ಬೆಂಗಳೂರಿನಲ್ಲಿ ನಕಲಿ ವೀಸಾ ತಯಾರಿಸುತ್ತಿದ್ದ ಕೇರಳ ಮೂಲದ ಆರೋಪಿ ಸೆರೆ

ಆರೋಪಿ ನಿಪುಣ್ ಫೇಸ್​ಬುಕ್ ಮೂಲಕ ಮೆಸೇಜ್ ಮಾಡಿ ಜನರನ್ನ ಸಂಪರ್ಕ ಮಾಡುತ್ತಿದ್ದ. ಅದರಂತೆ ವಾಟ್ಸಾಪ್​ನಲ್ಲಿ ಅವರ ಮಾಹಿತಿ ಪಡೆಯುತ್ತಿದ್ದ. ನಂತರ ಹುಳಿಮಾವಿನ ತನ್ನ ರೂಂನಲ್ಲಿ ನಕಲಿ ವೀಸಾ ತಯಾರಿಸಿ ವಾಟ್ಸಾಪ್​ನಲ್ಲಿ ನಕಲಿ ಪಿಡಿಎಫ್ ಕಳುಹಿಸುತ್ತಿದ್ದ.

ಬೆಂಗಳೂರಿನಲ್ಲಿ ನಕಲಿ ವೀಸಾ ತಯಾರಿಸುತ್ತಿದ್ದ ಕೇರಳ ಮೂಲದ ಆರೋಪಿ ಸೆರೆ
ಆರೋಪಿ ನಿಪುಣ್
Follow us
TV9 Web
| Updated By: sandhya thejappa

Updated on: Sep 02, 2021 | 11:10 AM

ಬೆಂಗಳೂರು: ನಗರದಲ್ಲಿ ನಕಲಿ ವೀಸಾ (visa) ತಯಾರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ (Kerala) ಮೂಲದ ನಿಪುಣ್ ಎಂಬುವವನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಪಿಯುಸಿ ಓದಿರುವ ಆರೋಪಿ ನಿಪುಣ್ ಕೆಲವು ವರ್ಷಗಳ ಹಿಂದೆ ಕೇರಳದಿಂದ ಬೆಂಗಳೂರಿಗೆ ಬಂದಿದ್ದ. ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ನಗರದ ಕಾಲೇಜುಗಳಲ್ಲಿ ಸೀಟು ಕೊಡಿಸುವ ಬ್ರೊಕರ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ವೀಸಾ ತಯಾರಿ ಮಾಡಿಕೊಡುವುದಾಗಿ ಜನರನ್ನ ಸಂಪರ್ಕ ಮಾಡುತ್ತಿದ್ದ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಿಪುಣ್ ಫೇಸ್​ಬುಕ್ ಮೂಲಕ ಮೆಸೇಜ್ ಮಾಡಿ ಜನರನ್ನ ಸಂಪರ್ಕ ಮಾಡುತ್ತಿದ್ದ. ಅದರಂತೆ ವಾಟ್ಸಾಪ್​ನಲ್ಲಿ ಅವರ ಮಾಹಿತಿ ಪಡೆಯುತ್ತಿದ್ದ. ನಂತರ ಹುಳಿಮಾವಿನ ತನ್ನ ರೂಂನಲ್ಲಿ ನಕಲಿ ವೀಸಾ ತಯಾರಿಸಿ ವಾಟ್ಸಾಪ್​ನಲ್ಲಿ ನಕಲಿ ಪಿಡಿಎಫ್ ಕಳುಹಿಸುತ್ತಿದ್ದ. ಇದನ್ನೆ ಅಸಲಿ ವೀಸಾ ಎಂದು ನಂಬಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಮೋಸ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಒಬ್ಬರಿಗೆ ವೀಸಾ ಮಾಡಿಕೊಡಲು ಐವತ್ತು ಸಾವಿರದಿಂದ ಎರಡು ಲಕ್ಷದವರೆಗೆ ಹಣ ಪಡೆಯುತ್ತಿದ್ದ. ಸದ್ಯ ಮೋಸ ಹೋದವರು ಪೊಲೀಸರಿಗೆ ದೂರು ನೀಡಿದ್ದು, ಹುಳಿಮಾವು ಠಾಣೆ ಪೊಲೀಸರು ಆರೋಪಿ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಒಂದು ಲ್ಯಾಪ್ಟಾಪ್, ಪ್ರಿಂಟಿಂಗ್ ಮಷೀನ್, ಸೀಲಿಂಗ್ ಪ್ಯಾಡ್ ಹಾಗೂ ಕೆಲ ನಕಲಿ ವೀಸಾ ಪ್ರತಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ

‘ಒಂದೇ ದೇಹಕ್ಕೆ ಎರಡು ತಲೆ, ನಾಲ್ಕು ಕಣ್ಣಿನ ಎಮ್ಮೆ ಕರುವಿನ ಜನನ; ಅಪರೂಪದ ಫೋಟೋ ವೈರಲ್

ಅತಿಯಾಗಿ ಕರಿಮೆಣಸು ಸೇವಿಸುವ ಅಭ್ಯಾಸ ಇದೆಯೇ? ಅಡ್ಡ ಪರಿಣಾಮಗಳ ಬಗ್ಗೆ ಗಮನಹರಿಸಿ

(Police have arrested a man accused of preparing a fake visa in Bangalore)