ಬೆಂಗಳೂರಿನಲ್ಲಿ 2 ವರ್ಷದ ಮಗು ಮೇಲೆ ಬೀದಿ ನಾಯಿಗಳ ದಾಳಿ! ಸಾವು ಬದುಕಿನ ನಡುವೆ ಮಗು ಹೋರಾಟ

| Updated By: sandhya thejappa

Updated on: Sep 04, 2021 | 3:41 PM

ಮನೆ ಮುಂದೆ ಎರಡು ವರ್ಷದ ಮಗು ಆಟವಾಡುತ್ತಿತ್ತು. ಈ ವೇಳೆ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ. ಮಗುವಿನ ಕುತ್ತಿಗೆ, ತೊಡೆ, ಕಿವಿ ಭಾಗಕ್ಕೆ ಕಚ್ಚಿವೆ.

ಬೆಂಗಳೂರಿನಲ್ಲಿ 2 ವರ್ಷದ ಮಗು ಮೇಲೆ ಬೀದಿ ನಾಯಿಗಳ ದಾಳಿ! ಸಾವು ಬದುಕಿನ ನಡುವೆ ಮಗು ಹೋರಾಟ
ಗಾಯಗೊಂಡಿರುವ ಮಗು
Follow us on

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ (Street Dogs) ಹಾವಳಿ ಹೆಚ್ಚಾಗುತ್ತಿದೆ. ಬೀದಿ ನಾಯಿಗಳ ಗುಂಪು ಜನರ ಮೇಲೆ ಏಕಾಏಕಿ ದಾಳಿ ನಡೆಸುತ್ತಿದೆ. ಇಂದು ಹೆಚ್ಎಎಲ್ ಬಳಿಯ ನಾರಾಯಣರೆಡ್ಡಿ ಲೇಔಟ್​ನಲ್ಲಿ ಎರಡು ವರ್ಷದ ಹೆಣ್ಣು ಮಗುವೊಂದರೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. 2 ವರ್ಷದ ಹೆಣ್ಣು ಮಗುವನ್ನು ನಾಯಿಗಳು ಕಚ್ಚಿ ಎಳೆದಾಡಿದ್ದು, ಗಾಯಗೊಂಡಿರುವ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ.

ಮನೆ ಮುಂದೆ ಎರಡು ವರ್ಷದ ಮಗು ಆಟವಾಡುತ್ತಿತ್ತು. ಈ ವೇಳೆ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ. ಮಗುವಿನ ಕುತ್ತಿಗೆ, ತೊಡೆ, ಕಿವಿ ಭಾಗಕ್ಕೆ ಕಚ್ಚಿವೆ. ಗಾಯಗೊಂಡಿರುವ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಬೀದಿ ನಾಯಿಗಳ ಹಾವಳಿ ತಡೆಯುವಂತೆ ಈ ಹಿಂದೆ ಹಲವು ಬಾರಿ ಬಿಬಿಎಂಪಿಗೆ ದೂರು ನೀಡಲಾಗಿತ್ತು. ಸದ್ಯ ಮಗುವಿನ ಪೊಷಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಅಂತ ಎಫ್ಐಆರ್ ದಾಖಲಾಗಿದೆ. ಮಹಾದೇವಪುರ ವಲಯ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈವರೆಗೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಗಳಿಗೂ ನೋಟಿಸ್ ನೀಡಿಲ್ಲ. ಘಟನೆ ಬಗ್ಗೆ ಹೆಚ್ಎಎಲ್ ಪೊಲೀಸರು ವಿಚಾರಣೆ ಕೂಡ ನಡೆಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು; ಬಿಬಿಎಂಪಿ ಅಧಿಕಾರಿಗಳಿಗೆ ಗೌರವ್ ಗುಪ್ತಾ ಸೂಚನೆ

ಕೊರೊನಾ ಪ್ರಕರಣ ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ

(Street Dog attack on two years Girl Baby in Bengaluru)