AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Govt Schemes: ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳ ಪಟ್ಟಿ

List of important government schemes: ಕೇಂದ್ರ ಸರ್ಕಾರ ಸಮಾಜದ ವಿವಿದ ಸ್ತರಗಳ ಜನರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ನಡೆಸುತ್ತಿದೆ. ಪಿಎಂ ಸುರಕ್ಷಾ ಬಿಮಾ ಯೋಜನೆ, ಪಿಎಂ ಕಿಸಾನ್, ಇ ಶ್ರಮ್ ಕಾರ್ಡ್ ಇತ್ಯಾದಿ ಯೋಜನೆಗಳಿವೆ. ಕೆಲ ಯೋಜನೆಗಳು ಹಲವು ದಶಕಗಳಿಂದ ಮುಂದುವರಿದುಕೊಂಡು ಬಂದಿವೆ. ಮತ್ತಿನ್ನು ಕೆಲವು ಇತ್ತೀಚಿನ ಕೆಲ ವರ್ಷಗಳಲ್ಲಿ ಶುರುವಾಗಿವೆ.

Govt Schemes: ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳ ಪಟ್ಟಿ
ಕಲ್ಯಾಣ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2025 | 11:44 AM

Share

ಸರ್ಕಾರಗಳು ಸಮಾಜದ ಎಲ್ಲಾ ಸ್ತರ ಮತ್ತು ವಿಭಾಗಗಳಲ್ಲಿ ವಿವಿಧ ಕಲ್ಯಾಣ ಯೋಜನೆಗಳನ್ನು (welfare schemes) ನಡೆಸುತ್ತದೆ. ಹಲವು ಯೋಜನೆಗಳು ಸರಿಯಾದ ಪ್ರಚಾರ ಇಲ್ಲದೇ ಹೆಚ್ಚು ಬಳಕೆಯಾಗದೇ ಉಳಿದುಕೊಳ್ಳಬಹುದು. ಈ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇರಬಹುದು, ಅಥವಾ ಸರ್ಕಾರದ ವತಿಯಿಂದ ಪ್ರಚಾರದ ಕೊರತೆ ಇರಬಹುದು. ಕೇಂದ್ರ ಸರ್ಕಾರ ಬಡವರು, ಶ್ರಮಿಕರು, ರೈತರು, ಸಣ್ಣ ಉದ್ದಿಮೆದಾರರು, ಬೀದಿಬದಿ ವ್ಯಾಪಾರಿಗಳು, ಮಹಿಳೆಯರು, ವೃದ್ಧರು ಹೀಗೆ ಸಮಾಜದ ವಿವಿದ ಸ್ತರಗಳ ಜನರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ನಡೆಸುತ್ತದೆ. ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುವ ವಿವಿಧ ಯೋಜನೆಗಳ (central govt sponsored schemes) ಪಟ್ಟಿ ಈ ಕೆಳಕಂಡಂತಿದೆ:

ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳಿವು:

  • ಪಿಎಂ ಸುರಕ್ಷಾ ಬಿಮಾ ಯೋಜನೆ: ದುರ್ಬಲ ವ್ಯಕ್ತಿಗಳಿಗೆ ಲೈಫ್ ಇನ್ಷೂರೆನ್ಸ್ ಸ್ಕೀಮ್
  • ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ: ದುರ್ಬಲ ವ್ಯಕ್ತಿಗಳಿಗೆ ಲೈಫ್ ಇನ್ಷೂರೆನ್ಸ್ ಸ್ಕೀಮ್
  • ಅಟಲ್ ಪೆನ್ಷನ್ ಯೋಜನೆ: ಪಿಂಚಣಿ ಸ್ಕೀಮ್
  • ಪಿಎಂ ವಿಶ್ವಕರ್ಮ ಯೋಜನೆ: ಚಮ್ಮಾರ, ಬಡಿಗೆ, ದರ್ಜಿ, ಕುಂಬಾರ ಇತ್ಯಾದಿ ಕರಕುಶಲಕರ್ಮಿಗಳಿಗೆ ಸಾಲದ ನೆರವು ನೀಡುವ ಸ್ಕೀಮ್.
  • ದೀನದಯಾಳ್ ಅಶಕ್ತ ಪುನವರ್ವಸಿ ಯೋಜನೆ
  • ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ: ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೂ ನಿರಂತರ ವಿದ್ಯುತ್ ಪೂರೈಕೆಯ ಗುರಿ
  • ಡಿಜಿಟಲ್ ಇಂಡಿಯಾ: ನಾಗರಿಕರಿಗೆ ಡಿಜಿಟಲ್ ಸರ್ವಿಸ್ ಸಮರ್ಪಕವಾಗಿ ಸಿಗುವ ಗುರಿ.
  • ಗ್ರಾಮೀಣ ಭಂಡಾರನ್ ಯೋಜನೆ: ಗ್ರಾಮೀಣ ಭಾಗದಲ್ಲಿ ಕೃಷಿ ಆಹಾರ ಉತ್ಪನ್ಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವ ಗುರಿ.
  • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ: ಗ್ರಾಮೀಣ ಭಾಗದ ಮನೆಯ ಸದಸ್ಯರಿಗೆ ವರ್ಷದಲ್ಲಿ ಕನಿಷ್ಠ 100 ದಿನ ಕೂಲಿ ಕೆಲಸದ ಖಾತ್ರಿ ಕೊಡುತ್ತದೆ ಮನ್ರೇಗಾ ಸ್ಕೀಮ್.

ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ

  • ಪಿಎಂ ಕಿಸಾನ್ ಯೋಜನೆ: ಕೃಷಿಕ ಕುಟುಂಬಗಳಿಗೆ ಧನಸಹಾಯ
  • ನಮಾಮಿ ಗಂಗೆ: ಗಂಗಾ ನದಿ ಸ್ವಚ್ಛಗೊಳಿಸುವ ಯೋಜನೆ.
  • ಸಾಕ್ಷರತಾ ಮಿಷನ್: ಪ್ರತಿಯೊಬ್ಬರನ್ನೂ ಅಕ್ಷರಸ್ಥರನ್ನಾಗಿಸುವ ಗುರಿ
  • ಪಿಎಂ ಜನ್ ಧನ್ ಯೋಜನೆ: ತಳಮಟ್ಟದವರೆಲ್ಲರಿಗೂ ಬ್ಯಾಂಕ್ ಅಕೌಂಟ್ ಮಾಡಿಸಲು ಉತ್ತೇಜನದ ಗುರಿ.
  • ಪಿಎಂ ಜನ್ ಆರೋಗ್ಯ ಯೋಜನೆ: ಆಯುಷ್ಮಾನ್ ಭಾರತ್ ಅಡಿಯಲ್ಲಿ ಇರುವ ಇನ್ಷೂರೆನ್ಸ್ ಸ್ಕೀಮ್ ಇದು. ವಯೋವೃದ್ಧರು ಸೇರಿದಂತೆ ದುರ್ಬಲ ಮತ್ತು ಅಶಕ್ತ ಜನರಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಹೆಲ್ತ್ ಇನ್ಷೂರೆನ್ಸ್ ಸಿಗುತ್ತದೆ.
  • ಪಿಎಂ ಗ್ರಾಮ ಸಡಕ್ ಯೋಜನೆ: ಕುಗ್ರಾಮಗಳಲ್ಲಿ ಉತ್ತಮ ರಸ್ತೆ ಸಂಪರ್ಕ.
  • ಆರ್​ಎನ್​ಟಿಸಿಪಿ: ಕ್ಷಯ ರೋಗ ನಿಯಂತ್ರಣಕ್ಕೆ ಯೋಜನೆ
  • ಸುಕನ್ಯಾ ಸಮೃದ್ಧಿ ಯೋಜನೆ: ಬಾಲಕಿಯರ ಭವಿಷ್ಯ ಭದ್ರಪಡಿಸಲು ಪೋಷಕರಿಗೆ ಅವಕಾಶ ಕೊಡುವ ಸ್ಕೀಮ್.
  • ಸ್ಮಾರ್ಟ್ ಸಿಟಿ ಮಿಷನ್: ನಗರಗಳ ಅಭಿವೃದ್ಧಿ.
  • ಪಿಎಂ ಆವಾಸ್ ಯೋಜನೆ: ನಗರಗಳಲ್ಲಿ ಉತ್ತಮ ಜನಜೀವನ ವಾತಾರಣ ನಿರ್ಮಿಸಲು ಸಹಾಯವಾಗುವ ಯೋಜನೆ.
  • ಅಂತ್ಯೋದಯ ಅನ್ನ ಯೋಜನೆ: ಬಡ ಕುಟುಂಬಗಳಿಗೆ ಪಡಿತರ ವಿತರಿಸುವ ಬೃಹತ್ ಸ್ಕೀಮ್.
  • ನ್ಯಾಷನಲ್ ಫೂಡ್ ಸೆಕ್ಯೂರಿಟಿ ಮಿಷನ್: ದೇಶದಲ್ಲಿ ಆಹಾರ ಅಭಾವ ಉಂಟಾಗದಂತೆ ಕೃಷಿ ಉತ್ಪಾದನೆ ಹೆಚ್ಚಿಸುವ ಮತ್ತು ಅಗತ್ಯ ಆಹಾರ ಪದಾರ್ಥ ಮಾರುಕಟ್ಟೆಯಲ್ಲಿ ಇರುವ ರೀತಿಯಲ್ಲಿ ವ್ಯವಸ್ಥೆ ಮಾಡುವುದು ಗುರಿ.

ಇದನ್ನೂ ಓದಿ: ನಿಮ್ಮ ಪ್ಯಾನ್ ನಂಬರ್ ಬಳಸಿ ಯಾರಾದರೂ ಸಾಲ ತೆಗೆದುಕೊಂಡಿದ್ದಾರಾ? ಪತ್ತೆ ಮಾಡುವುದು ಹೇಗೆ?

  • ಇ ಶ್ರಮ್ ಕಾರ್ಡ್: ಅಸಂಘಟಿತ ವಲಯದ 16ರಿಂದ 59 ವರ್ಷ ವಯೋಮಾನದ ಕಾರ್ಮಿಕರಿಗೆ ಇರುವ ಇ-ಶ್ರಮ್ ಕಾರ್ಡ್ ಯೋಜನೆಯಲ್ಲಿ ವರ್ಷಕ್ಕೆ 2 ಲಕ್ಷ ರೂ ಅಪಘಾತ ವಿಮೆ ಹಾಗೂ ಇತರ ಕಲ್ಯಾಣ ಸ್ಕೀಮ್​ಗಳಿವೆ.
  • ಪಿಎಂ ಮುದ್ರಾ ಯೋಜನೆ: ಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂವರೆಗೆ ಬ್ಯುಸಿನೆಸ್ ಲೋನ್ ನೀಡಲಾಗುತ್ತದೆ.
  • ನಮೋ ಡ್ರೋನ್ ದೀದಿ: ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ಸಬ್ಸಿಡಿ ದರದಲ್ಲಿ ಡ್ರೋನ್ ಖರೀದಿಸಿ ಜೀವನೋಪಾಯ ಕಂಡುಕೊಳ್ಳಲು ನೆರವಾಗಲಾಗುತ್ತದೆ.
  • ಉಜ್ವಲ ಯೋಜನೆ: ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಮತ್ತು ಸಬ್ಸಿಡಿ ದರದಲ್ಲಿ ಸಿಲಿಂಡರ್ ಸರಬರಾಜು ನೀಡುವ ಯೋಜನೆ ಇದು.
  • ಪಿಎಂ ಸ್ವಾನಿಧಿ ಯೋಜನೆ: ಬೀದಿಬದಿ ವ್ಯಾಪಾರಿಗಳಿಗೆ ಅಡಮಾನರಹಿತವಾಗಿ 50,000 ರೂವರೆಗೆ ಸಾಲ ನೀಡುವ ಯೋಜನೆ (PM SWANidhi) ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ