Income Tax Day: ಇವತ್ತು ಆದಾಯ ತೆರಿಗೆ ದಿನ; ಭಾರತದ ಇನ್ಕಮ್ ಟ್ಯಾಕ್ಸ್ ಸಿಸ್ಟಂ ಬಗ್ಗೆ ಕುತೂಹಲಕಾರಿ ಸಂಗತಿಗಳು
Income Tax day, interesting facts: ಜುಲೈ 24, ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಡೇ. 165 ವರ್ಷಗಳ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಪದ್ಧತಿ ಜಾರಿಗೆ ಬಂತು. ಇವತ್ತು ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇನ್ಕಮ್ ಟ್ಯಾಕ್ಸ್ ಸೇರಿದೆ. ಈ ಆದಾಯ ತೆರಿಗೆ ಬಗ್ಗೆ ಕೆಲ ಸ್ವಾರಸ್ಯಕರ ಸಂಗತಿ ಇಲ್ಲಿದೆ.

ಇವತ್ತು ಜುಲೈ 24, ಭಾರತೀಯ ಆದಾಯ ತೆರಿಗೆ ದಿನ. ಕೇಂದ್ರ ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇದೂ ಒಂದು. ಭಾರತದಲ್ಲಿ ಆದಾಯ ತೆರಿಗೆ (Income Tax) ವ್ಯವಸ್ಥೆ ಜಾರಿಗೆ ಬಂದಿದ್ದು ಬ್ರಿಟಿಷರ ಆಳ್ವಿಕೆ ವೇಳೆಯಲ್ಲೇ. 1860ರಲ್ಲಿ ಜುಲೈ 24ರಂದು ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ವ್ಯವಸ್ಥೆ ಜಾರಿಗೆ ಬಂದಿತು. 1922ರಲ್ಲಿ ಬ್ರಿಟಿಷ್ ಸರ್ಕಾರ ಇನ್ಕಮ್ ಟ್ಯಾಕ್ಸ್ ಕಾಯ್ದೆ ಜಾರಿಗೆ ತಂದಿತು. ನೂರು ವರ್ಷಗಳ ನಂತರ ಭಾರತದಲ್ಲಿ ಆದಾಯ ತೆರಿಗೆಯ ಒಂದಷ್ಟು ರೂಪುರೇಖೆ ಬದಲಾಗಿದೆ, ಸುಧಾರಣೆಗಳಾಗಿವೆ. ಭಾರತದಲ್ಲಿ ಆದಾಯ ತೆರಿಗೆ ವ್ಯವಸ್ಥೆಯ ಕುರಿತ ಕೆಲ ಕುತೂಹಲಕಾರಿ ಮಾಹಿತಿ ಮತ್ತು ಸಾಧನೆಗಳ ವಿವರ ಮುಂದಿದೆ.
ಆದಾಯ ತೆರಿಗೆ: ಸರ್ಕಾರಕ್ಕೆ ಪ್ರಮುಖ ಆದಾಯ ಮೂಲ
ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಆದಾಯ ತೆರಿಗೆ ಸೇರುತ್ತದೆ. ವ್ಯಕ್ತಿಗಳ ಮೂಲವೇತನ, ಭತ್ಯ, ಬೋನಸ್ ಇತ್ಯಾದಿ ಆದಾಯ; ಮನೆ ಮತ್ತು ಆಸ್ತಿಯಿಂದ ಬರುವ ಬಾಡಿಗೆ ಮತ್ತಿತರ ಆದಾಯ; ಆಸ್ತಿ ಮಾರಾಟದಿಂದ ಬರುವ ಆದಾಯ; ಬ್ಯುಸಿನೆಸ್ಗಳಿಂದ ಬರುವ ಆದಾಯ; ಬಡ್ಡಿ, ಡಿವಿಡೆಂಡ್, ಲಾಟರಿ ಇತ್ಯಾದಿಯಿಂದ ಬರುವ ಆದಾಯ ಇವೆಲ್ಲಕ್ಕೂ ಸರ್ಕಾರ ತೆರಿಗೆ ವಿಧಿಸುತ್ತದೆ.
ಇದನ್ನೂ ಓದಿ: SGST ಯಾರಿಗೆ ಹೋಗುತ್ತೆ? ಕರ್ನಾಟಕ ಸಿಎಂ ಹೇಳಿದ್ದು ಸುಳ್ಳಾ? ಇಲ್ಲಿದೆ ವಾಸ್ತವಿಕ ಜಿಎಸ್ಟಿ ಲೆಕ್ಕಾಚಾರ
ಆದಾಯ ತೆರಿಗೆಯನ್ನು ಡೈರೆಕ್ಟ್ ಟ್ಯಾಕ್ಸ್ ಅಥವಾ ನೇರ ತೆರಿಗೆ ಎಂದು ಪರಿಗಣಿಸಲಾಗುತ್ತದೆ. ಕಳೆದ ಐದು ವರ್ಷದಲ್ಲಿ ಒಟ್ಟಾರೆ ಇನ್ಕಮ್ ಟ್ಯಾಕ್ಸ್ ಸಂಗ್ರಹ ಎರಡು ಪಟ್ಟು ಹೆಚ್ಚಾಗಿದೆ. 2020-21ರಲ್ಲಿ ಒಟ್ಟಾರೆ ನೇರ ತೆರಿಗೆ ಸಂಗ್ರಹ 12.31 ಲಕ್ಷ ಕೋಟಿ ರೂ ಆಗಿತ್ತು. 2024-25ರಲ್ಲಿ ಸಂಗ್ರಹವಾದ ನೇರ ತೆರಿಗೆ ಮೊತ್ತ 27.02 ಲಕ್ಷ ಕೋಟಿ ರೂ.
ಸರ್ಕಾರಕ್ಕೆ ಇಷ್ಟು ಆದಾಯ ತೆರಿಗೆ ಸಂಗ್ರಹ ಹೆಚ್ಚಲು ಅದು ಜಾರಿಗೆ ತಂದ ವಿವಿಧ ಕ್ರಮಗಳೇ ಕಾರಣ. ಪ್ಯಾನ್ ಮತ್ತು ಆಧಾರ್ ಜೋಡಣೆ, ಸಿಪಿಸಿ ಸ್ಥಾಪನೆ, ಟಿಡಿಎಸ್ ರೀಕಾನ್ಸಿಲಿಯೇಶನ್ ಅನಾಲಿಸಿಸ್ ಸಿಸ್ಟಂ, ಟ್ಯಾಕ್ಸ್ ಇನ್ಫಾರ್ಮೇಶನ್ ನೆಟ್ವರ್ಕ್, ಡಿಮ್ಯಾಂಡ್ ಫೆಸಿಲಿಟೇಶನ್ ಸೆಂಟರ್ ಇತ್ಯಾದಿ ಹಲವು ಕ್ರಮಗಳು ಆದಾಯ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಸರಳವಾಗಿಸಿವೆ.
ಐಟಿಆರ್ ಸಲ್ಲಿಸುವ ಕೆಲಸ ಸರಳಗೊಳಿಸಿದ್ದು, ಇನ್ಕಮ್ ಟ್ಯಾಕ್ಸ್ ಬಗ್ಗೆ ಸರ್ಕಾರ ಸತತವಾಗಿ ಜಾಗೃತಿ ಮೂಡಿಸುತ್ತಿರುವುದು ಇವೆಲ್ಲವೂ ಟ್ಯಾಕ್ಸ್ ಸಂಗ್ರಹ ಹೆಚ್ಚಲು ಪಾತ್ರ ವಹಿಸಿರಬಹುದು.
ಇದನ್ನೂ ಓದಿ: ಈಕ್ವಿಟಿಯಿಂದ ಡೆಟ್ ಫಂಡ್ವರೆಗೆ ವಿವಿಧ ಮ್ಯುಚುವಲ್ ಫಂಡ್ಗಳಿಗೆ ವಿಭಿನ್ನ ಟ್ಯಾಕ್ಸ್ ಅನ್ವಯ; ಇಲ್ಲಿದೆ ಡೀಟೇಲ್ಸ್
ಹೊಸ ಟ್ಯಾಕ್ಸ್ ರಿಜೈಮ್ನಲ್ಲಿರುವ ಸ್ಲ್ಯಾಬ್ ದರಗಳು
- 0-4 ಲಕ್ಷ ರೂ ಆದಾಯ: ಟ್ಯಾಕ್ಸ್ ಇಲ್ಲ
- 4-8 ಲಕ್ಷ ರೂ ಆದಾಯ: ಶೇ. 5
- 8-12 ಲಕ್ಷ ರೂ ಆದಾಯ: ಶೇ. 10
- 12-16 ಲಕ್ಷ ರೂ ಆದಾಯ: ಶೇ. 15
- 16-20 ಲಕ್ಷ ರೂ ಆದಾಯ: ಶೇ. 20
- 20-24 ಲಕ್ಷ ರೂ ಆದಾಯ: ಶೇ. 25
- 24 ಲಕ್ಷ ರೂಗಿಂತ ಹೆಚ್ಚಿನ ಆದಾಯ: ಶೇ. 30
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








