ಬೆಂಗಳೂರು: 7 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಬಂಧನ, ಪೊಲೀಸಪ್ಪನೇ ಮಾಸ್ಟರ್‌ಮೈಂಡ್!
ಬೆಂಗಳೂರಿನಲ್ಲಿ ನಡೆದಿರುವ ಎಟಿಎಂ ವಾಹನದ ಹಗಲು ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರು ದರೋಡೆ ಗ್ಯಾಂಗ್‌ಗೆ ಬಲೆ ಬೀಸಿದ್ದು ತಮಿಳುನಾಡು, ಆಂಧ್ರ ಹೀಗೆ ಬೇರೆ ಬೇರೆ ರಾಜ್ಯಗಳಿಗೂ ತನಿಖಾ ತಂಡಗಳು ತೆರಳಿವೆ. ನೂರಾರು ಸಿಸಿಟಿವಿ ಕ್ಯಾಮರಾಗಳನ್ನು ಜಾಲಾಡಲಾಗಿದೆ. ಆದರೆ ಈಗ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದೆ.
- Kiran HV
- Updated on: Nov 21, 2025
- 7:56 am
ಧರ್ಮಸ್ಥಳ ಬುರುಡೆ ಗ್ಯಾಂಗ್ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧ: ಚಾರ್ಜ್‌ಶೀಟಿನಲ್ಲೇನಿದೆ?
ಇಡೀ ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಎಸ್ಐಟಿ ತನಿಖೆಯಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡಲು ಈ ಬುರುಡೆ ಗ್ಯಾಂಗ್ ಕಥೆ ಕಟ್ಟಿದೆ ಎಂದು ತಿಳಿದುಬಂದಿದೆ. ಇದೀಗ ಈ ಪ್ರಕರಣದ ಚಾರ್ಜ್‌ಶೀಟ್ ಸಿದ್ಧವಾಗಿದ್ದು, ಚಾರ್ಜ್ಶೀಟ್ನಲ್ಲಿ ಸಿ.ಎನ್.ಚಿನ್ನಯ್ಯತಲೆಬುರುಡೆ ತಂದಿದ್ದು, ಅದನ್ನು ತಂದುಕೊಟ್ಟವರ ಬಗ್ಗೆ ಸಂಪೂರ್ಣ ವಿವರವನ್ನು ಉಲ್ಲೇಖಸಿಲಾಗಿದೆ.
- Kiran HV
- Updated on: Nov 19, 2025
- 9:38 pm
ದೆಹಲಿಯಲ್ಲಿ ಕಾರು ಸ್ಫೋಟ: ಕರ್ನಾಟಕದಲ್ಲೂ ಹೈಅಲರ್ಟ್ ಘೋಷಣೆ, ಬಿಗಿ ಭದ್ರತೆಗೆ ಸೂಚನೆ
Delhi Red Fort Car Blast: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಫೋಟಗೊಂಡಿರುವ ಘಟನೆ ನಡೆದಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಸದ್ಯ ಎಲ್ಲೆಡೆ ಹೈಅಲರ್ಟ್ ಘೋಷಿಸಲಾಗಿದ್ದು, ಇತ್ತ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಮಹತ್ವದ ಆದೇಶ ಹೊರಡಿಸಿದ್ದಾರೆ.
- Kiran HV
- Updated on: Nov 10, 2025
- 9:04 pm
ಜೈಲಿನಲ್ಲಿರೋ ದರ್ಶನ್ ಎರಡೂವರೆ ತಿಂಗಳಲ್ಲಿ ಕಳೆದುಕೊಂಡ ದೇಹದ ತೂಕ ಎಷ್ಟು?
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಎರಡೂವರೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ದರ್ಶನ್ ಬರೋಬ್ಬರಿ 13 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ದಿನಚರಿ, ಜೈಲು ಪರಿಸ್ಥಿತಿ, ಸೆಲ್‌ನಲ್ಲಿ ಇರುವ ವ್ಯವಸ್ಥೆ, ಸಿಬ್ಬಂದಿಯ ಭದ್ರತಾ ನಿಯಮಗಳು ಹಾಗೂ ಓದುವ ಆಸಕ್ತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Kiran HV
- Updated on: Oct 30, 2025
- 1:33 pm
ಧರ್ಮಸ್ಥಳ ಪ್ರಕರಣಕ್ಕೆ ಅಧಿಕೃತವಾಗಿ ED ಎಂಟ್ರಿ, ತನಿಖೆ ಶುರುವಾಗಿದ್ದು ಎಲ್ಲಿಂದ ಗೊತ್ತಾ?
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾಡಿರುವ ಆರೋಪ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಬಲವಾದ ಕುರುಹುಗಳು ಪತ್ತೆಯಾಗಿಲ್ಲ. ಹೀಗಾಗಿ ಆರೋಪ ಮಾಡಿರುವ ಮಾಸ್ಕ್ ಮ್ಯಾನ್ ನನ್ನೇ ಎಸ್ಐಟಿ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ನಡುವೆ ಇದೀಗ ಈ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ(ನಿರ್ದೇಶನಾಲಯ) ಪ್ರವೇಶ ಮಾಡಿದೆ.
- Kiran HV
- Updated on: Sep 2, 2025
- 3:41 pm
ಮತಗಳ್ಳತನ ಆರೋಪ: ಚುನಾವಣೆ ಕಚೇರಿಗೆ ಬಿಗಿ ಭದ್ರತೆ, ದೂರು ಸಲ್ಲಿಸಲು 6 ಜನರಿಗೆ ಅವಕಾಶ
ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಕಳ್ಳತನವಾಗಿದೆ ಎಂದು ಗುರುವಾರ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ ಬೆಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆ ಬಳಿಕ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಕಾಂಗ್ರೆಸ್ನ 6 ನಾಯಕರಿಗಷ್ಟೇ ಅನುಮತಿ ನೀಡಿದ್ದಾರೆ.
- Kiran HV
- Updated on: Aug 8, 2025
- 11:33 am
ಬೆಂಗಳೂರು ಕಾಲ್ತುಳಿತ: ದುರಂತಕ್ಕೆ ಕಾರಣವೇನು? ಮತ್ತಷ್ಟು ಸ್ಫೋಟಕ ಅಂಶಗಳು ಬಯಲಿಗೆ
ಬೆಂಗಳೂರಿನ ಇತಿಹಾಸದಲ್ಲೇ ಕರಾಳ ಅಧ್ಯಾಯ. ಆರ್‌ಸಿಬಿ ಸಂಭ್ರಮಾಚರಣೆಯಿಂದಾಗಿ ಕಪ್ಪು ಚುಕ್ಕೆ. ಚಿನ್ನಸ್ವಾಮಿ ಸ್ಟೇಡಿಯಿಂ ಬಳಿ ಕಾಲ್ತುಳಿತಕ್ಕೆ 11ಮಂದಿ ಸಾವಿಗೆ ಕಾರಣವೇನು? ಹೊಣೆ ಯಾರು? ವೈಫಲ್ಯ ಯಾರದು ಹೀಗೆ ಹಲವು ಪ್ರಶ್ನೆಗಳು ದೊಡ್ಡ ಚರ್ಚೆಗೆ ಕಾರಣವಾಗಿದೆ.ಪೊಲೀಸರ ಮುನ್ನೆಚ್ಚರಿಕೆ ಧಿಕ್ಕರಿಸಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಇಷ್ಟೆಲ್ಲಾ ಅವಾಂತರ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಪ್ರಾಥಮಿಕ ತನಿಖೆಯಲ್ಲಿ ಕಾಲ್ತುಳಿತದ ಘೋರ ಘಟನೆಗೆ ಕಾರಣ ಏನೆಂದು ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಿವೆ. ಇದ್ರ ಎಕ್ಸ್‌ಕ್ಲೂಸಿವ್ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.
- Kiran HV
- Updated on: Jun 10, 2025
- 5:17 pm
ಬೆಂಗಳೂರು ಕಾಲ್ತುಳಿತ: ದುರಂತಕ್ಕೆ ಕಾರಣವಾಯ್ತಾ ವಿಧಾನಸೌಧದ ಬಳಿ ಮಾಡಿದ ಆ ಘೋಷಣೆ?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳು ಉಸಿರುಚೆಲ್ಲಿದರೆ, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರಂತ ಸದ್ಯ ರಾಷ್ಟ್ರಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಇದೀಗ ವಿಧಾನಸೌಧದ ಬಳಿಯ ಲೋಪಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- Kiran HV
- Updated on: Jun 10, 2025
- 1:21 pm
ಕಾಲ್ತುಳಿತ: ಐವರು ಪೊಲೀಸ್ ಅಧಿಕಾರಿಗಳ ಅಮಾನತು, ಸಿಎಂಗೆ ಭಾರತೀಯ ಪೊಲೀಸ್ ಒಕ್ಕೂಟ ಖಡಕ್ ಪತ್ರ
Bengaluru RCB Victory Celebrations Stampede: ಬುಧವಾರ (ಜೂ.03) ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಟ್ಟಿದ್ದಾರೆ. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರನ್ನು ಅವರನ್ನು ಅಮಾನತು ಮಾಡಿದೆ. ಈ ಅಮಾನತು ಹಿಂಪಡೆಯುವಂತೆ ಭಾರತೀಯ ಪೊಲೀಸ್ ಒಕ್ಕೂಟ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ.
- Kiran HV
- Updated on: Jun 9, 2025
- 9:07 pm
ಕಾಲ್ತುಳಿತ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, ಗುಪ್ತಚರ ಇಲಾಖೆಗೆ ಹೊಸ ಮುಖ
Bengaluru RCB Victory Celebrations Stampede: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದೆ. ಐಪಿಎಸ್ ಶ್ರೇಣಿಯ ಕೆಲ ಅಧಿಕಾರಿಗಳನ್ನು ವರ್ಗಾಣೆಗೊಳಿಸಿದ್ದರೇ, ಕೆಲ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಇನ್ನು ವರ್ಗಾವಣೆಯಿಂದ ಖಾಲಿಯಾಗಿದ್ದ ಗುಪ್ತಚರ ಇಲಾಖೆಯ ಎಡಿಜಿಪಿ ಹುದ್ದೆಗೂ ನೇಮಕ ಮಾಡಲಾಗಿದೆ.
- Kiran HV
- Updated on: Jun 6, 2025
- 9:25 pm
ಬೆಂಗಳೂರು ಕಾಲ್ತುಳಿತ: ಆರ್‌ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿ ನಾಲ್ವರ ಬಂಧನ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಮ್ಯಾನೇಜ್ಮೆಂಟ್ನ ಮೂವರು ಆಯೋಜಕರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಗುರುವಾರ ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಸರ್ಕಾರದ ಈ ನಡೆಗೆ ವಿರೋಧ ಕೂಡ ವ್ಯಕ್ತವಾಗುತ್ತಿದೆ.
- Kiran HV
- Updated on: Jun 6, 2025
- 9:46 am
ಮಾಕ್ ಡ್ರಿಲ್: ಬೆಂಗಳೂರಿನಲ್ಲಿ ನಾಳೆ (ಬುಧವಾರ) ಸಂಜೆ ವಿದ್ಯುತ್ ಸ್ಥಗಿತ
ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತದಲ್ಲಿ ಭದ್ರತೆ ಹೆಚ್ಚಾಗಿದೆ. ಮೇ 7 ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಯಲಿದೆ. ಬೆಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಅಭ್ಯಾಸ ನಡೆಯಲಿದೆ. ಬೆಂಗಳೂರಿನಲ್ಲಿ ಸಂಜೆ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ. ವಿವಿಧ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಈ ಅಭ್ಯಾಸ ಸಹಾಯ ಮಾಡುತ್ತದೆ.
- Kiran HV
- Updated on: May 6, 2025
- 10:34 pm