ಭದ್ರತಾ ಲೋಪದ ಬೆನ್ನಲ್ಲೇ ವಿಧಾನಸೌಧಕ್ಕೆ ಹೈ ಟೈಕ್ನಾಲಜಿ ಭದ್ರತೆ, ಮೂರು ಹಂತದ ಭದ್ರತೆ ಹೇಗಿದೆ ಗೊತ್ತಾ?

| Updated By: Rakesh Nayak Manchi

Updated on: Jul 11, 2023 | 4:56 PM

ವಿಧಾನಸೌಧದಲ್ಲಿ ಇತ್ತೀಚೆಗೆ ಭದ್ರತಾ ಲೋಪವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಭಾರೀ ಭದ್ರತೆ ಕೈಗೊಳ್ಳಲು ಮುಂದಾಗಿದೆ.

ಭದ್ರತಾ ಲೋಪದ ಬೆನ್ನಲ್ಲೇ ವಿಧಾನಸೌಧಕ್ಕೆ ಹೈ ಟೈಕ್ನಾಲಜಿ ಭದ್ರತೆ, ಮೂರು ಹಂತದ ಭದ್ರತೆ ಹೇಗಿದೆ ಗೊತ್ತಾ?
ವಿಧಾನಸೌಧ
Follow us on

ಶಕ್ತಿ ಸೌಧವಾದ ವಿಧಾನಸೌಧದ (Vidhana Soudha) ಇತ್ತೀಚಿಗೆ ಭದ್ರತಾ ಲೋಪ ಭಾರಿ ಚರ್ಚೆಗೆ ಕಾರಣವಾಗಿತ್ತು. ಅನಾಮಧೇಯ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಕಲಾಪದ ನಡುವೆ ಕಾಣಿಸಿಕೊಂಡಿದ್ದು ಭದ್ರತಾ ಲೋಪವನ್ನು ಎತ್ತಿ ಹಿಡಿದಿತ್ತು. ಈ ರೀತಿಯ ಭದ್ರತಾ ಲೋಪದಿಂದ (Security Lapses) ಮುಜುಗರಕ್ಕೀಡಾದ ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದ್ದು, ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಭಾರಿ ಭದ್ರತೆ ಕೈಗೊಳ್ಳಲು ಮುಂದಾಗಿದೆ.

ಹೊಸ ಭದ್ರತಾ ಕ್ರಮದ ಮುಖಾಂತರ ಪಾರ್ಲಿಮೆಂಟ್​ನ ತಂತ್ರಜ್ಞಾನವನ್ನೂ ಬಳಸಲು ಸರ್ಕಾರ ಮುಂದಾಗಿದ್ದು, ಮೂರು ಹಂತಗಳ ಭದ್ರತಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮೂಲಕ ಹೈ ಟೈಕ್ನಾಲಜಿ ಆಧರಿತ ಟೈಟ್ ಬಂದೋಬಸ್ತ್ ಮಾಡಲು ಮುಂದಾಗಿದ್ದು, ಅಪರಿಚಿತರು ಅಥವ ಶಂಕಿತರು ಯಾವುದೇ ರೀತಿ ಎಂಟ್ರಿ ಕೊಡದಂತೆ ತಡೆಯಲು ತಯಾರಿ ನಡೆಸಿದೆ.

ವಿಧಾನಸೌಧ ಹಾಗೂ ವಿಕಾಸಸೌಧ ಒಳ ಪ್ರವೇಶಕ್ಕೆ ಮೂರು ಸುತ್ತಿನ ಭದ್ರತೆ ಕೈಗೊಳ್ಳಲಾಗುತ್ತಿದೆ. ಬರುವವರಿಗೆ ಲೇಸರ್ ಐಡೆಂಟಿಟಿ ಸೆನ್ಸಿಟಿವ್ ಐಡಿ ಕಾರ್ಡ್ ನೀಡಲಾಗುತ್ತೀದೆ. ಈ ಮೂಲಕ ಅನುಮತಿ ಇದ್ದವರಿಗೆ ಐಡಿ ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ. ಬಳಿಕ ಹೈ-ಅಂಡ್ ಸಿಸಿಟಿವಿ ಕ್ಯಾಮರಾ, ಕಂಟ್ರೋಲ್ ರೂಂ, ಸ್ಕ್ಯಾನರ್​ಗಳಿಂದ ಸಹ ನಿಗಾ ವಹಿಸಲಿದ್ದು, ಒಳಗೆ ಪ್ರವೇಶಿಸಲು ವಿಸಿಟರ್​ಗಳಿಗೆ ಸ್ಮಾರ್ಟ್ ಪಾಸ್ ಕಡ್ಡಾಯವಾಗಿ ಇರಬೇಕಾಗಿದೆ.

ಇದನ್ನೂ ಓದಿ: Bengaluru: ವಿಧಾನಸೌಧದಲ್ಲಿ ಶಾಸಕರ ವಾಹನ ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಮಧ್ಯವರ್ತಿಗಳು ಹೆಚ್ಚಾಗಿದ್ದಾರೆ ಎಂದು ಒಪ್ಪಿಕೊಂಡ ಸಚಿವ ಎಚ್‌ಕೆ ಪಾಟೀಲ್

ಅಂತಿಮವಾಗಿ ಪಾರ್ಲಿಮೆಂಟ್​ನಲ್ಲಿರುವ ರೇಡಿಯೋ ಫ್ರೀರ್ಕ್ಯೂನ್ಸಿ ಐಡೆಂಟಿಫಿಕ್ಯೂಷನ್​ವುಳ್ಳ ಅತ್ಯಾಧುನಿಕ ತಂತ್ರಜ್ಞಾನವನ್ನು ಸಹ ಬಳಕೆಗೆ ಸರ್ಕಾರ ಪ್ಲ್ಯಾನ್ ಮಾಡಿದೆ. ಇನ್ನು ಈ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು 15-20 ದಿನಗಳಲ್ಲಿ ಮಾಡುವಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸಲಹೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಭದ್ರತಾ ಲೋಪ

ಚಿತ್ರದುರ್ಗ ಮೂಲದ ತಿಪ್ಪೇರುದ್ರ ಎಂಬಾತ ವಿಧಾನಸೌಧ ಎಂಟ್ರಿ ಪಾಸ್ ತೆಗೆದುಕೊಂಡು ಬಂದಿದ್ದ. ಈ ವೇಳೆ ಭದ್ರತೆಯಲ್ಲಿದ್ದ ಮಾರ್ಷಲ್​ಗೆ ಎಂಎಲ್​ಎ ಎಂದು ಹೇಳಿಕೊಂಡು ಒಳ ಪ್ರವೇಶಿಸಿದ್ದ. ಬಳಿಕ ಈತನ ಎಂಟ್ರಿ ವಿಚಾರ ಹೊರ ಬರುತಿದ್ದಂತೆ ಆತನ ಬಂಧನ ಕೂಡ ಮಾಡಲಾಗಿತ್ತು. ಅಂತಿಮವಾಗಿ ಆತ ಸದನ ವೀಕ್ಷಣೆಗೆ ಬಂದಿದ್ದಾಗಿ ಹೇಳಿದ್ದ. ಆದರೆ ಭದ್ರತಾ ಲೋಪದ ವಿಚಾರವಾಗಿ ಗಂಭೀರ ನಿರ್ಧಾರ ಕೈಗೊಂಡ ಸರ್ಕಾರ ಭದ್ರತೆಯ ರೂಪರೇಷೆ ಬಿಗಿ ಮಾಡಲು ಮುಂದಾಗಿದೆ.

ಅದರಂತೆ ನೆನ್ನೆ ಸ್ಪೀಕರ್ ಯುಟಿ ಖಾದರ್, ನಗರ ಪೊಲೀಸ್ ಆಯುಕ್ತ ದಯಾನಂದ್, ಅಪರಾಧ ವಿಭಾಗದ ಜಂಟಿ ಆಯುಕ್ತ ಶರಣಪ್ಪ ವಿಧಾನಸೌಧ ಭದ್ರತಾ ಪರಿಶೀಲನೆ ಮಾಡಿದರು. ಈ ವೇಳೆ ಕೈಗೊಳ್ಳಬೇಕಾದ ಕೆಲ ಬದಲಾವಣೆ ಬಗ್ಗೆ ಸಭೆ ಸಹ ನಡೆಸಿದ್ದು, ಮೂರು ಹಂತದ ಭದ್ರತೆಯ ನಿರ್ಧಾರ ಮಾಡಲಾಗಿದೆ. ಈ ಎಲ್ಲಾ ತಂತ್ರಜ್ಞಾನ ಅಳವಡಿಸಿಬೇಕು ಎಂದು ಸ್ಪೀಕರ್ ಯುಟಿ ಖಾದರ್​ಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ