ವಿಶಿಷ್ಟ ವರದಿಗಾರಿಕೆಗೆ ಹೆಸರಾಗಿರುವ ಹಫೀಜ್ ಎಮ್ಮೆ ಜೊತೆ ನಡೆಸಿದ ಸಂದರ್ಶನದೊಂದಿಗೆ ನಿಮ್ಮನ್ನು ನಗಿಸಲು ವಾಪಸ್ಸು ಬಂದಿದ್ದಾರೆ

ಪಾಕಿಸ್ತಾನ ಮತ್ತೊಬ್ಬ ಪತ್ರಕರ್ತರಾಗಿರುವ ನೈಲಾ ಇನಾಯತ್ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋನಲ್ಲಿ ಹಫೀಜ್ ಮೊದಲಿಗೆ, ‘ ಲಾಹೋರ್ ನಿಮಗೆ ಹೇಗೆ ಅನಿಸುತ್ತಿ ದೆ? (ಲಾಹೋರ್​ ಆಪ್​ ಕೋ ಕೈಸಾ ಲಗಾ?) ಅಂತ ಕೇಳುತ್ತಾರೆ

ಪಾಕಿಸ್ತಾನದ ವರದಿಗಾರ ಅಮಿನ್ ಹಫೀಜ್ ತಮ್ಮ ಮತ್ತೊಂದು ಹಾಸ್ಯಭರಿತ ವಿಡಿಯೋದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಒಂದು ಎಮ್ಮೆಯ ಸಂದರ್ಶನ ನಡೆಸಿದ್ದು ಸದರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ. ಸದರಿ ವಿಡಿಯೋದಲ್ಲಿ ಹಫೀಜ್ ಕೊಟ್ಟಿಗೆಯಯೊಂದರಲ್ಲಿ ಕಟ್ಟಿರುವ ಎಮ್ಮೆಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಮತ್ತು ಸೋಜಿಗದ ಸಂಗತಿಯೆಂದರೆ ಅವರು ಕೇಳಿದಕ್ಕೆ ಎಮ್ಮೆ ತನ್ನ ಶೈಲಿಯಲ್ಲಿ ‘ಮೂsss’ ಅಂತ ಉತ್ತರಿಸುತ್ತಿದೆ.

ಪಾಕಿಸ್ತಾನ ಮತ್ತೊಬ್ಬ ಪತ್ರಕರ್ತರಾಗಿರುವ ನೈಲಾ ಇನಾಯತ್ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋನಲ್ಲಿ ಹಫೀಜ್ ಮೊದಲಿಗೆ, ‘ ಲಾಹೋರ್ ನಿಮಗೆ ಹೇಗೆ ಅನಿಸುತ್ತಿ ದೆ? (ಲಾಹೋರ್​ ಆಪ್​ ಕೋ ಕೈಸಾ ಲಗಾ?) ಅಂತ ಕೇಳುತ್ತಾರೆ. ಪಾಪದ ಎಮ್ಮೆಗೆ ಏನು ತಿಳಿಯಿತೋ……‘ಮೂsss’ ಅಂತ ಪ್ರತಿಕ್ರಿಯಿಸುತ್ತದೆ. ನಂತರ ಮುಂದುವರೆದು ಅವರು, ‘ನಿಮಗೆ ಲಾಹೋರ್ ಆಹಾರ ಜಾಸ್ತಿ ಇಷ್ಟವಾಯಿತೋ ಅಥವಾ ನಿಮ್ಮ ಹಳ್ಳಿಯ ಆಹಾರವೋ? (ಲಾಹೋರ್​ ಕಾ ಖಾನಾ ಅಚ್ಛಾ ಲಗಾ ಕೀ ಆಪ್ಕೆ ಗಾಂವ್ ಕಾ ಖಾನಾ ಅಚ್ಛಾ ಲಗಾ) ಅಂತ ಕೇಳುತ್ತಾರೆ.

2018 ರಲ್ಲಿ ಹಫೀಜ್ ಕತ್ತೆ ಮತ್ತು ಮಾನವರ ನಡುವಿನ ಸಂಬಂಧ, ಲಾಹೋರ್​ನಲ್ಲಿ ನಡೆಯುವ ಕತ್ತೆ ವ್ಯಾಪಾರ ಮತ್ತು ಅವುಗಳಿಂದ ಮಾನವನಿಗೆ ಆಗುತ್ತರಿರುವ ಲಾಭದ ಬಗ್ಗೆ ಒಂದು ವಿಡಿಯೋ ಮಾಡಿದ್ದರು ಮತ್ತು ಅದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಅವರು ಕತ್ತೆ ಮೇಲೆ ಕೂತು ಪಿಟಿಸಿ ನೀಡಿದ್ದರು. ಅದನ್ನೂ ನೋಡಿ.

ಇದನ್ನೂ ಓದಿ: ಮಹಿಳೆಗೆ ಅಶ್ಲೀಲ ಉತ್ತರ ಕೊಟ್ಟ ಮೈಸೂರು ಮಹಾನಗರ ಪಾಲಿಕೆ ಜೋನಲ್​ ಅಧಿಕಾರಿಗೆ ಕಚೇರಿಯಲ್ಲೇ ಧರ್ಮದೇಟು: ವಿಡಿಯೋ ವೈರಲ್