National Monetisation Pipeline: ರಾಷ್ಟ್ರೀಯ ನಗದೀಕರಣ ಪೈಪ್​ಲೈನ್ ಏನಿದು? ಆ 6 ಲಕ್ಷ ಕೋಟಿ ರೂ. ಬಗ್ಗೆ ಇಲ್ಲಿದೆ ಮಾಹಿತಿ

ರಾಷ್ಟ್ರೀಯ ನಗದೀಕರಣ ಪೈಪ್​ಲೈನ್​ ಅಂದರೇನು? ಅದರ ಮೂಲಕ ಬರುವ 6 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಏನು ಮಾಡುತ್ತದೆ.

National Monetisation Pipeline: ರಾಷ್ಟ್ರೀಯ ನಗದೀಕರಣ ಪೈಪ್​ಲೈನ್ ಏನಿದು? ಆ 6 ಲಕ್ಷ ಕೋಟಿ ರೂ. ಬಗ್ಗೆ ಇಲ್ಲಿದೆ ಮಾಹಿತಿ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Aug 31, 2021 | 11:16 PM

ಕಾರ್ಪೊರೇಟ್ ವ್ಯವಹಾರಗಳು ಮತ್ತು ಹಣಕಾಸು ಖಾತೆ ನಿರ್ವಹಿಸುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗೆ ಕೇಂದ್ರೀಯ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಆಸ್ತಿ ನಗದೀಕರಣ ಪೈಪ್​ಲೈನ್​ಗೆ ಚಾಲನೆ ನೀಡಿದರು. ಈ ಪೈಪ್​ಲೈನ್​ ಅನ್ನು ಅಭಿವೃದ್ಧಿ ಪಡಿಸಿರುವುದು ನೀತಿ ಆಯೋಗ. ಮೂಲಸೌಕರ್ಯ ಸಚಿವಾಲಯದ ಜತೆಗೆ ಚರ್ಚೆ ನಡೆಸಿ, 2022ರ ಹಣಕಾಸು ವರ್ಷದಿಂದ 2025ರ ಹಣಕಾಸು ವರ್ಷದ ತನಕ ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರದ ಮುಖ್ಯ ಆಸ್ತಿಗಳ ಮೂಲಕ 6 ಲಕ್ಷ ಕೋಟಿ ರೂಪಾಯಿ ನಗದೀಕರಣದ ಯೋಜನೆ ಇದು. 2021-22ರ ಬಜೆಟ್​ನಲ್ಲೇ ಇದ್ದ ಪ್ರಸ್ತಾವವನ್ನು ಈಗ ಮಾಡಲಾಗಿದೆ.

ಮೂಲಸೌಕರ್ಯ: ಬೆಳವಣಿಗೆಗೆ ಚಾಲನೆ ಒಂದು ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಮೂಲಸೌಕರ್ಯಗಳಲ್ಲಿನ ಹೂಡಿಕೆ ಬಹಳ ಮುಖ್ಯ. ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ಅಂತರವನ್ನು ನಿವಾರಿಸಲು ಮತ್ತು ಅದರ ಭವಿಷ್ಯದಲ್ಲಿ ಸಾಮರ್ಥ್ಯ ವೃದ್ಧಿಸಲು, ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (NIP) ಐದು ವರ್ಷಗಳ ಅವಧಿಯಲ್ಲಿ 111 ಲಕ್ಷ ಕೋಟಿ (FY2020-25) ರೂಪಾಯಿ ಮೂಲಸೌಕರ್ಯ ಹೂಡಿಕೆಯನ್ನು ಮಾಡುತ್ತದೆ. ಮೂಲಸೌಕರ್ಯ ಹೂಡಿಕೆಗಳಿಗೆ ಹಣಕಾಸು ಒದಗಿಸುವುದಕ್ಕೆ ವೈವಿಧ್ಯಮಯ, ಅದರಲ್ಲೂ ವಿಶೇಷವಾಗಿ ಭಾರತದಂತಹ ಆರ್ಥಿಕತೆಗಳಲ್ಲಿ ಪರ್ಯಾಯಗಳ ಅಗತ್ಯವಿದೆ. NIP ಅಡಿಯಲ್ಲಿ ಅದನ್ನು ಯಾವ ಪ್ರಮಾಣದಲ್ಲಿ ಕಲ್ಪಿಸಲಾಗಿದೆ ಅಂದರೆ, ಮರು-ಕಲ್ಪಿತ ವಿಧಾನ ಮತ್ತು ಸಾಂಪ್ರದಾಯಿಕ ಮೂಲಗಳು ಅಲ್ಲದ ಅಥವಾ ಹಣಕಾಸಿನ ಮಾದರಿಗಳನ್ನು ಮೀರಿದ ಮಾದರಿಗಳಿಂದ ಮಾತ್ರ ಅದು ಸಾಧ್ಯ.

ಆದ್ದರಿಂದ ಹೆಚ್ಚುವರಿ ಬಂಡವಾಳವನ್ನು ಸೃಜಿಸಲು ಎನ್ಐಪಿ ಹೊಸ ಬಗೆ ಕಾರ್ಯವಿಧಾನಗಳಿಗೆ ಒತ್ತು ನೀಡಿದೆ – ಉದಾಹರಣೆಗೆ ಆಸ್ತಿ ನಗದೀಕರಣ. ಕಳೆದ ದಶಕದಲ್ಲಿ ಸಾರ್ವಜನಿಕ ಹೂಡಿಕೆಯ ಮೂಲಕ ಮೂಲಸೌಕರ್ಯ ಸ್ವತ್ತುಗಳ ಗಣನೀಯ ಪ್ರಮಾಣವನ್ನು ಸೃಷ್ಟಿಸಲಾಗಿದೆ. ಅದನ್ನು ಈಗ ಖಾಸಗಿ ವಲಯದ ಹೂಡಿಕೆ ಮತ್ತು ದಕ್ಷತೆಯನ್ನು ಟ್ಯಾಪ್ ಮಾಡಲು ಸದುಪಯೋಗ ಮಾಡಿಸಿಕೊಳ್ಳಬಹುದು.

ಆಸ್ತಿ ನಗದೀಕರಣ: ಪರಿಕಲ್ಪನೆ ಸ್ವತ್ತುಗಳ ನಗದೀಕರಣವನ್ನು ಸಾಮಾನ್ಯವಾಗಿ ಆಸ್ತಿ ಅಥವಾ ಬಂಡವಾಳ ಮರುಬಳಕೆ ಎಂದು ಕೂಡ ಕರೆಯಲಾಗುತ್ತದೆ. ಇದು ಜಾಗತಿಕವಾಗಿಯೇ ವ್ಯಾಪಕವಾಗಿ ಬಳಸಲಾಗುವ ವ್ಯಾಪಾರ ಪರಿಪಾಠವಾಗಿದೆ. ಸೀಮಿತ ಅವಧಿಗೆ ಆಸ್ತಿಯನ್ನು ಹಸ್ತಾಂತರ ಮಾಡುವ ಮೂಲಕವಾಗಿ “ಬಳಕೆಯಾಗದ” ಬಂಡವಾಳವನ್ನು ಬಿಡುಗಡೆ ಮಾಡಲಾಗುತ್ತದೆ. ಆ ನಂತರ ಅದರಿಂದ ಬಂದ ನಗದನ್ನು ಸುಧಾರಿತ ಅಥವಾ ಹೆಚ್ಚುವರಿಯಾಗಿ ಪ್ರಯೋಜನಗಳನ್ನು ನೀಡುವ ಇತರ ಸ್ವತ್ತುಗಳು ಅಥವಾ ಯೋಜನೆಗಳಲ್ಲಿ ಮರುಹೂಡಿಕೆ ಮಾಡಲು ಬಳಸಲಾಗುತ್ತದೆ. ಇಂತಹ ಸ್ವತ್ತುಗಳನ್ನು ಹೊಂದಿರುವ ಮತ್ತು ನಿರ್ವಹಿಸುವ ಸರ್ಕಾರಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು, ಮೂಲಸೌಕರ್ಯ ಸೇವೆಗಳನ್ನು ನೀಡುವುದಕ್ಕೆ ಪ್ರಾಥಮಿಕವಾಗಿ ಜವಾಬ್ದಾರ ಆಗಿರುತ್ತವೆ. ಜನರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಸಾರ್ವಜನಿಕ ಸ್ವತ್ತುಗಳು ಮತ್ತು ಸೇವೆಯ ಸುಧಾರಿತ ಗುಣಮಟ್ಟಕ್ಕಾಗಿ ಈ ಆಸ್ತಿ ನಗದೀಕರಣದ ಪರಿಕಲ್ಪನೆ ಅಳವಡಿಸಿಕೊಳ್ಳಬಹುದು.

ಆಸ್ತಿ ನಗದೀಕರಣ ಎಂಬುದನ್ನು ಸ್ಥೂಲವಾಗಿ ಎರಡು ವಿಧಾನಗಳಾಗಿ ವರ್ಗೀಕರಿಸಿದ ಇನ್​ಸ್ಟ್ರುಮೆಂಟ್​/ಪರಿಕರಗಳ ಕೈಗೊಳ್ಳಬಹುದು: ಮೊದಲನೆಯದು, PPP ರಿಯಾಯಿತಿಗಳಂತಹ ನೇರ ಒಪ್ಪಂದದ ವಿಧಾನಗಳು, ಎರಡನೆಯದು, ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (InvIT), ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ (REIT).

NMPಯ ಅಗತ್ಯ ಆಸ್ತಿ ನಗದೀಕರಣದ ಅದ್ಭುತ ಆರಂಭಕ್ಕಾಗಿ, ಸರಿಯಾದ ದಿಕ್ಕಿನಲ್ಲಿ ಪ್ರಗತಿ ಸಾಧಿಸಲು ಸರ್ಕಾರವು ಆಕರ್ಷಕವಾದ ರಚನಾತ್ಮಕ, ಬ್ರೌನ್‌ಫೀಲ್ಡ್ ಯೋಜನೆಗಳ ಬಲವಾದ ಪೈಪ್‌ಲೈನ್ ಅನ್ನು ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯ. ಅಲ್ಲಿಂದ ಮುಂದೆ, ಆಸ್ತಿ ವರ್ಗಗಳಾದ್ಯಂತ ವಹಿವಾಟುಗಳ ನಿರಂತರ ಹರಿವು ಮತ್ತು ವಿಸಿಬಲಿಟಿ, ದೀರ್ಘಾವಧಿಯ ಹೂಡಿಕೆದಾರರು ಮುಖ್ಯ. ಉತ್ತಮವಾದ ಸ್ವತ್ತಿನ ಪೈಪ್‌ಲೈನ್​ನಿಂದ ಹೂಡಿಕೆದಾರರಿಗೆ ತಮ್ಮ ನಿಧಿ ಸಂಗ್ರಹ ಮತ್ತು ಹೂಡಿಕೆ ಟೈಮ್‌ಲೈನ್‌ಗಳನ್ನು ಯೋಜಿಸಲು ಸಹಾಯ ಮಾಡುವುದಷ್ಟೇ ಅಲ್ಲ, ಆಸ್ತಿ ಮಾಲೀಕರಿಗೆ ಸ್ವತ್ತಿನ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಮತ್ತು ಸ್ಕ್ಯಾನ್ ಮಾಡಲು ಕೂಡ ಸಹಾಯ ಮಾಡುತ್ತದೆ. ಈ ಸನ್ನಿವೇಶದಲ್ಲಿ NMPಯನ್ನು ಕೇಂದ್ರ ಬಜೆಟ್ 2021-22ರಲ್ಲಿ ಘೋಷಿಸಲಾಯಿತು.

ಪ್ರಮುಖ ಸ್ವತ್ತುಗಳ ಆಸ್ತಿ ನಗದೀಕರಣಕ್ಕೆ ಸಾಮಾನ್ಯ ಚೌಕಟ್ಟನ್ನು ರೂಪಿಸಲು NMP ಪ್ರಾಥಮಿಕವಾಗಿ ಸಹಾಯ ಮಾಡುತ್ತದೆ. ಖಾಸಗೀಕರಣದಿಂದ ಇದು ಹೇಗೆ ಭಿನ್ನ ಎಂಬ ವ್ಯತ್ಯಾಸವನ್ನು ವಿಮರ್ಶಾತ್ಮಕವಾಗಿಯೇ ಸ್ಪಷ್ಟಪಡಿಸುತ್ತದೆ. ಅಂತಿಮವಾಗಿ ‘ಅಭಿವೃದ್ಧಿ, ಆಯೋಗ, ನಗದೀಕರಣ ಮತ್ತು ಹೂಡಿಕೆ’ ಎಂಬ ಅನುಕೂಲಕರ ಚಕ್ರವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಮುಖ್ಯ ಸ್ವತ್ತುಗಳ ನಗದೀಕರಣದ ಚೌಕಟ್ಟು ಮೂರು ಪ್ರಮುಖ ಅವಶ್ಯಕತೆ ಹೊಂದಿದೆ.

NIPಯ ಉಳಿದ ನಾಲ್ಕು ವರ್ಷಗಳ ಅವಧಿಯೊಂದಿಗೆ NMP ಅನ್ನು ಸಹ-ಟರ್ಮಿನಸ್ ಆಗಿ ಯೋಜಿಸಲಾಗಿದೆ. FY22ರಿಂದ FY25ವರೆಗಿನ 4 ವರ್ಷಗಳ ಅವಧಿಗೆ ಹೂಡಿಕೆ, ಕಾರ್ಯಕ್ಷಮತೆ ಮತ್ತು ಸಂಭಾವ್ಯ ಸ್ವತ್ತುಗಳ ಮೇಲಿನ ದತ್ತಾಂಶ-ಮೇಲ್ವಿಚಾರಣೆ ಹಾಗೂ ಟ್ರ್ಯಾಕಿಂಗ್‌ಗಾಗಿ ಆಸ್ತಿ-ಮಾಲೀಕತ್ವದ ಸಚಿವಾಲಯಗಳಿಗೆ NMP ಬೇಸ್‌ಲೈನ್ ಅನ್ನು ರೂಪಿಸುತ್ತದೆ. ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಕುರಿತ ವರದಿಯನ್ನು (i) ಸ್ವತ್ತು ನಗದೀಕರಣ (ಸಂಪುಟ I)ಕ್ಕಾಗಿ ಮಾರ್ಗದರ್ಶನವಾಗಿ ರಚಿಸಲಾಗಿದೆ ಮತ್ತು (ii) ಕೇಂದ್ರ ಸರ್ಕಾರದ ಲೈನ್ ಸಚಿವಾಲಯಗಳ ಪೈಪ್‌ಲೈನ್ (ಸಂಪುಟ II) ಮತ್ತು ಮೂಲಸೌಕರ್ಯ ವಲಯಗಳಲ್ಲಿ CPSEಗಳನ್ನು ಒಳಗೊಂಡಂತೆ ಮಧ್ಯಕಾಲೀನ ಮಾರ್ಗಸೂಚಿ ಹೆಚ್ಚಿನ ನಗದೀಕರಣದೊಂದಿಗೆ ರಚಿಸಲಾಗಿದೆ.

ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್: ಸಾರಾಂಶ ಕೇಂದ್ರ ಸರ್ಕಾರದ ಪ್ರಮುಖ ಆಸ್ತಿಗಳಿಗಾಗಿ NMPಯ ಒಟ್ಟು ಸೂಚಕ ಮೌಲ್ಯವನ್ನು 4 ವರ್ಷಗಳ ಅವಧಿಯಲ್ಲಿ, ಅಂದರೆ FY22-25ರ ಅವಧಿಯಲ್ಲಿ ₹ 6 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. FY2022-25ರ ಒಟ್ಟಾರೆ ಪೈಪ್‌ಲೈನ್ ವಿಭಜನೆ ಮತ್ತು ವಲಯದ ಪಾಲು ಮುಂದಕ್ಕೆ ನೀಡಲಾಗಿದೆ. ವಾರ್ಷಿಕ ಪ್ರಮಾಣದ ಮೌಲ್ಯವನ್ನು ನೀಡುವುದಾದರೆ, 2021-22ರಲ್ಲಿ 0.88 ಲಕ್ಷ ಕೋಟಿ ರೂಪಾಯಿ. ಅದೇ ರೀತಿ, ವರ್ಷಾವರ್ಷ ಸೂಚಕ ಮೂಲ್ಯ ಎಷ್ಟು ಎಂಬುದನ್ನು ಸಹ ನಗದೀಕರಣ ಪೈಪ್​ಲೈನ್​ನಲ್ಲಿ ತಿಳಿಸಲಾಗಿದೆ. ಅದರಲ್ಲಿ ಟಾಪ್ ಮೂರು ವಲಯ (ಅಂದಾಜು ಮೌಲ್ಯಗಳಲ್ಲಿ) ರಸ್ತೆ (ಶೇ 27), ರೈಲ್ವೆ (ಶೇ 25) ಮತ್ತು ವಿದ್ಯುತ್ (ಶೇ 15) ಇದೆ. ಉಳಿದಂತೆ ವಿದ್ಯುತ್ ಉತ್ಪಾದನೆ ಶೇ 7, ಟೆಲಿಕಾಂ ಶೇ 6, ವೇರ್​ಹೌಸಿಂಗ್ ಶೇ 5, ಗಣಿಗಾರಿಕೆ ಶೇ 5, ಅನಿಲ ಪೈಪ್ ಲೈನ್ ಶೇ 4, ಇತರ ಪೈಪ್​ಲೈನ್ ಮತ್ತು ಇತರ ಆಸ್ತಿ ಶೇ 4, ವಿಮಾನ ಯಾನ ಶೇ 3, ನಗರ ರಿಯಲ್ ಎಸ್ಟೇಟ್ ಶೇ 2, ಬಂದರು ಶೇ 2, ಕ್ರೀಡೆ ಮೈದಾನಗಳು ಶೇ 2 ಇದೆ.

ಲೈನ್ ಸಚಿವಾಲಯಗಳು, ಇಲಾಖೆಗಳು ಹಾಗೂ ಪ್ರತಿಯೊಂದು ವಲಯದಲ್ಲಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಸ್ವತ್ತುಗಳ ಮೇಲೆ ಲಭ್ಯವಿರುವ ದ್ವಿತೀಯ ಮಾಹಿತಿಯ ಮೌಲ್ಯಮಾಪನಗಳು ಸೇರಿ ವಿವಿಧ ಮೂಲಗಳಿಂದ ಒದಗಿಸಿದ ಮಾಹಿತಿಯನ್ನು ಒಟ್ಟುಗೂಡಿಸಿ, NMP ರಚಿಸಲಾಗಿದೆ. ಕೇಂದ್ರೀಯ ವಲಯದ ಏಜೆನ್ಸಿಗಳ ಅಡಿ ನಿರ್ವಹಿಸುವ ಪ್ರಸ್ತುತ ಮೂಲಭೂತ ಮೂಲಸೌಕರ್ಯ ಆಸ್ತಿ ನೆಲೆಯನ್ನು ಗುರುತಿಸಿ, ಮ್ಯಾಪ್ ಮಾಡಲಾಗಿದೆ. NMPಯಲ್ಲಿ ಆಸ್ತಿ ನಗೀಕರಣ ಮೌಲ್ಯವು ಥಂಬ್ ರೂಲ್ (ಈಗಾಗಲೇ ಅನುಸರಿಸುತ್ತಿರುವ ನಿಯಮಾವಳಿಗಳು) ಆಧಾರದ ಮೇಲೆ ಸೂಚಿಸುವ ಉನ್ನತ ಮಟ್ಟದ ಅಂದಾಜು ಮಾತ್ರ. ಆಸ್ತಿ ಪೈಪ್‌ಲೈನ್‌ನ ಸೂಚಕ ಮೌಲ್ಯವನ್ನು ನಿರ್ಧರಿಸಲು ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ವಹಿವಾಟು ರಚನೆ ಹಂತದಲ್ಲಿ ವಿವರವಾದ ಮೌಲ್ಯಮಾಪನ ಅಥವಾ ಕಾರ್ಯಸಾಧ್ಯತೆ ಅಧ್ಯಯನಗಳ (ಅನ್ವಯವಾಗುವಂತೆ) ಆಧಾರದ ಮೇಲೆ ನಿಜವಾದ ನಗದೀಕರಣ ಮೌಲ್ಯವನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ

Fiscal Deficit: ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ

(What Is National Monetisation Pipeline How Rs 6 Lakh Crore Utilised By Central Government)

Published On - 11:14 pm, Tue, 31 August 21

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್