AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market: ಸತತ ಎರಡು ದಿನ ಕುಸಿದ ಷೇರು ಮಾರುಕಟ್ಟೆ; ಸಂಭಾವ್ಯ ಕಾರಣಗಳೇನು?

Reasons for the fall of Indian market: ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕಳೆದ ಎರಡು ದಿನದಿಂದ ನಿರಂತರವಾಗಿ ಕುಸಿಯುತ್ತಿವೆ. ಎರಡು ದಿನದಲ್ಲಿ ಶೇ. 1.5ರಷ್ಟು ನಷ್ಟ ಕಂಡಿವೆ. ಬ್ರಿಟನ್ ಜೊತೆ ಭಾರತ ಟ್ರೇಡ್ ಡೀಲ್ ಮಾಡಿಕೊಂಡರೂ ಮಾರುಕಟ್ಟೆ ನಕಾರಾತ್ಮಕವಾಗಿ ವರ್ತಿಸಿರುವುದು ಗಮನಾರ್ಹ. ಈ ಪರಿ ಹಿನ್ನಡೆಗೆ ಸಂಭಾವ್ಯ ಕಾರಣಗಳತ್ತ ಒಂದು ನೋಟ...

Stock Market: ಸತತ ಎರಡು ದಿನ ಕುಸಿದ ಷೇರು ಮಾರುಕಟ್ಟೆ; ಸಂಭಾವ್ಯ ಕಾರಣಗಳೇನು?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2025 | 4:26 PM

Share

ನವದೆಹಲಿ, ಜುಲೈ 25: ಭಾರತದ ಷೇರು ಮಾರುಕಟ್ಟೆ (stock market) ನಿನ್ನೆಯಿಂದ ನಿರಂತರವಾಗಿ ಕುಸಿಯುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಈ ಎರಡೂ ಪ್ರಧಾನ ಸೂಚ್ಯಂಕಗಳು ನಷ್ಟ ಕಾಣುತ್ತಿವೆ. ಇಂದು ಶುಕ್ರವಾರ ಸೆನ್ಸೆಕ್ಸ್ 721 ಅಂಕಗಳಷ್ಟು ಕುಸಿದು 81,463.09 ಅಂಕಗಳೊಂದಿಗೆ ದಿನಾಂತ್ಯಗೊಳಿಸಿತ್ತು. ಇವತ್ತು ಒಂದು ಹಂತದಲ್ಲಿ 81,397 ಅಂಕಗಳ ಮಟ್ಟಕ್ಕೆ ಇಳಿದಿತ್ತು. ಇನ್ನೊಂದೆಡೆ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ 225 ಅಂಕಗಳ ನಷ್ಟ ಕಂಡು 24,837 ಮಟ್ಟಕ್ಕೆ ಇಳಿದಿತ್ತು.

ಈ ಎರಡೂ ಷೇರು ವಿನಿಮಯ ಕೇಂದ್ರಗಳಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸ್ಟಾಕುಗಳ ಮೌಲ್ಯ ಶೇ. 2ರಷ್ಟು ಕುಸಿದಿತ್ತು. ನಿನ್ನೆ ಮತ್ತು ಇವತ್ತಿನ ನಷ್ಟ ಪರಿಗಣಿಸಿದರೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡು ದಿನದಲ್ಲಿ ಶೇ. 1.5ರಷ್ಟು ಕುಸಿದಿವೆ. ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟವಾಗಿದೆ.

ಭಾರತದ ಷೇರು ಮಾರುಕಟ್ಟೆ ಕುಸಿಯಲು ಏನು ಕಾರಣ?

ಭಾರತ ಮತ್ತು ಬ್ರಿಟನ್ ನಡುವೆ ಟ್ರೇಡ್ ಡೀಲ್​ಗೆ ಸಹಿ ಬಿದ್ದರೆ ಮಾರುಕಟ್ಟೆ ಗರಿಗೆದರುತ್ತದೆ ಎಂಬ ಸಹಜ ಎಣಿಕೆ ತಪ್ಪಾಗಿದೆ. ಭಾರತದ ಷೇರು ಮಾರುಕಟ್ಟೆ ಕಾರಣ ಇಲ್ಲದೇ ಕುಸಿಯುತ್ತಿದೆಯಾ? ಏನಿರಬಹುದು ಸಂಭಾವ್ಯ ಕಾರಣ?

ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಅಮೆರಿಕದೊಂದಿಗೆ ಟ್ರೇಡ್ ಡೀಲ್ ವಿಳಂಬ

ಬ್ರಿಟನ್ ಜೊತೆ ಭಾರತ ಟ್ರೇಡ್ ಡೀಲ್ ಜ್ಯಾಕ್​ಪಾಟ್ ಹೊಡೆದರೂ ಅಮೆರಿಕದ ಜೊತೆ ಡೀಲ್ ಕುದುರಿಸಲು ಆಗುತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ, ಏಷ್ಯಾದ ಕೆಲ ದೇಶಗಳು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ ಭಾರತಕ್ಕೆ ಮಾರುಕಟ್ಟೆ ಪ್ರತಿಸ್ಪರ್ಧಿಗಳಾದ ಫಿಲಿಪ್ಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ ದೇಶಗಳೂ ಸೇರಿವೆ. ಭಾರತಕ್ಕೆ ಒಪ್ಪಂದ ಅಂತಿಮಗೊಳಿಸಲು ವಿಳಂಬವಾಗಿರುವುದು ಅನಿಶ್ಚಿತ ಸ್ಥಿತಿ ಎಂಬಂತೆ ಮಾರುಕಟ್ಟೆಗೆ ಭಾಸವಾಗಿರಬಹುದು.

ವಿದೇಶೀ ಹೂಡಿಕೆಗಳ ಹೊರ ವಲಸೆ

ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಮಾರುವ ಧಾವಂತದಲ್ಲಿದ್ದಾರೆ. ಜುಲೈ ತಿಂಗಳಲ್ಲಿ 28,528 ಕೋಟಿ ರೂ ಷೇರುಗಳನ್ನು ಮಾರಿದ್ದಾರೆ. ಕಳೆದ ನಾಲ್ಕು ದಿನಗಳಲ್ಲೇ 11,572 ಕೋಟಿ ಷೇರುಗಳನ್ನು ಎಫ್​ಪಿಐಗಳು ಮಾರಿವೆ. ಇದು ಮಾರುಕಟ್ಟೆ ಕುಸಿಯಲು ಒಂದು ಕಾರಣವಾಗಿರಬಹುದು.

ತ್ರೈಮಾಸಿಕ ವರದಿಗಳಲ್ಲಿ ನಿರಾಸೆ

ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಭಾರತೀಯ ಕಂಪನಿಗಳ ಹಣಕಾಸು ವರದಿಗಳು ಪ್ರಕಟವಾಗಿವೆ. ಐಟಿ ಮತ್ತು ಹಣಕಾಸು ಸೆಕ್ಟರ್​ಗಳಲ್ಲಿ ಕಂಪನಿಗಳ ಗಳಿಕೆ ತುಸು ನಿರಾಸೆ ಮೂಡಿಸಿವೆ. ಇದು ಹೂಡಿಕೆದಾರ ಉತ್ಸಾಹವನ್ನು ಕುಂದಿಸಿರಬಹುದು.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಸದ್ಯದಲ್ಲೇ ಕುಸಿಯಬಹುದು: ರಾಬರ್ಟ್ ಕಿಯೋಸಾಕಿ ಭವಿಷ್ಯ

ಮಾರುಕಟ್ಟೆ ಕುಸಿತದಲ್ಲಿ ತಾಂತ್ರಿಕ ಅಂಶದ ಪಾತ್ರ

ನಿಫ್ಟಿ50 ಸೂಚ್ಯಂಕವು 25,000 ಅಂಕಗಳ ಮಟ್ಟಕ್ಕಿಂತ ಕೆಳಗೆ ಬಂದಿದೆ. ನಿಫ್ಟಿಗೆ ಇದು ಸಪೋರ್ಟಿಂಗ್ ಲೆವೆಲ್ ಎನಿಸಿತ್ತು. ಈ ಮಟ್ಟಕ್ಕಿಂತ ಕೆಳಗೆ ಇಳಿದಿದೆ. 24,837 ಮಟ್ಟದಲ್ಲಿದೆ. ತಜ್ಞರ ಪ್ರಕಾರ, ನಿಫ್ಟಿ 25,340 ಅಂಕಗಳನ್ನ ಮಟ್ಟಕ್ಕಿಂತ ಮೇಲೆ ಹೋಗಲು ಯಶಸ್ವಿಯಾಗುವವರೆಗೂ ಇದೇ ರೀತಿ ಮಂದ ವಾತಾವರಣ ನೆಲಸಿರುತ್ತದೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!