Karnataka Budget 2023: ಮುಖ್ಯಮಂತ್ರಿಯ ಹೂ ಇಡುವ ಮಾತಿನಿಂದ ಕೆರಳಿದ ಸಿದ್ದರಾಮಯ್ಯ ಸ್ಪೀಕರ್ ಜೊತೆ ವಾಗ್ವಾದಕ್ಕಿಳಿದರು!

|

Updated on: Feb 17, 2023 | 12:09 PM

ಬೊಮ್ಮಾಯಿ ಸರ್ಕಾರ 7 ಕೋಟಿ ಕನ್ನಡಿಗರ ಮೇಲೆ ಆರಂಭದಿಂದಲೂ ಹೂ ಇಡುತ್ತಾ ಬಂದಿದೆ ಎಂದು ಹೇಳಿದ ಸಿದ್ದರಾಮಯ್ಯ ಸ್ಪೀಕರ್ ಅವರ ಮಾತುಗಳಿಗೂ ಉಗ್ರ ವಿರೋಧ ವ್ಯಕ್ತಪಡಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು 2023-24 ನೇ ಸಾಲಿನ ಬಜೆಟ್ ಮಂಡನೆಗೆ ಮೊದಲು ಸಿದ್ದರಾಮಯ್ಯನವರ (Siddaramaiah) ಮೇಲೆ ಮಾಡಿದ ಕಿವಿ ಮೇಲೆ ಹೂ ಮುಡಿಯುವ ಕಾಮೆಂಟ್ ವಿರೋಧ ಪಕ್ಷದ ನಾಯಕರನ್ನು ವ್ಯಗ್ರಗೊಳಿಸಿತು. ಅವರು ಕೂಡಲೇ ಎದ್ದು ನಿಂತು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳನ್ನು ಬಜೆಟ್ ಮಂಡಿಸಲು ಬಿಡಿ ಅಂತ ಹೇಳಿದಾಗ ಸಿದ್ದರಾಮಯ್ಯ ಮತ್ತಷ್ಟು ಕೋಪೋದ್ರಿಕ್ತರಾಗಿ, ಅವರು ಹೇಳಿದ್ದು ಬಜೆಟ್ ಮಂಡನೆಯ ಭಾಗವೇ ಎಂದು ಕೇಳಿದರು. ಬೊಮ್ಮಾಯಿ ಸರ್ಕಾರ 7 ಕೋಟಿ ಕನ್ನಡಿಗರ ಮೇಲೆ ಆರಂಭದಿಂದಲೂ ಹೂ ಇಡುತ್ತಾ ಬಂದಿದೆ ಎಂದು ಹೇಳಿದ ಸಿದ್ದರಾಮಯ್ಯ ಸ್ಪೀಕರ್ ಅವರ ಮಾತುಗಳಿಗೂ ಉಗ್ರ ವಿರೋಧ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 17, 2023 12:08 PM