ಕೊರೊನಾ ಕಾಟ: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ವಾಸವಿರುವ 5 ಹಾಸ್ಟೆಲ್, 1 ಕಾಲೇಜು ಸೀಲ್ ಡೌನ್

TV9 Digital Desk

| Edited By: Ayesha Banu

Updated on: Sep 02, 2021 | 11:27 AM

ಕೇರಳದಿಂದ ಬೆಂಗಳೂರಿಗೆ ಬರುವ ಜನರಲ್ಲಿ ಹೆಚ್ಚಾಗಿ ಕೊರೊನಾ ಪತ್ತೆಯಾಗುತ್ತಿದೆ. ಹೀಗಾಗಿ ಕೇರಳದ ಆತಂಕ ಮನೆ ಮಾಡಿದೆ. ಸದ್ಯ ಈಗ ಹೊರಮಾವು ಬಳಿಯ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಕೊರೊನಾ ಕಾಟ: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ವಾಸವಿರುವ 5 ಹಾಸ್ಟೆಲ್, 1 ಕಾಲೇಜು ಸೀಲ್ ಡೌನ್
ಪ್ರಾತಿನಿಧಿಕ ಚಿತ್ರ
Follow us

ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದ್ದು ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಹೊರಮಾವು ಬಳಿಯ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಬೆಂಗಳೂರಿನ 5 ಹಾಸ್ಟೆಲ್, ಒಂದು ಕಾಲೇಜು ಸೀಲ್‌ಡೌನ್ ಮಾಡಲಾಗಿದೆ.

ಕೇರಳದಿಂದ ಬೆಂಗಳೂರಿಗೆ ಬರುವ ಜನರಲ್ಲಿ ಹೆಚ್ಚಾಗಿ ಕೊರೊನಾ ಪತ್ತೆಯಾಗುತ್ತಿದೆ. ಹೀಗಾಗಿ ಕೇರಳದ ಆತಂಕ ಮನೆ ಮಾಡಿದೆ. ಸದ್ಯ ಈಗ ಹೊರಮಾವು ಬಳಿಯ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ವಾಸವಾಗಿರುವ ಐದು ಹಾಸ್ಟೆಲ್ಗಳು, ಒಂದು ಕಾಲೇಜು ಸೀಲ್ ಡೌನ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕೊರೊನಾ ಪತ್ತೆಯಾದರೆ ವಿದ್ಯಾರ್ಥಿ ಇದ್ದ ಕಾಲೇಜು ಒಂದು ವಾರ ಕಂಟೇನ್ಮೆಂಟ್ ಜೋನ್ ಆಗಲಿದೆ. ಹೀಗಾಗಿ ಸೋಂಕಿತರ ಬಗ್ಗೆ ಮಾಹಿತಿ ನೀಡದೆ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಬೆಂಗಳೂರಿನಲ್ಲಿ ಸ್ಕೂಲ್ ಮಕ್ಕಳಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ. ಆದ್ರೆ ಖಾಸಗಿ ಶಾಲೆಗಳು ಸೋಂಕು ಕಾಣಿಸಿಕೊಂಡ ಮಕ್ಕಳ ಮಾಹಿತಿ ಗೌಪ್ಯವಾಗಿ ಇಡುತ್ತಿದ್ದಾರೆ ಎನ್ನಲಾಗಿದೆ. ಸೋಂಕು ಕಾಣಿಸಿಕೊಳ್ಳುವ ಶಾಲೆಯನ್ನ ಒಂದು ವಾರ ಕಂಟೈನ್ಮೆಂಟ್ ಮಾಡಬೇಕು. ಹೀಗಾಗಿ ಸೋಂಕಿತ ಮಕ್ಕಳ‌ ಮಾಹಿತಿಯನ್ನ ಗೌಪ್ಯವಾಗಿ ಇಡಲಾಗ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ವೀಸಾ ತಯಾರಿಸುತ್ತಿದ್ದ ಕೇರಳ ಮೂಲದ ಆರೋಪಿ ಸೆರೆ

(Sixteen nursing students tested positive for coronavirus and 5 hostels 1 college seal down in bengaluru)

ತಾಜಾ ಸುದ್ದಿ

Related Stories

Click on your DTH Provider to Add TV9 Kannada