ಲಸಿಕೆ ಇರುವುದು ಮನುಕುಲದ ಉಳಿವಿಗಾಗಿ; ವೈದ್ಯರೇ ಲಸಿಕೆ ವಿರುದ್ಧ ಅರ್ಜಿ ಹಾಕಿರುವುದು ಆಘಾತಕಾರಿ -ಸಿಜೆ ಸತೀಶ್ ಚಂದ್ರ ಶರ್ಮಾ

ಲಸಿಕೆ ಇರುವುದು ಮನುಕುಲದ ಉಳಿವಿಗಾಗಿ; ವೈದ್ಯರೇ ಲಸಿಕೆ ವಿರುದ್ಧ ಅರ್ಜಿ ಹಾಕಿರುವುದು ಆಘಾತಕಾರಿ -ಸಿಜೆ ಸತೀಶ್ ಚಂದ್ರ ಶರ್ಮಾ
ಕರ್ನಾಟಕ ಹೈಕೋರ್ಟ್​​ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ

ಬೆಂಗಳೂರು: ಲಸಿಕೆ ಇರುವುದು ಮನುಕುಲದ ಉಳಿವಿಗಾಗಿ. ಲಸಿಕೆ ಹಾಕಿಸಿಕೊಂಡು ಶಾಲಾ ಮಕ್ಕಳು ತರಗತಿಗೆ ಹಾಜರಾಗಲು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಸಲಹೆ ನೀಡಿದ್ದಾರೆ.

ಆಯುರ್ವೇದ ಕಾಲೇಜಿನಲ್ಲಿ ಲಸಿಕೆ ಕಡ್ಡಾಯ ಪ್ರಶ್ನಿಸಿ ಡಾ. ಶ್ರೀನಿವಾಸ ಕಕ್ಕಿಲಾಯ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದು, ಕರ್ನಾಟಕ ಹೈಕೋರ್ಟ್​​ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ವಿಚಾರಣೆ ಇಂದು ವಿಚಾರಣೆ ನಡೆಸಿದರು.

ಸ್ವತಃ ವೈದ್ಯರಾದವರೇ ಇಂತಹ ಪಿಐಎಲ್ ಹಾಕಿರುವುದು ಆಘಾತಕಾರಿ. ಪೋಲಿಯೋ ಲಸಿಕೆಗೂ ಹೀಗೆಯೇ ವಿರೋಧ ಮಾಡಲಾಗಿತ್ತು. ಆದರೆ ವಿರೋಧ ಮಾಡಿದ ದೇಶಗಳಲ್ಲೇ ಪೋಲಿಯೋ ಇನ್ನೂ ಉಳಿದುಕೊಂಡಿದೆ. ಲಸಿಕೆ ಇರುವುದು ಮನುಕುಲದ ಉಳಿವಿಗಾಗಿ ಎಂದು ಅಭಿಪ್ರಾಯಪಟ್ಟ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಅವರು ಶಾಲಾ ಮಕ್ಕಳು ಲಸಿಕೆ ಹಾಕಿಸಿಕೊಂಡು ತರಗತಿಗೆ ಹಾಜರಾಗಬೇಕು ಎಂದು ಸಲಹೆ ನೀಡಿದರು. ಈ ಮಧ್ಯೆ, ಪ್ರಕರಣದ ವಿಚಾರಣೆಯನ್ನು ಕೊವಿಡ್​ಗಾಗಿನ ಪ್ರತ್ಯೇಕ ಪೀಠಕ್ಕೆ ವರ್ಗಾವಣೆ ಮಾಡಿದರು.

Also Read:
ಇಂದು ಮಧ್ಯಾಹ್ನದ ಹೊತ್ತಿಗೇ 72 ಲಕ್ಷಕ್ಕೂ ಅಧಿಕ ಡೋಸ್​ ಲಸಿಕೆ ವಿತರಣೆ; 1 ಕೋಟಿಯ ಗುರಿಯತ್ತ ದಾಪುಗಾಲು

ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಬೇರೆ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಸ್ನೇಹಿತರು

(corona vaccine is for good cause doctors opposing it is shocking feels karnataka high court acting cj satish chandra sharma)

Click on your DTH Provider to Add TV9 Kannada