ಅತಿಯಾಗಿ ಕರಿಮೆಣಸು ಸೇವಿಸುವ ಅಭ್ಯಾಸ ಇದೆಯೇ? ಅಡ್ಡ ಪರಿಣಾಮಗಳ ಬಗ್ಗೆ ಗಮನಹರಿಸಿ
ಅಸ್ತಮಾ ರೋಗಿಗಳ ಸಮಸ್ಯೆಗಳನ್ನು ಕರಿಮೆಣಸು ಹೆಚ್ಚಿಸುತ್ತದೆ ಮತ್ತು ಅವರಿಗೆ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ಇದರ ಹೊರತಾಗಿ, ಇತರ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಕರಿಮೆಣಸನ್ನು ವೈದ್ಯರ ಸಲಹೆ ಮತ್ತು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
Updated on: Sep 02, 2021 | 8:48 AM

Aware of These five side effects of black pepper

ಕರಿಮೆಣಸನ್ನು ಹೆಚ್ಚು ತಿಂದರೆ ಹೊಟ್ಟೆಗೆ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆಯಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತದೆ. ಈ ಕಾರಣದಿಂದಾಗಿ ಮಲಬದ್ಧತೆ, ಅಸಿಡಿಟಿ, ಗ್ಯಾಸ್ಟ್ರಬಲ್ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ಹೊರತಾಗಿ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಿದ್ದರೆ, ಕರಿಮೆಣಸು ಸೇವನೆಯನ್ನು ತಪ್ಪಿಸುವುದು ಉತ್ತಮ.

ಗರ್ಭಿಣಿಯರು ಕರಿಮೆಣಸು ತಿನ್ನುವುದನ್ನು ತಪ್ಪಿಸಬೇಕು. ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಕರಿಮೆಣಸು ತಿನ್ನಲು ನಿಷೇಧಿಸಲಾಗಿದೆ. ಇದಲ್ಲದೇ, ಹಾರ್ಮೋನುಗಳ ಬದಲಾವಣೆಯಿಂದಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಉಷ್ಣಾಂಶ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕರಿಮೆಣಸನ್ನು ಸೇವಿಸುವುದರಿಂದ ಈ ಸಮಸ್ಯೆ ಮತ್ತು ಚಡಪಡಿಕೆ ಹೆಚ್ಚಾಗಬಹುದು. ಮತ್ತೊಂದೆಡೆ ಮಕ್ಕಳಿಗೆ ಸ್ತನ್ಯಪಾನ ಮಾಡುವ ಮಹಿಳೆಯರು, ಕರಿಮೆಣಸನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಕರಿಮೆಣಸಿನ ಅತಿಯಾದ ಸೇವನೆಯು ಚರ್ಮವನ್ನು ಒಣಗಿಸುತ್ತದೆ. ಕರಿಮೆಣಸು ಚರ್ಮದ ತೇವಾಂಶವನ್ನು ತೆಗೆದುಹಾಕುತ್ತದೆ. ಆದ್ದರಿಂದ ಚರ್ಮದ ಕಾಳಜಿ ಮಾಡಲು ಬಯಸುವವರು ಕರಿಮೆಣಸಿನ ಸೇವನೆಯನ್ನು ಕಡಿಮೆ ಮಾಡಿ. ಇದನ್ನು ಅತಿಯಾಗಿ ತಿನ್ನುವುದರಿಂದ ಪಿತ್ತರಸ ಹೆಚ್ಚಾಗುತ್ತದೆ ಮತ್ತು ಚರ್ಮದಲ್ಲಿ ತುರಿಕೆಗೆ ಕಾರಣವಾಗಬಹುದು. ಇದಲ್ಲದೇ, ಕರಿಮೆಣಸನ್ನು ಅತಿಯಾಗಿ ಸೇವಿಸುವುದರಿಂದ ಚರ್ಮದ ಮೇಲೆ ಮೊಡವೆಗಳು ಉಂಟಾಗುತ್ತವೆ.

ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳನ್ನು ಹೊಂದಿರುವ ಜನರು, ಕರಿಮೆಣಸು ಸೇವನೆಯಿಂದ ದೂರವಿರಬೇಕು. ಕರಿಮೆಣಸಿನ ತೀಕ್ಷ್ಣತೆಯಿಂದಾಗಿ ಹೊಟ್ಟೆಯ ಹುಣ್ಣುಗಳ ಅಪಾಯವೂ ಇದೆ. ಆದ್ದರಿಂದ, ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ ಮತ್ತು ಅಲ್ಸರ್ ಸಮಸ್ಯೆ ಇದ್ದರೆ ಕರಿಮೆಣಸನ್ನು ತಿನ್ನುವುದು ಒಳ್ಳೆಯದಲ್ಲ.



















