AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ, ಬೆಳ್ಳಿ ಬೆಲೆ ಸದ್ಯದಲ್ಲೇ ಕುಸಿಯಬಹುದು: ರಾಬರ್ಟ್ ಕಿಯೋಸಾಕಿ ಭವಿಷ್ಯ

Robert Kiyosaki predicts crash of Gold, Silver and Bitcoin prices: ಸದ್ಯದಲ್ಲೇ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತಿದೊಡ್ಡ ಕುಸಿತ ಆರಂಭವಾಗಬಹುದು ಎಂದು ಕೆಲವಾರು ವರ್ಷಗಳಿಂದ ರಾಬರ್ಟ್ ಕಿಯೋಸಾಕಿ ಹೇಳುತ್ತಾ ಬಂದಿದ್ದಾರೆ. ಈಗ ಅವರು ಚಿನ್ನ, ಬೆಳ್ಳಿ, ಬಿಟ್​ಕಾಯಿನ್ ಬೆಲೆ ಕುಸಿಯಬಹುದು ಎಂದಿದ್ದಾರೆ. ಉಬ್ಬರ ಒಡೆಯಲು ಆರಂಭಿಸುತ್ತಿದೆ. ಅದರ ಜೊತೆಗೆ ಚಿನ್ನ ಬೆಳ್ಳಿ, ಬಿಟ್​ಕಾಯಿನ್ ಕೂಡ ಕುಸಿಯುತ್ತವೆ. ಹಾಗೇನಾದರೂ ಆದರೆ, ತಾನು ಅವುಗಳಲ್ಲಿ ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ.

ಚಿನ್ನ, ಬೆಳ್ಳಿ ಬೆಲೆ ಸದ್ಯದಲ್ಲೇ ಕುಸಿಯಬಹುದು: ರಾಬರ್ಟ್ ಕಿಯೋಸಾಕಿ ಭವಿಷ್ಯ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 22, 2025 | 5:03 PM

Share

ನವದೆಹಲಿ, ಜುಲೈ 22: ಷೇರು ಮಾರುಕಟ್ಟೆ, ಡಾಲರ್, ಹೂಡಿಕೆ ಬಗ್ಗೆ ಬಾರಿ ಬಾರಿ ಸಲಹೆಗಳನ್ನು ನೀಡುತ್ತಲೇ ಇರುವ ಖ್ಯಾತ ಲೇಖಕ ಮತ್ತು ಹೂಡಿಕೆದಾರ ರಾಬರ್ಟ್ ಕಿಯೋಸಾಕಿ (Robert Kiyosaki) ಈಗ ಚಿನ್ನ (gold), ಬೆಳ್ಳಿ ಮತ್ತು ಬಿಟ್​ಕಾಯಿನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸದ್ಯದಲ್ಲೇ ವಿಶ್ವದ ಪ್ರಮುಖ ಸರಕುಗಳ ಬೆಲೆ ಕುಸಿತ ಆರಂಭವಾಗಬಹುದು ಎನ್ನುವ ಸುಳಿವನ್ನು ಅವರು ನೀಡಿದ್ದಾರೆ. ಇದು ತಮಗೆ ಒಳ್ಳೆಯ ಸುದ್ದಿ ಎಂದೂ ಅವರು ಹೇಳಿದ್ದಾರೆ.

‘ಬಬಲ್​ಗಳು ಒಡೆಯಲಿವೆ. ಇವು ಒಡೆದಾಗ, ಚಿನ್ನ, ಬೆಳ್ಳಿ ಮತ್ತು ಬಿಟ್​ಕಾಯಿನ್ ಕೂಡ ಒಡೆಯಬಹುದು’ ಎಂದು ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿರುವ ರಾಬರ್ಟ್ ಕಿಯೋಸಾಕಿ, ‘ಈ ಸರಕುಗಳ ಬೆಲೆ ಕುಸಿದಾಗ ತಾನು ಅವುಗಳ ಮೇಲೆ ಹೂಡಿಕೆ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ಅಂದರೆ, ರಿಚ್ ಡ್ಯಾಡ್ ಪೂರ್ ಡ್ಯಾಡ್ ಎನ್ನುವ ಬೆಸ್ಟ್ ಸೆಲ್ಲಿಂಗ್ ಪುಸ್ತಕದ ಕರ್ತೃವಾದ ಕಿಯೋಸಾಕಿ, ತಾನು ಚಿನ್ನ, ಬೆಳ್ಳಿ ಬಿಟ್​ಕಾಯಿನ್ ಮೇಲೆ ಹೂಡಿಕೆ ಮಾಡಲಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬ್ಲಿಂಕಿಟ್ ಯಶಸ್ಸಿಗೆ ಉದ್ಯೋಗಿಗಳ ‘ಅತೃಪ್ತಿ’ಯೇ ಕಾರಣವಾ? ಎಟರ್ನಲ್ ಸಿಇಒ ಬಿಚ್ಚಿಟ್ಟ ಸತ್ಯ ಇದು

ಡಾಲರ್ ಕರೆನ್ಸಿಯ ಕಟು ವಿರೋಧಿ ಕಿಯೋಸಾಕಿ

ಹಣ ಉಳಿಸಿ ಕೂಡಿ ಹಾಕುವವರನ್ನು ರಾಬರ್ಟ್ ಕಿಯೋಸಾಕಿ ಲೂಸರ್ಸ್ ಎಂದು ಕರೆಯುತ್ತಾರೆ. ಹಣಕ್ಕೆ ಯಾವ ಮೌಲ್ಯವೂ ಇಲ್ಲ. ಹಾಗೆ ಹಣ ಕೂಡಿ ಹಾಕುವ ಬದಲು ಎಲ್ಲಿಯಾದರೂ ಹೂಡಿಕೆ ಮಾಡಿ ಎನ್ನುವುದು ಅವರ ಸಲಹೆ.

‘1987ರಲ್ಲಿ ಮಾರುಕಟ್ಟೆ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 1998ರಲ್ಲಿ ಎಲ್​ಟಿಸಿಎಂ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 2019ರಲ್ಲಿ ರಿಪೋ ಮಾರ್ಕೆಟ್ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. ಕೋವಿಡ್ ಬಂದಾಗಲೂ ಮುದ್ರಿಸಿದರು’ ಎಂದು ಹೇಳುವ ಅವರು, ‘ನಕಲಿ ಡಾಲರ್​ಗಳನ್ನು ಉಳಿಸುವುದನ್ನು ಬಿಟ್ಟು ನೈಜ ಚಿನ್ನ, ಬೆಳ್ಳಿ ಮತ್ತು ಬಿಟ್​ಕಾಯಿನ್​ಗಳನ್ನು ಉಳಿಸಲು ಆರಂಭಿಸಿ’ ಎಂದು ಮತ್ತೊಂದು ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಫ್ಯೂಚರ್ ಇರುವ ಬ್ಯುಸಿನೆಸ್; ಸೋಲಾರ್ ಏಜೆನ್ಸಿ ಮತ್ತು ಡೀಲರ್​ಶಿಪ್, ಯಾವುದು ಬೆಸ್ಟ್? ಇಲ್ಲಿದೆ ಡೀಟೇಲ್ಸ್

ಅಮೆರಿಕವನ್ನು ವಿಶ್ವದ ಅತಿದೊಡ್ಡ ಸಾಲಗಾರ ದೇಶ ಎಂದು ಬಣ್ಣಿಸುವ ಇವರು, ಇತಿಹಾಸದಲ್ಲೇ ಅತಿದೊಡ್ಡ ಕುಸಿತ ಸದ್ಯದಲ್ಲೇ ಬರುತ್ತಿದೆ ಎಂದು ಎಚ್ಚರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Tue, 22 July 25

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!