‘ಒಂದೇ ದೇಹಕ್ಕೆ ಎರಡು ತಲೆ, ನಾಲ್ಕು ಕಣ್ಣಿನ ಎಮ್ಮೆ ಕರುವಿನ ಜನನ‘; ಅಪರೂಪದ ಫೋಟೋ ವೈರಲ್

TV9 Digital Desk

| Edited By: shruti hegde

Updated on:Sep 02, 2021 | 11:08 AM

ಅಪರೂಪದ ಎಮ್ಮೆಯ ಕರುವನ್ನು ನೋಡಲು ನೆರೆಯ ಹಳ್ಳಿಗಳಿಂದ ಜನರು ಆಗಮಿಸುತ್ತಿದ್ದಾರೆ. ಇಂತಹ ಸ್ಥಿತಿಗೆ ಕಾರಣವೇನು ಎಂಬುದನ್ನು ತಿಳಿಯಲು ಜನರು ಕುತೂಹಲರಾಗಿದ್ದಾರೆ.

‘ಒಂದೇ ದೇಹಕ್ಕೆ ಎರಡು ತಲೆ, ನಾಲ್ಕು ಕಣ್ಣಿನ ಎಮ್ಮೆ ಕರುವಿನ ಜನನ‘; ಅಪರೂಪದ ಫೋಟೋ ವೈರಲ್
‘ಒಂದೇ ದೇಹಕ್ಕೆ ಎರಡು ತಲೆ, ನಾಲ್ಕು ಕಣ್ಣಿನ ಎಮ್ಮೆ ಕರುವಿನ ಜನನ; ಅಪರೂಪದ ಫೋಟೋ ವೈರಲ್

ಎಮ್ಮೆಯೊಂದು ಒಂದೇ ದೇಹಕ್ಕೆ ಎರಡು ತಲೆ, ನಾಲ್ಕು ಕಣ್ಣು ಇರುವ ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅಪರೂಪದಲ್ಲಿ ಅಪರೂಪದ ಈ ಎಮ್ಮೆ ಮರಿಯನ್ನು ನೋಡಿದ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಧೋಲ್ಪುರ್ ಜಿಲ್ಲೆಯ ಸಿಕ್ರೌಡ ಗ್ರಾಮದಲ್ಲಿ ಹಲವು ವರ್ಷಗಳಿಂದ ಸಾಕುತ್ತಿದ್ದ ಎಮ್ಮೆಯ ಕರು ಇದಾಗಿದ್ದು, ಎರಡು ತಲೆ, ಎರಡು ಬಾಯಿ ಜತೆಗೆ ನಾಲ್ಕು ಕಣ್ಣುಗಳನ್ನು ಹೊಂದಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಅಪರೂಪದ ಎಮ್ಮೆಯ ಕರುವನ್ನು ನೋಡಲು ನೆರೆಯ ಹಳ್ಳಿಗಳಿಂದ ಜನರು ಆಗಮಿಸುತ್ತಿದ್ದಾರೆ. ಇಂತಹ ಸ್ಥಿತಿಗೆ ಕಾರಣವೇನು ಎಂಬುದನ್ನು ತಿಳಿಯಲು ಜನರು ಕುತೂಹಲರಾಗಿದ್ದಾರೆ. ಏತನ್ಮಧ್ಯೆ ಈ ವಿಚಿತ್ರ ಎಮ್ಮೆ ಕರುವಿಗೆ ಹಾಲುಣಿಸುತ್ತಾ, ನೀರು ಕೊಡುತ್ತಾ ಮನೆಯವರೆಲ್ಲ ಆರೈಕೆ ಮಾಡುತ್ತಿದ್ದಾರೆ. ಕರು ಆರೋಗ್ಯವಾಗಿದೆ ಮತ್ತು ಎರಡೂ ಬಾಯಿಯಿಂದಲು ಹಾಲು ಕುಡಿಯುತ್ತದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಕರುವಿನ ಜನನದ ವೇಳೆ ಎಮ್ಮೆ ಮತ್ತು ಕರುವಿಗೆ ಯಾವುದೇ ಅಪಾಯವಾಗಿಲ್ಲ. ಸುಲಲಿತವಾಗಿ ಎಮ್ಮೆ ಕರುವಿಗೆ ಜನ್ಮ ನೀಡಿದೆ. ಕರುವನ್ನು ಸಾಮಾನ್ಯ ರೀತಿಯಲ್ಲಿಯೇ ನೋಡಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ಪಶು ವೈದ್ಯರಾದ ಗುಡ್ಡೆ ಸಿಂಗ್ ತಿಳಿಸಿದ್ದಾರೆ.

ಇತ್ತೀಚೆಗೆ ಇದೇ ರೀತಿಯ ಪ್ರಕರಣವೊಂದು ದಾಖಲಾಗಿತ್ತು. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಒಂದೇ ದೇಹಕ್ಕೆ ಎರಡು ತಲೆ, ಬಾಯಿ ಹಾಗೂ ನಾಲ್ಕು ಕಣ್ಣುಗಳಿರುವ ಕರುವಿನ ಜನನವಾಗಿತ್ತು. ಈ ಅಪರೂಪದ ಎರಡು ತಲೆಯ ಕರುವಿಗೆ ಹಸು ಜನ್ಮ ನಿಡಿತ್ತು. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಕೋಶಗಳ ಅಸಹಜ ಬೆಳವಣಿಗೆಯಿಂದಾಗಿ ಇಂತಹ ಸಂಗತಿಗಳು ಸಂಭವಿಸುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದರು.

ಉತ್ತರ ಪ್ರದೇಶದ ಮುಖ್ಯ ಪಶುವೈದ್ಯ ಅಧಿಕಾರಿ ಡಾ. ಸತ್ಯ ಪ್ರಕಾಶ್ ಪಾಂಡೆ ಅವರು ತಿಳಿಸಿದಂತೆ, ಇದು ದೈವಿಕ ಪವಾಡವಲ್ಲ. ಗರ್ಭದಲ್ಲಿ ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಜೀವಕೋಶಗಳು ಅನೇಕ ಭಾಗಗಳಾಗಿ ವಿಭಜನೆಯಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಜೀವಕೋಶಗಳು ಹೆಚ್ಚುವರಿ ಬೆಳವಣಿಗೆಯಾಗುತ್ತವೆ. ಅದಕ್ಕಾಗಿಯೇ ಎರಡು ತಲೆಗಳು ರೂಪುಗೊಳ್ಳುತ್ತವೆ ಎಂದು ವಿವರಿಸಿದ್ದರು.

ಇದನ್ನೂ ಓದಿ:

ವಿಶಿಷ್ಟ ವರದಿಗಾರಿಕೆಗೆ ಹೆಸರಾಗಿರುವ ಹಫೀಜ್ ಎಮ್ಮೆ ಜೊತೆ ನಡೆಸಿದ ಸಂದರ್ಶನದೊಂದಿಗೆ ನಿಮ್ಮನ್ನು ನಗಿಸಲು ವಾಪಸ್ಸು ಬಂದಿದ್ದಾರೆ

Viral Video: ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ವಿಡಿಯೋ ವೈರಲ್​

(One body 2 heads and 4 eyes buffalo born in rajasthan)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada