿಯಾದ ದಿನದಿಂದ ಜೂನ್ 17ರ ಶನಿವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69 ಕೋಟಿ 77 ಲಕ್ಷದ 68 ಸಾವಿರದ 971 ರೂಪಾಯಿ ಆಗಿದೆ. ಒಟ್ಟು 3 ಕೋಟಿ 12 ಲಕ್ಷದ 9 ಸಾವಿರದ 696 ಮಂದಿ ಪ್ರಯಾಣ ಮಾಡಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಶಕ್ತಿ ಯೋಜನೆ ಜಾರಿಯಾಗುವ ಮುನ್ನ ಎಷ್ಟು ಜನ ಪ್ರಯಾಣಿಕರು ಪ್ರಯಾಣ ಮಾಡ್ತಿದ್ರು ಅದರಲ್ಲಿ ಮಹಿಳೆಯರು ಎಷ್ಟು ಅದರಿಂದ ಆಗ್ತಿದ್ದ ಕಲೆಕ್ಷನ್ ಅಂತ ನೋಡುವುದಾದರೆ, ಪ್ರಯಾಣಿಕರ ಸಂಖ್ಯೆ ಪ್ರತಿದಿನ- 23 ಲಕ್ಷದ 59 ಸಾವಿರ ಅದರಲ್ಲಿ 50% ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ರು. ಒಂದು ದಿನದ ಆಗಿನ ಆದಾಯ 9 ಕೋಟಿ 79 ಲಕ್ಷದ 47 ಸಾವಿರ ರುಪಾಯಿ. ಬಿಎಂಟಿಸಿ ಬಸ್ಸುಗಳಲ್ಲಿ ಪ್ರತಿದಿನ- 28 ಲಕ್ಷ ಜನ ಪ್ರಯಾಣಿಕರು ಪ್ರಯಾಣ ಮಾಡ್ತಿದ್ರು ಅದರಲ್ಲಿ 50% ಮಹಿಳಾ ಪ್ರಯಾಣಿಕರು. ಆಗಿನ ಒಂದು ದಿನದ ಆದಾಯ- 4 ಕೋಟಿ 44 ಲಕ್ಷ 5 ಸಾವಿರ ರುಪಾಯಿ ಕಲೆಕ್ಷನ್ ಆಗ್ತಿತ್ತು. ಇತ್ತ ವಾಯುಯ್ಯ- (ಎನ್ ಡಬ್ಲೂಕೆಆರ್ಟಿಸಿ) ಯಲ್ಲಿ ಪ್ರತಿದಿನ 16 ಲಕ್ಷದ 94 ಸಾವಿರ ಪ್ರಯಾಣಿಕರು ಪ್ರಯಾಣ ಮಾಡ್ತಿದ್ರು ಅದರಲ್ಲಿ 50% ರಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡ್ತಿದ್ರು. ಒಂದು ದಿನದ ಆದಾಯ- 4 ಕೋಟಿ 73 ಲಕ್ಷದ 8 ಸಾವಿರ ರುಪಾಯಿ. ಇನ್ನೂ ಕೊನೆಯದಾಗಿ ( ಕಲ್ಯಾಟ ಕರ್ನಾಟಕ ) ಕೆಕೆಆರ್ಟಿಸಿಯಲ್ಲಿ ಪ್ರತಿದಿನ 14 ಲಕ್ಷದ 64 ಸಾವಿರ ಪ್ರಯಾಣಿಕರು ಪ್ರಯಾಣ ಮಾಡ್ತಿದ್ರು ( 50% ರಷ್ಟು ಮಹಿಳೆಯರು ) ಒಂದು ದಿನದ ಸಾರಿಗೆ ಆದಾಯ- 4 ಕೋಟಿ 16 ಲಕ್ಷದ 72 ಸಾವಿರ ಒಟ್ಟು ನಾಲ್ಕು ನಿಗಮದ ಸಾರಿಗೆ ಆದಾಯ- 23 ಕೋಟಿ 13 ಲಕ್ಷ 32 ಸಾವಿರ ರುಪಾಯಿ ಇತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ