AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆ ಕಂಪನಿಗಳಿಗೆ ಹೋಲಿಸಿದರೆ ನನ್ನ ತಂಡದಲ್ಲೇ ಹೆಚ್ಚು ಬಿಲಿಯನೇರ್​ಗಳಿದ್ದಾರೆ: ಎನ್​ವಿಡಿಯಾ ಸಿಇಒ ಹೇಳಿಕೆ

Nvidia CEO Jensen Huang speaks on podcast: ಬೇರೆ ಸಿಇಒಗಳ ತಂಡಕ್ಕೆ ಹೋಲಿಸಿದರೆ ತಮ್ಮ ಮ್ಯಾನೇಜ್ಮೆಂಟ್ ತಂಡದಲ್ಲೇ ಅತಿಹೆಚ್ಚು ಬಿಲಿಯನೇರ್​ಗಳಿದ್ದಾರೆ ಎಂದು ಎನ್​ವಿಡಿಯ ಸಿಇಒ ಹೇಳಿದ್ದಾರೆ. ದೊಡ್ಡ ಮೊತ್ತಕ್ಕೆ ಒಂದು ತಂಡವನ್ನು ಖರೀದಿಸುವ ನೀವು ಆ ಹಣವನ್ನು ಒಬ್ಬರಿಗೆ ಸಂಭಾವನೆಯಾಗಿ ಯಾಕೆ ನೀಡಬಾರದು ಎಂದಿದ್ದಾರೆ. ಎನ್​ವಿಡಿಯಾ ಎಐ ಕಂಪ್ಯೂಟಿಂಗ್ ಚಿಪ್​ಗಳನ್ನು ತಯಾರಿಸುವ ಕಂಪನಿ. ಇದರ ಸಿಇಒ ಜೆನ್ಸೆನ್ ಹುವಾಂಗ್.

ಬೇರೆ ಕಂಪನಿಗಳಿಗೆ ಹೋಲಿಸಿದರೆ ನನ್ನ ತಂಡದಲ್ಲೇ ಹೆಚ್ಚು ಬಿಲಿಯನೇರ್​ಗಳಿದ್ದಾರೆ: ಎನ್​ವಿಡಿಯಾ ಸಿಇಒ ಹೇಳಿಕೆ
ಜೆನ್ಸೆನ್ ಹುವಾಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2025 | 2:36 PM

Share

ಕ್ಯಾಲಿಫೋರ್ನಿಯಾ, ಜುಲೈ 25: ಕಾರ್ಪೊರೇಟ್ ಜಗತ್ತಿನಲ್ಲಿ ಬೇರೆ ಕಂಪನಿಗಳಿಗೆ ಹೋಲಿಸಿದರೆ ತಮ್ಮ ಸಂಸ್ಥೆಯಲ್ಲಿ ಅತಿಹೆಚ್ಚು ಬಿಲಿಯನೇರ್​ಗಳಿದ್ದಾರೆ ಎಂದು ಎನ್​ವಿಡಿಯಾ ಸಹ-ಸಂಸ್ಥಾಪಕ ಹಾಗೂ ಸಿಇಒ ಜೆನ್ಸೆನ್ ಹುವಾಂಗ್ (Jensen Huang) ಹೇಳಿದ್ದಾರೆ. ಅವರ ಪ್ರಕಾರ ಯಶಸ್ವಿ ಉದ್ಯಮ ನಡೆಸಲು ದೊಡ್ಡ ತಂಡವೇ ಆಗಬೇಕಿಲ್ಲ. ಚಿಕ್ಕದಾದ ಸಣ್ಣ ತಂಡವಿದ್ದರೆ ಸಾಕು.

‘ಜಗತ್ತಿನಲ್ಲಿ ಯಾವುದೇ ಸಿಇಒಗಿಂತ ನನ್ನ ಮ್ಯಾನೇಜ್ಮೆಂಟ್ ಟೀಮ್​ನಲ್ಲಿ ನಾನು ಹೆಚ್ಚು ಬಿಲಿಯನೇರ್​ಗಳನ್ನು ಸೃಷ್ಟಿಸಿದ್ದೇನೆ. ಅವರು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನನ್ನ ಪರಿಧಿಯಲ್ಲಿ ಯಾರ ಬಗ್ಗೆಯೂ ಬೇಸರಪಡುವಂಥದ್ದಿಲ್ಲ’ ಎಂದು ಹುವಾಂಗ್ ತಿಳಿಸಿದ್ದಾರೆ.

ಬೇರೆ ಕಂಪನಿ ಖರೀದಿಸಲು ಕೊಡೋ ದುಡ್ಡನ್ನು ನಿಮ್ಮ ತಂಡ ಕಟ್ಟಲು ಬಳಸಿ

ಉದ್ಯಮ ಯಶಸ್ಸಿಗೆ ದೊಡ್ಡ ತಂಡವೇ ಆಗಬೇಕಿಲ್ಲ. ಸಣ್ಣ ತಂಡವಿದ್ದರೆ ಸಾಕು ಎಂದು ಅಭಿಪ್ರಾಯಪಟ್ಟ ಹುವಾಂಗ್, ಇದಕ್ಕೆ ಓಪನ್​ಎಐ ಮತ್ತು ಡೀಪ್​ಸೀಕ್ ಕಂಪನಿಗಳ ಉದಾಹರಣೆ ಕೊಟ್ಟಿದ್ದಾರೆ. ಈ ಎರಡು ಕಂಪನಿಗಳು ಸುಮಾರು 150 ಎಐ ರಿಸರ್ಚರ್​ಗಳೊಂದಿಗೆ ಆರಂಭವಾಗಿದ್ದುವು. ಎನ್​ವಿಡಿಯಾ ಸಿಇಒ ಪ್ರಕಾರ ಅಷ್ಟು ಉದ್ಯೋಗಿಗಳನ್ನು ಇಟ್ಟುಕೊಂಡು ಜಾಗತಿಕ ಮಟ್ಟದ ಕಂಪನಿಗಳನ್ನು ನಿರ್ಮಿಸಲು ಸಾಧ್ಯವಂತೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳ ಪಟ್ಟಿ

‘150 ಜನರು ಇರುವುದೇನೂ ಸಣ್ಣ ತಂಡವಲ್ಲ. ಸರಿಯಾದ ಇನ್​ಫ್ರಾಸ್ಟ್ರಕ್ಚರ್ ಇರುವ ಒಳ್ಳೆಯ ಗಾತ್ರದ ತಂಡ’ ಎಂದೆನ್ನುತ್ತಾರೆ.

ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಅವರು, ಮಾತು ಮುಂದುವರಿಸಿ, ಸರಿಯಾದ ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವುದು ಸರಿಯಾದ ಕ್ರಮ ಎನ್ನುತ್ತಾರೆ.

‘150 ಎಐ ರಿಸರ್ಚರ್ಸ್ ಇರುವ ಒಂದು ಸ್ಟಾರ್ಟಪ್ ಅನ್ನು 20 ಬಿಲಿಯನ್, 30 ಬಿಲಿಯನ್ ಡಾಲರ್ ತೆರಲು ಸಿದ್ಧರಿರುವ ನೀವು ಯಾಕೆ ಒಬ್ಬ ಟಾಪ್ ರಿಸರ್ಚರ್​ಗೆ ಅಷ್ಟು ಸಂಭಾವನೆ ಕೊಡಬಾರದು?’ ಎಂದು ಕೇಳಿದ್ದಾರೆ. ಅಂದರೆ, ಒಂದು ಉತ್ತಮ ತಂಡವನ್ನು ದೊಡ್ಡ ಬೆಲೆಗೆ ಖರೀದಿಸುವ ಬದಲು ಉತ್ತಮ ತಂಡವನ್ನು ಸ್ವಂತವಾಗಿ ಕಟ್ಟುವುದು ಸರಿ ಎಂಬುದು ಹುವಾಂಗ್ ಮಾತಿನ ಇಂಗಿತ.

ಇದನ್ನೂ ಓದಿ: ಇವತ್ತು ಆದಾಯ ತೆರಿಗೆ ದಿನ; ಭಾರತದ ಇನ್ಕಮ್ ಟ್ಯಾಕ್ಸ್ ಸಿಸ್ಟಂ ಬಗ್ಗೆ ಕುತೂಹಲಕಾರಿ ಸಂಗತಿಗಳು

ಎಐ ರಿಸರ್ಚರ್​ಗಳಿಗೆ ಭಾರೀ ಬೇಡಿಕೆ

ಮೆಟಾ ಸಂಸ್ಥೆಯು ಒಬ್ಬ ಎಐ ರಿಸರ್ಚರ್ ಅನ್ನು ನಾಲ್ಕು ವರ್ಷಗಳಿಗೆ ಒಂದು ಬಿಲಿಯನ್ ಡಾಲರ್ ಮೊತ್ತ ಸಂಭಾವನೆಗೆ ನೇಮಕಾತಿ ಮಾಡಿಕೊಂಡಿದೆ. ಜೆನ್ಸೆನ್ ಹುವಾಂಗ್ ಪ್ರಕಾರ, ಎಐ ರಿಸರ್ಚರ್​ಗಳಿಗೆ ಭಾರೀ ಬೇಡಿಕೆ ಇದೆ. ಅವರು ಕೋಡ್ ಅನ್ನಷ್ಟೇ ಬರೆಯುತ್ತಿಲ್ಲ, ಭವಿಷ್ಯ ನಿರ್ಮಿಸುತ್ತಿದ್ದಾರೆ ಎಂದೆನ್ನುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ