ಬೆಂಗಳೂರಿನ ಜನ ಎಷ್ಟು ಭಾಷೆ ಮಾತಾಡುತ್ತಾರೆ ಗೊತ್ತಾ?; ಭಾರತದಲ್ಲೇ ಅತಿ ಹೆಚ್ಚು ಭಾಷಿಗರಿರುವ ನಗರ ಬೆಂಗಳೂರು

Bangalore: 2011ರಲ್ಲಿ ನಡೆದ ಜನಗಣತಿ ಪ್ರಕಾರ, ಬೆಂಗಳೂರಿನಲ್ಲಿ 107 ಭಾಷೆಗಳನ್ನು ಮಾತನಾಡುವ ಜನರು ವಾಸಿಸುತ್ತಿದ್ದಾರೆ. ಇಡೀ ಭಾರತದಲ್ಲೇ ಅತಿ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರು ಬೆಂಗಳೂರಿನಲ್ಲಿದ್ದಾರೆ.

ಬೆಂಗಳೂರಿನ ಜನ ಎಷ್ಟು ಭಾಷೆ ಮಾತಾಡುತ್ತಾರೆ ಗೊತ್ತಾ?; ಭಾರತದಲ್ಲೇ ಅತಿ ಹೆಚ್ಚು ಭಾಷಿಗರಿರುವ ನಗರ ಬೆಂಗಳೂರು
ಬೆಂಗಳೂರಿನ ವಿಧಾನಸೌಧ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 04, 2021 | 5:16 PM

ಬೆಂಗಳೂರು: ಬೆಂಗಳೂರು (Bengaluru) ಭಾರತ ಮಾತ್ರವಲ್ಲದೆ ವಿದೇಶಗಳ ಜನರಿಗೂ ಆಸರೆ ಕೊಟ್ಟಿರುವ ನಗರ. ಇಲ್ಲಿ ಪ್ರತಿ ಏರಿಯಾದಲ್ಲೂ ಕಡಿಮೆಯೆಂದರೂ ಹತ್ತು ಭಾಷೆಗಳನ್ನು ಮಾತನಾಡುವ ಜನರು ಸಿಕ್ಕೇ ಸಿಗುತ್ತಾರೆ. ಕನ್ನಡಿಗರು ಎಷ್ಟು ಜನರಿದ್ದಾರೋ ಅದಕ್ಕಿಂತಲೂ ಹೆಚ್ಚು ಜನರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ ಎಷ್ಟು ರೀತಿಯ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ ಎಂಬ ಬಗ್ಗೆ ಅಧ್ಯಯನವೊಂದು ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದೆ.

2011ರಲ್ಲಿ ನಡೆದ ಜನಗಣತಿ ಪ್ರಕಾರ, ಬೆಂಗಳೂರಿನಲ್ಲಿ 107 ಭಾಷೆಗಳನ್ನು ಮಾತನಾಡುವ ಜನರು ವಾಸಿಸುತ್ತಿದ್ದಾರೆ. ಇಡೀ ಭಾರತದಲ್ಲೇ ಅತಿ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರು ಬೆಂಗಳೂರಿನಲ್ಲಿದ್ದಾರೆ. 2011ರ ಜನಗಣತಿ ಆಧಾರದ ಮೇಲೆ ದೆಹಲಿ ಮೂಲದ ಶಿಕ್ಷಣ ತಜ್ಞರೊಬ್ಬರು ನಡೆಸಿರುವ ಸಂಶೋಧನೆಯಲ್ಲಿ ಈ ಅಂಶ ಹೊರಬಿದ್ದಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶೇ. 44.5ರಷ್ಟು ಜನರು ಕನ್ನಡ ಮಾತನಾಡುವವರು ವಾಸಿಸುತ್ತಿದ್ದಾರೆ. ಶೇ.15ರಷ್ಟು ತಮಿಳು, ಶೇ.14ರಷ್ಟು ತೆಲುಗು, ಶೇ.12ರಷ್ಟು ಉರ್ದು, ಶೇ. 3ರಷ್ಟು ಮಲೆಯಾಳಂ ಭಾಷೆ, ಶೇ. 2ರಷ್ಟು ಮರಾಠಿ, ಶೇ. 0.6ರಷ್ಟು ಕೊಂಕಣಿ, ಶೇ. 0.6ರಷ್ಟು ಬೆಂಗಾಲಿ, ಶೇ. 0.5ರಷ್ಟು ಒಡಿಯಾ ಭಾಷೆಗಳನ್ನು ಮಾತನಾಡುವವರು ವಾಸವಾಗಿದ್ದಾರೆ. ಉಳಿದ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಬಹಳ ಕಡಿಮೆಯಿದೆ. ಬೆಂಗಳೂರಿನಲ್ಲಿರುವವರು ಮಾತನಾಡುವ ಭಾಷೆಗಳಲ್ಲಿ 22 ಶೆಡ್ಯೂಲ್ಡ್​ ಮತ್ತು 84 ನಾನ್ ಶೆಡ್ಯೂಲ್ಡ್​ ಭಾಷೆಗಳನ್ನು ಮಾತನಾಡುವವರು ಇದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಭಾಷೆಗಳನ್ನು ಮಾತನಾಡುವವರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನ ನಂತರದ ಸ್ಥಾನವನ್ನು ನಾಗಾಲ್ಯಾಂಡ್​ನ ದೀಮಾಪುರ್ (103 ಭಾಷೆ), ಅಸ್ಸಾಂನ ಸೋನಿತ್​ಪುರ್ (101) ನಗರಗಳು ಪಡೆದಿವೆ ಎಂದು ದೆಹಲಿಯ ಶಿಕ್ಷಣ ತಜ್ಞರಾದ ಶಮಿಕಾ ರವಿ ಅಧ್ಯಯನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 2 ವರ್ಷದ ಮಗು ಮೇಲೆ ಬೀದಿ ನಾಯಿಗಳ ದಾಳಿ! ಸಾವು ಬದುಕಿನ ನಡುವೆ ಮಗು ಹೋರಾಟ

ಬೆಂಗಳೂರಿನಲ್ಲಿ ನಕಲಿ ವೀಸಾ ತಯಾರಿಸುತ್ತಿದ್ದ ಕೇರಳ ಮೂಲದ ಆರೋಪಿ ಸೆರೆ

(Bengaluru News 107 Languages Spoken in Bangalore Top 3 Highest Language Speaking Cities in India)

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್