ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ: ಇಬ್ಬರ ಹಣೆಬರಹವೂ ನಿರ್ಧಾರವಾಗಲಿದೆ ಒಂದೇ ದಿನ; ಹೇಗೆ ಗೊತ್ತಾ?

Shilpa Shetty and Raj Kundra: ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಭವಿಷ್ಯವನ್ನು ನಿರ್ಧರಿಸಲಿದೆ ಒಂದೇ ದಿನ! ಹೇಗೆ ಮತ್ತು ಏಕೆ ಗೊತ್ತೇ?


ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಬದುಕಿನಲ್ಲಿ ವಿಚಿತ್ರವೊಂದು ಸಂಭವಿಸಲಿದೆ. ಒಂದೇ  ದಿನ ಗಂಡ- ಹೆಂಡತಿ ಈರ್ವರ ಹಣೆಬರಹವೂ ನಿರ್ಧಾರವಾಗಲಿದೆ. ಹೌದು. ಜುಲೈ 23ಕ್ಕೆ ಈರ್ವರ ಬದುಕಿನಲ್ಲಿ ಹಲವು ಘಟನೆಗಳು ಸಂಭವಿಸಲಿವೆ. ಶಿಲ್ಪಾ ಶೆಟ್ಟಿಯವರ ಹಂಗಾಮಾ 2 ಸಿನಿಮಾ ಜುಲೈ 23ರಂದು ಬಿಡುಗಡೆಯಾಗಲಿದೆ. ಇದು ಶಿಲ್ಪಾ ಅವರ ವೃತ್ತಿ ಬದುಕನ್ನು ನಿರ್ಧರಿಸಲಿದೆ. ಹಾಗೆಯೇ ಜುಲೈ 23ಕ್ಕೆ ರಾಜ್ ಕುಂದ್ರಾ ಅವರ ಪೊಲೀಸ್ ಕಸ್ಟಡಿ ಮುಗಿಯಲಿದೆ. ಅವರಿಗೆ ಜಾಮೀನು ಲಭ್ಯವಾಗುತ್ತದೆಯೇ ಅಥವಾ ಪೊಲೀಸ್ ಕಸ್ಟಡಿ ಮುಂದುವರೆಯುತ್ತದೆಯೇ ಎಂಬುದನ್ನು ಜುಲೈ 23 ನಿರ್ಧರಿಸಲಿದೆ.

ಶಿಲ್ಪಾ ಶೆಟ್ಟಿ ಬಹಳ ದಿನಗಳ ಬ್ರೇಕ್ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅವರ ಬಾಲಿವುಡ್ ಭವಿಷ್ಯ ಸಹ ಜುಲೈ 23ರಂದೇ ನಿರ್ಧಾರವಾಗಲಿದೆ. ಹಂಗಾಮಾ 2 ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿದ್ದಾರಾ ಸಲ್ಮಾನ್​ ಖಾನ್​ ಪತ್ನಿ ನೂರ್​ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ

ಇದನ್ನೂ ಓದಿ: Priyamani: ‘ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮದುವೆ ಅಸಿಂಧು’; ಮುಸ್ತಫಾ ರಾಜ್ ಮೊದಲ ಪತ್ನಿ ಆರೋಪ

(Both Shilpa Shetty and Raj Kundra’s future will decide in a same day that is July 23rd)