Heavy Traffic! ಶಕ್ತಿ ಯೋಜನೆ ಜಾರಿ -ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣದ ಎಫೆಕ್ಟ್​​, ಕೆಎಸ್ಆರ್ಟಿಸಿ ಸರ್ವರ್ ಡೌನ್, ಮಹಿಳೆಯರ ಪರದಾಟ

ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣದ ಎಫೆಕ್ಟ್​​, ಕೆಎಸ್ಆರ್ಟಿಸಿ ಸರ್ವರ್ ಡೌನ್, ಟಿಕೆಟ್ ಬುಕ್ ಮಾಡಿದ್ರೆ ಅಮೌಂಟ್ ಕಟ್ ಆಗ್ತಿದೆ, ಸೀಟ್ ಬುಕ್ ಆಗ್ತಿಲ್ಲ!

Heavy Traffic! ಶಕ್ತಿ ಯೋಜನೆ ಜಾರಿ -ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣದ ಎಫೆಕ್ಟ್​​, ಕೆಎಸ್ಆರ್ಟಿಸಿ ಸರ್ವರ್ ಡೌನ್, ಮಹಿಳೆಯರ ಪರದಾಟ
ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣದ ಎಫೆಕ್ಟ್​​, ಕೆಎಸ್ಆರ್ಟಿಸಿ ಸರ್ವರ್ ಡೌನ್
Follow us
|

Updated on:Jun 16, 2023 | 7:00 AM

ಬೆಂಗಳೂರು: ರಾಜ್ಯದ ನೂತನ ಕಾಂಗ್ರೆಸ್​​ ಸರ್ಕಾರ ಮಹಿಳೆಯರಿಗೆ (Women) ಉಚಿತ ಬಸ್​​ ಪ್ರಯಾಣ (Free Bus Travel) ಕಲ್ಪಿಸುವ ನಿಟ್ಟಿನಲ್ಲಿ ಶಕ್ತಿ ಯೋಜನೆ (Shakti Scheme) ಜಾರಿಗೆ ತಂದಿದೆ. ಯೋಜನೆ ಜಾರಿಯಾಗಿ ನಾಲ್ಕು ದಿನ ಕಳೆದಿದ್ದು, ಇದರ ಪ್ರಯೋಜನ ಪಡೆಯಲು ಮಹಿಳೆಯರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ. ನಾರ್ಮಲ್ ಬಸ್ ಗಳಿಗೆ ಟಿಕೆಟ್ ಬುಕ್ ಮಾಡಲು ಕೆಎಸ್ಆರ್ಟಿಸಿ ಆ್ಯಪ್ ನಲ್ಲಿ ಅವಕಾಶ ನೀಡಲಾಗಿದೆ. ಮಹಿಳೆಯರು ಟಿಕೆಟ್ ಬುಕ್ ಮಾಡಲು ಕೇವಲ 20 ರೂಪಾಯಿ ಮಾತ್ರ ಪಾವತಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಟಿಕೆಟ್​ ಬುಕ್ಕಿಂಗ್​ ಮಾಡಿಸಲು ಮುಂದಾಗಿದ್ದಾರೆ. ಇದರಿಂದ  ಕೆಎಸ್ಆರ್ಟಿಸಿ ಸಂಸ್ಥೆಯ ವೈಬ್ ಸೈಟ್ ಸರ್ವರ್ (KSRTC Server) ಮೇಲೆ ಭಾರೀ ಟ್ರಾಫಿಕ್​​ ಪ್ರಭಾವ ಬೀರಿದ್ದು ಅದು ನಿಶ್ಯಕ್ತಿಗೊಂಡು, ಡೌನ್ ಆಗಿದೆ. ಇದರಿಂದ ಟ್ವಿಟರ್ ನಲ್ಲಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಬುಕ್ ಮಾಡಿದ್ರೆ ಅಮೌಂಟ್ ಕಟ್ ಆಗ್ತಿದೆ – ಸೀಟ್ ಬುಕ್ ಆಗ್ತಿಲ್ಲ ಎಂದು ಟ್ವೀಟ್ ಮಾಡಿ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಕೆಎಸ್ಆರ್ಟಿಸಿ ಸಹಾಯವಾಣಿಗೆ ಕರೆ ಮಾಡಿದರೆ ನೋ ರೆಸ್ಪಾನ್ಸ್ ಬರುತ್ತಿದೆ ಎಂದೂ ಮಹಿಳೆಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Also read:  ಮಹಿಳಾ ಪ್ರಯಾಣಿಕರ ಹೆಚ್ಚಳಕ್ಕೆ ಕೆಎಸ್​ಆರ್​ಟಿಸಿ ಫೆಡರೇಷನ್ ಕಳವಳ: ಸಿದ್ದರಾಮಯ್ಯ ಮುಂದೆ 7 ಬೇಡಿಕೆ

ಯಾವಾಗ ನಮ್ಮ ಹಣ ವಾಪಸ್ ಮಾಡ್ತಿರಾ ಎಂದು ಪ್ರಶ್ನೆಗಳ ಸುರಿಮಳೆಯಾಗಿದೆ. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಎಸ್ಆರ್ಟಿಸಿ ಅಧಿಕಾರಿಗಳು ಟೆಕ್ನಿಕಲ್ ಸಮಸ್ಯೆಯಿಂದ ‌ಸರ್ವರ್ ಡೌನ್ ಆಗಿದೆ. ಹಾಗಾಗಿ ಐದರಿಂದ ಏಳು ದಿನದೊಳಗೆ ನಿಮ್ಮ ಹಣ ರಿ ಫಂಡ್ ಆಗುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:52 am, Fri, 16 June 23