ಬೆಂಗಳೂರು: ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು (Free Bus) ಸರ್ಕಾರದಿಂದ ಉಚಿತವಾಗಿ ಸ್ಮಾರ್ಟ್ ಕಾರ್ಡ್ (Smart Card) ಪಡೆಯುವುದು ಅವಶ್ಯವಾಗಿದೆ. ಆದರೆ ಇದರಿಂದ ಮಹಿಳೆಯರ (Woman) ಗೌಪ್ಯತೆಗೆ ಸಮಸ್ಯೆ ಆಗುತ್ತದೆ ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಹೇಳಿದೆ. ಮಹಿಳೆಯರಿಗೆ ಪಿಂಕ್ ಟಿಕೆಟ್ (Pink Ticket) ನೀಡಲಿ ಸ್ಮಾರ್ಟ್ ಕಾರ್ಡ್ ಅವಶ್ಯಕತೆ ಇಲ್ಲ. ಸ್ಮಾರ್ಟ್ ಕಾರ್ಡ್ನಿಂದ ಮಹಿಳೆಯರಿಗೆ ಗೌಪ್ಯತೆಯ ಸಮಸ್ಯೆ ಆಗುತ್ತದೆ. ಮಹಿಳೆಯರು ಎಲ್ಲಿ ಪ್ರಯಾಣ ಮಾಡುತ್ತಾರೆ ಅನ್ನೋ ಫುಲ್ ಡಿಟೇಲ್ಸ್ ಸಿಗುತ್ತದೆ. ಹಾಗಾಗಿ ಇದನ್ನು ಕೈ ಬಿಡಬೇಕು, ಬೇರೆಬೇರೆ ರಾಜ್ಯದ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎಂದು ಹೇಳಿದೆ.
ಇಂದು (ಜೂ.07) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಭೇಟಿ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತಿರುವುದು ತುಂಬಾ ಒಳ್ಳೆಯ ವಿಚಾರ. ಇದರಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಒಳ್ಳೆಯದಾಗುತ್ತದೆ. ಆದರೆ ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕು ಮತ್ತು ಕರ್ನಾಟಕ ಮಹಿಳೆಯರಿಗೆ ಮಾತ್ರ ಅವಕಾಶ ಅಂತಿದ್ದಾರೆ. ಇದರಿಂದ ಸಮಸ್ಯೆ ಆಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸರ್ಕಾರದ ಮುಂದಿಟ್ಟ ಆಗ್ರಹಗಳೇನು?
ಸ್ಮಾರ್ಟ್ಕಾರ್ಡ್ಗಾಗಿ ಸೇವಾಸಿಂಧುನಲ್ಲಿ ಅಪ್ಲಿಕೇಶನ್ ಹಾಕಬೇಕು ಅಂತ ಹೇಳಿದ್ದಾರೆ. ಎಷ್ಟು ಮಹಿಳೆಯರಿಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಲು ಆಗುತ್ತದೆ. ಬೆಂಗಳೂರು ಓನ್ ಮೂಲಕ ಎಷ್ಟು ಜನರಿಗೆ ಕಾರ್ಡ್ ಅರ್ಜಿ ಹಾಕಲು ಆಗುತ್ತದೆ. ಒಂದೂವರೆ ಕೋಟಿ ಸ್ಮಾರ್ಟ್ ಕಾರ್ಡ್ ಮೂರು ತಿಂಗಳಿನಲ್ಲಿ ನೀಡಲು ಆಗುತ್ತಾ..? ಕೂಲಿ ಕೆಲಸ ಮಾಡುವ ಮಹಿಳೆಯರು, ಮನೆ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಆಗುತ್ತಾ? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಸಾಕಷ್ಟು ವಲಸೆ ಕಾರ್ಮಿಕರು ಇದ್ದಾರೆ. ಅವರು ಈ ನಗರಕ್ಕೆ ಕೊಡುಗೆಗಳನ್ನು ಕೊಡುತ್ತಿದ್ದಾರೆ. ಅವರು ಯಾಕೆ ಈ ಯೋಜನೆಯಿಂದ ವಂಚಿತರಾಗಬೇಕು? ಹೀಗಾಗಿ ನಾವು ಈ ಎರಡು ರೂಲ್ಸ್ ಕೈಬಿಡಬೇಕೆಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ವೇದಿಕೆ ಮನವಿ ಮಾಡಿದ್ದೇವೆ. ಸಚಿವರು ಈ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ಸರ್ಕಾರ ಸ್ಮಾರ್ಟ್ ಕಾರ್ಡ್ ಮತ್ತು ರಾಜ್ಯದ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ರೂಲ್ಸ್ ಕೈ ಬಿಡುತ್ತಾರೆ ಎಂದು ನಮಗೆ ಭರವಸೆ ಇದೆ ಎಂದು ವೇದಿಕೆಯ ಸದಸ್ಯರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ