AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೇಗವಾಗಿ ಧಾವಿಸುತ್ತಿದ್ದ ರೈಲಿಗೆ 18 ಚಕ್ರದ ಟ್ರಕ್ ಅಡ್ಡ ಸಿಲುಕಿತು ನೋಡಿ

ಅತ್ಯಂತ ರಭಸದಿಂದ ಧಾವಿಸಿದ ರೈಲಿನ ಜಪಾಟಿಗೆ ಈ ಟ್ರಕ್ ಬೆಚ್ಚಿ ಬೆದರಿಹೋದವರಂತೆ ನುಚ್ಚುನೂರಾಯಿತು. ಈ ಘಟನೆಯನ್ನು ದೂರದಿಂದ ತಮ್ಮ ಕಾರಲ್ಲಿ ಕುಳಿತು ನೋಡುತ್ತಿದ್ದ ವ್ಯಕ್ತಿಯೋರ್ವ ಈ ಘಟನೆಯ ವಿಡಿಯೋ ಮಾಡಿದ್ದ.

Viral Video: ವೇಗವಾಗಿ ಧಾವಿಸುತ್ತಿದ್ದ ರೈಲಿಗೆ 18 ಚಕ್ರದ ಟ್ರಕ್ ಅಡ್ಡ ಸಿಲುಕಿತು ನೋಡಿ
ವಿಡಿಯೋದ ದೃಶ್ಯ
TV9 Web
| Edited By: |

Updated on:Sep 01, 2021 | 9:19 PM

Share

ಬೇರೆ ಯಾವುದಕ್ಕೇ ಅಡ್ಡ ಬಂದರೂ ಸರಿ, ಆದರೆ ವೇಗವಾಗಿ ಚಲಿಸುವ ರೈಲಿಗೆ ಅಡ್ಡ ಬಂದರೆ ಎಂಥವನಾದರೂ ಬದುಕಬಹುದಾ? ರೈಲೆಂದರೆ ವೇಗ, ರೈಲೆಂದರೆ ಗಾಳಿಯಷ್ಟೇ ವೇಗ ಎಂದರೂ ತಪ್ಪಾಗಲಾರದು. ಮನುಷ್ಯ ಮಾತ್ರನಾದವನು ಬಿಡಿ, ದೊಡ್ಡ ದೊಡ್ಡ ವಾಹನಗಳು, ಇನ್ಯಾವುದೇ ವೇಗವಾಗಿ ಚಲಿಸುತ್ತಿರುವ ರೈಲಿಗೆ ಅಡ್ಡ ಬಂದರೆ ಅದು ಚೂರು ಚೂರಾಗುವುದು ಖಚಿತ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ವಿಡಿಯೊ ಒಂದು ಇದಕ್ಕೆ ಸಾಕ್ಷಿಯಂತಿದೆ. ಅಮೆರಿಕ ಟೆಕ್ಸಾಸ್ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಟರ್ಬೈನ್ ಅನ್ನು ಸಾಗಿಸುತ್ತಿದ್ದ 18 ಚಕ್ರದ ಭಾರಿ ಗಾತ್ರದ ಸೆಮಿ ಟ್ರಕ್ ರೈಲುಮಾರ್ಗಕ್ಕೆ ಅಡ್ಡವಾಗಿ ನಿಂತಿತ್ತು. ಹಾ, ನೆನಪಿಡಿ, ಇದು 4 ಚಕ್ರಗಳ ಸಾದಾ ಟ್ರಕ್ ಅಲ್ಲ, ಬದಲಿಗೆ, 18 ಚಕ್ರಗಳ ಭಾರಿ ದೈತ್ಯಾಕಾರದ ಟ್ರಕ್.

ಆದರೆ ಅತ್ಯಂತ ರಭಸದಿಂದ ಧಾವಿಸಿದ ರೈಲಿನ ಜಪಾಟಿಗೆ ಈ ಟ್ರಕ್ ಬೆಚ್ಚಿ ಬೆದರಿಹೋದವರಂತೆ ನುಚ್ಚುನೂರಾಯಿತು. ಈ ಘಟನೆಯನ್ನು ದೂರದಿಂದ ತಮ್ಮ ಕಾರಲ್ಲಿ ಕುಳಿತು ನೋಡುತ್ತಿದ್ದ ವ್ಯಕ್ತಿಯೋರ್ವ ಈ ಘಟನೆಯ ವಿಡಿಯೋ ಮಾಡಿದ್ದ. ಆದರೆ ಅದೃಷ್ಟವಶಾತ್ ಟ್ರಕ್​ನಲ್ಲಿದ್ದ ಯಾರಿಗೂ ಏನೂ ಅಪಾಯವಾಗಲಿಲ್ಲ.

(18 Wheeler semi truck hit by train in Texas Viral Video)

Published On - 9:18 pm, Wed, 1 September 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ