Mysuru University: ಸೆಪ್ಟೆಂಬರ್ 3ರಿಂದ ಆರಂಭವಾಗಿದ್ದ ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ
ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಸಹ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ತಿಳಿಸಿದ್ದಾರೆ.
ಮೈಸೂರು: ನಾಳೆಯಿಂದ (ಸೆಪ್ಟೆಂಬರ್ 3) ಆರಂಭವಾಗಬೇಕಿದ್ದ ಮೈಸೂರು ವಿಶ್ವವಿದ್ಯಾಲಯದ ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಒಂದೇ ದಿನ ಎರಡು ವಿಷಯದ ಪರೀಕ್ಷೆ ನಿಗದಿಯಾಗಿತ್ತು. ಹೀಗಾಗಿ ಪರೀಕ್ಷಾ ದಿನಾಂಕ ಬದಲಿಸುವಂತೆ ವಿದ್ಯಾರ್ಥಿಗಳ ಮನವಿ ಸಲ್ಲಿಸಿದ್ದರು. ಹೀಗಾಗಿ ನಾಳೆಯ ಬದಲು ಸೆಪ್ಟೆಂಬರ್ 13ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಮುಂದೂಡಿಕೆ ಬಗ್ಗೆ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಅಧಿಕೃತ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿ ನಮಗೆ ಮುಖ್ಯ. ಈಗಾಗಿ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಸಹ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ತಿಳಿಸಿದ್ದಾರೆ.
Dasara 2021: ಮೈಸೂರು ದಸರಾಗೆ ಪ್ರಾಥಮಿಕ ಹಂತದಲ್ಲಿ ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಆಯ್ಕೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021ದಲ್ಲಿ ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಪ್ರಾಥಮಿಕ ಆಯ್ಕೆ ಪ್ರಕ್ರಿಯೆಯಲ್ಲಿ 3 ಆನೆಗಳ ಗುರುತು ಮಾಡಲಾಗಿದೆ. ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಎಂಬ ಆನೆಗಳು ಗುರುತು ಮಾಡಲಾಗಿದ್ದು, ಅಂತಿಮವಾಗಿ ಆಯ್ಕೆಯಾದಲ್ಲಿ ಮೊದಲ ಹಂತದಲ್ಲಿ ಪಾಲ್ಗೊಳ್ಳಲು ಈ 3 ಆನೆಗಳು ಮೈಸೂರಿಗೆ ಆಗಮಿಸಲಿವೆ. ಆನೆ ಶಿಬಿರಕ್ಕೆ ಡಿಸಿಎಫ್ ಕರಿಕಾಳನ್, ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ವಲಯ ಅರಣ್ಯಾಧಿಕಾರಿ, ಎ.ಎಂ. ಗುಡಿ ನೇತೃತ್ವದ ತಂಡ ಭೇಟಿ ನೀಡಿ 3 ಆನೆಗಳನ್ನು ಆಯ್ಕೆ ಮಾಡಿದೆ.
ಸರಳ ದಸರಾವಾದರೆ 14 ಆನೆಗಳಲ್ಲಿ 7 ಆನೆಗಳು ನಾಡಿಗೆ ಕರೆಸಿಕೊಳ್ಳಲು ಚಿಂತನೆ ಇದೆ. ಕಳೆದ ವರ್ಷ 5 ಆನೆ ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತ ದೃಷ್ಟಿಯಿಂದ ಎರಡು ಆನೆಗಳನ್ನ ಹೆಚ್ಚುವರಿಯಾಗಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಈ ವರ್ಷ ಮೈಸೂರು ದಸರಾ ಆಚರಿಸುವುದಂತೂ ನಿಶ್ಚಿತ. ಆದರೆ ಕಳೆದ ಬಾರಿಯಂತೆ ಸರಳವಾಗಿ ಮಾಡಬೇಕೋ ಅಥವಾ ಇನ್ನೂ ಬೇರೆ ಮಾರ್ಪಾಡು ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಚರ್ಚೆ ನಡೆಸುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಎಸ್. ಟಿ.ಸೋಮಶೇಖರ್ ಆಗಸ್ಟ್ 7 ರಂದು ತಿಳಿಸಿದ್ದರು. ಕೊವಿಡ್ ಹೆಚ್ಚಾಗಲಿದೆಯೋ ಕಡಿಮೆ ಆಗಲಿದೆಯೇ ನೋಡುತ್ತೇವೆ. ಹೈ ಪವರ್ ಕಮಿಟಿಯಲ್ಲಿ ಮೈಸೂರು ದಸರಾ ಬಗ್ಗೆ ಚರ್ಚೆ ಮಾಡುತ್ತೇವೆ. ಕೊರೊನಾ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಆನಂತರ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 9ರಂದು ಹೇಳಿದ್ದರು.
ಇದನ್ನೂ ಓದಿ:
BMTC Bus Pass: ವಿದ್ಯಾರ್ಥಿಗಳೇ ಗಮನಿಸಿ, ಬಿಎಂಟಿಸಿ ಬಸ್ ಪಾಸ್ ಅವಧಿ ವಿಸ್ತರಣೆ
(Mysuru University Degree Exam starts from tomorrow postponed started by September 13th)
Published On - 2:48 pm, Thu, 2 September 21