ಆನ್ಲೈನ್ ಕಾರ್ಡ್ ಟ್ರಾನ್ಸಾಕ್ಷನ್ಸ್ಗೆ ಬಯೋಮೆಟ್ರಿಕ್ ಅಥೆಂಟಿಕೇಶನ್; ಭಾರತದಲ್ಲಿ ಮೊದಲ ಬಾರಿಗೆ ಜಾರಿ
Federal Bank introduces first time in India, feature of biometric authentication: ಫೆಡರಲ್ ಬ್ಯಾಂಕ್ ತನ್ನ ಗ್ರಾಹಕರ ಆನ್ಲೈನ್ ಶಾಪಿಂಗ್ ಕಾರ್ಯವನ್ನು ಸುಗಮಗೊಳಿಸಿದೆ. ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಆನ್ಲೈನ್ನಲ್ಲಿ ಶಾಪಿಂಗ್ ಮಾಡಿ ಹಣ ಪಾವತಿಸುವಾಗ ಬಯೋಮೆಟ್ರಿಕ್ ದೃಢೀಕರಣದ ಫೀಚರ್ ತಂದಿದೆ. ಮಾಮೂಲಿಯ ಟ್ರಾನ್ಸಾಕ್ಷನ್ ಆದರೆ ಮೊಬೈಲ್ ನಂಬರ್ಗೆ ಬರುವ ಒಟಿಪಿ ಮೂಲಕ ದೃಢೀಕರಣ ನೀಡಬೇಕಿತ್ತು.

ನವದೆಹಲಿ, ಜುಲೈ 25: ಫೆಡರಲ್ ಬ್ಯಾಂಕ್ (Federal Bank) ತನ್ನ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ಗನ್ನು ಬಳಸಿ ಗ್ರಾಹಕರು ಆನ್ಲೈನ್ನಲ್ಲಿ ಹಣ ವಹಿವಾಟು ನಡೆಸುವಾಗ ಬಯೋಮೆಟ್ರಿಕ್ ಅಥೆಂಟಿಕೇಶನ್ (Biometric) ನೀಡುವ ಸೌಲಭ್ಯವನ್ನು ಒದಗಿಸಿದೆ. ಭಾರತದಲ್ಲಿ ಇಂತಹ ಸೌಲಭ್ಯ ಇದೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ. ಫೆಡರಲ್ ಬ್ಯಾಂಕ್ ಗ್ರಾಹಕರು ಇಕಾಮರ್ಸ್ ಪೇಮೆಂಟ್ ಮಾಡುವಾಗ ಒಟಿಪಿ ಬದಲು ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿ ಬಳಸಿ ಪಾವತಿ ದೃಢೀಕರಣ ಪಡೆಯಬಹುದು.
ಫೆಡರಲ್ ಬ್ಯಾಂಕ್ ಈ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ರೂಪಿಸಲು ಎಂ2ಪಿ (M2P) ಮತ್ತು ಮಿಂಕಸುಪೇ (MinkasuPay) ಎನ್ನುವ ಫಿನ್ಟೆಕ್ ಕಂಪನಿಗಳ ಸಹಭಾಗಿತ್ವ ಹೊಂದಿದೆ. ಆನ್ಲೈನ್ ಪಾವತಿಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಮತ್ತು ವೇಗವಾಗಿ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹೊಸ ಫೀಚರ್ನಿಂದ ಆನ್ಲೈನ್ ಪಾವತಿ ಕಾರ್ಯ 3-4 ಸೆಕೆಂಡ್ ಕಡಿಮೆಗೊಳ್ಳುತ್ತದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳ ಪಟ್ಟಿ
ಆನ್ಲೈನ್ ಟ್ರಾನ್ಸಾಕ್ಷನ್ನಲ್ಲಿ ಬಯೋಮೆಟ್ರಿಕ್ ಹೇಗೆ ಕೆಲಸ ಮಾಡುತ್ತೆ?
ಫೆಡರಲ್ ಬ್ಯಾಂಕ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಆನ್ಲೈನ್ನಲ್ಲಿ ಹಣ ಪಾವತಿ ಮಾಡುವವರಿಗೆ ಈ ಫೀಚರ್ ಸಿಗುತ್ತದೆ. ಸದ್ಯ ಕೆಲ ಆಯ್ದ ವರ್ತಕರ ಬಳಿ ಈ ಸೌಲಭ್ಯ ಇದೆ. M2P ಮತ್ತು MinkasuPay ಕಂಪನಿಗಳಿಂದ ನೀಡಲಾಗುವ ಸಾಫ್ಟ್ವೇರ್ ಕಿಟ್ ಅನ್ನು ವರ್ತಕರು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.
ಈ ಸಾಫ್ಟ್ವೇರ್ ಹೊಂದಿರುವ ವರ್ತಕರ ಆ್ಯಪ್ನಲ್ಲಿ ಫೆಡರಲ್ ಬ್ಯಾಂಕ್ ಕಾರ್ಡ್ದಾರರು ಶಾಪಿಂಗ್ ಮಾಡಿದಾಗ ಕಾರ್ಡ್ ಬಳಸಿ ಹಣ ಪಾವತಿ ಮಾಡಬಹುದು. ಮಾಮೂಲಿಯ ಪಾವತಿಯಲ್ಲಾದರೆ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಅದರ ಮೂಲಕ ಪಾವತಿ ದೃಢೀಕರಣ ನೀಡಬಹುದು. ಆದರ, ಹೊಸ ಫೀಚರ್ನಲ್ಲಿ ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿ ಮೂಲಕ ಪಾವತಿ ದೃಢೀಕರಣ ನೀಡಬಹುದು.
ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ಒಂದು ವೇಳೆ, ಬಯೋಮೆಟ್ರಿಕ್ ಅಥೆಂಟಿಕೇಶನ್ ವಿಫಲವಾದರೆ, ಮೊಬೈಲ್ ಒಟಿಪಿ ಮೂಲಕ ದೃಢೀಕರಣ ಕೇಳಲಾಗುತ್ತದೆ. ಹೀಗಾಗಿ, ಗ್ರಾಹಕರಿಗೆ ಪಾವತಿಯಲ್ಲಿ ಕಷ್ಟವೇನಾಗುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ