AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indira Canteen: ಇಂದಿರಾ ಕ್ಯಾಂಟೀನ್​​​ಗಳಿಗಾಗಿ ಹೊಸ ಟೆಂಡರ್​​; ಸರ್ಕಾರದಿಂದ ಅನುಮೋದನೆ

ಟೆಂಡರ್‌ಗಳನ್ನು ಅನುಮೋದಿಸುವುದರ ಜೊತೆಗೆ, 50 ಹೊಸ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಮೂಲಸೌಕರ್ಯಗಳನ್ನು ಒದಗಿಸಲೂ ಸರ್ಕಾರ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

Indira Canteen: ಇಂದಿರಾ ಕ್ಯಾಂಟೀನ್​​​ಗಳಿಗಾಗಿ ಹೊಸ ಟೆಂಡರ್​​; ಸರ್ಕಾರದಿಂದ ಅನುಮೋದನೆ
ಇಂದಿರಾ ಕ್ಯಾಂಟೀನ್‌
TV9 Web
| Updated By: Ganapathi Sharma|

Updated on: Jul 11, 2023 | 9:16 PM

Share

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಗೆ (Indira Canteen) ಪುನಶ್ಚೇತನ ನೀಡಲು ಮುಂದಾಗಿರುವ ನೂತನ ಕಾಂಗ್ರೆಸ್​ ಸಸರ್ಕಾರ, ಅದಕ್ಕಾಗಿ ಟೆಂಡರ್‌ಗಳನ್ನು ಕರೆಯಲು ಬಿಬಿಎಂಪಿಗೆ (BBMP) ಅನುಮೋದನೆ ನೀಡಿದ ಎಂದು ವರದಿಯಾಗಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ಪ್ರತಿ ಬಿಬಿಎಂಪಿ ವಲಯಕ್ಕೆ ಒಂದರಂತೆ ಎಂಟು ಪ್ಯಾಕೇಜ್‌ಗಳಾಗಿ ವಿಭಜಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಸಬ್ಸಿಡಿ ದರದಲ್ಲಿ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಒದಗಿಸುವ 200 ಕ್ಯಾಂಟೀನ್‌ಗಳನ್ನು ನಡೆಸಲು ಪೌರ ಸಂಸ್ಥೆಗೆ ದಿನಕ್ಕೆ 31 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಅವರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಟೆಂಡರ್‌ ಕರೆಯುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಟೆಂಡರ್‌ಗಳನ್ನು ಅನುಮೋದಿಸುವುದರ ಜೊತೆಗೆ, 50 ಹೊಸ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಮೂಲಸೌಕರ್ಯಗಳನ್ನು ಒದಗಿಸಲೂ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ನಗರದಾದ್ಯಂತ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸುವ ಜವಾಬ್ದಾರಿಯನ್ನು ಎರಡು ಸಂಸ್ಥೆಗಳಿಗೆ ವಹಿಸಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ತರಕಾರಿ ಅಂಗಡಿಯಿಂದ 40 ಕೆಜಿ ಟೊಮೆಟೊ ಕಳ್ಳತನ

ಈ ಮಧ್ಯೆ, ಕ್ಯಾಂಟೀನ್​ಗಳಲ್ಲಿ ಆಹಾರದ ಕೊರತೆಯ ಜೊತೆಗೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ವಿಧಿಸುತ್ತಿವೆ ಎಂಬ ದೂರುಗಳೂ ಇವೆ ಎಂದು ವರದಿ ಉಲ್ಲೇಖಿಸಿದೆ.

ಪ್ರತಿ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರು ತಕ್ಷಣ ದೂರುಗಳನ್ನು ನೀಡಲು ಅವಕಾಶ ಕಲ್ಪಿಸಲು ಹಾಗೂ ದೂರುಗಳನ್ನು ಖಚಿತಪಡಿಸಿಕೊಳ್ಳಲು ಸಹಾಯವಾಣಿ ಸಂಖ್ಯೆ ಆರಂಭಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದೂ ವರದಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ