AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ಅವಶ್ಯಕತೆ ಇಲ್ಲದವರು ಯಾರ‍್ಯಾರು? ಇಲ್ಲಿದೆ ಪಟ್ಟಿ

Income tax exemptions: ಭಾರತದಲ್ಲಿ ಹೆಚ್ಚಿನ ಜನರು ಇನ್ಕಮ್ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತಾರೆ. ಕೆಲವರಿಗೆ ಬೇರೆ ಬೇರೆ ಕಾರಣಗಳಿಗೆ ವಿನಾಯಿತಿ ನೀಡಲಾಗಿದೆ. ಸಿಕ್ಕಿಂ ರಾಜ್ಯದ ಯಾವುದೇ ನಿವಾಸಿಗಳು ಇನ್ಕಮ್ ಟ್ಯಾಕ್ಸ್ ನೀಡಬೇಕಿಲ್ಲ. ಕೆಲ ರಾಜ್ಯಗಳ ಬುಡಕಟ್ಟು ಜನರು ಐಟಿಆರ್ ಸಲ್ಲಿಸಬೇಕಿಲ್ಲ. ಕಡಿಮೆ ಆದಾಯ ಇರುವ ಹಾಗೂ ಕೆಲ ಮೂಲದ ಆದಾಯ ಮಾತ್ರ ಇರುವ ವ್ಯಕ್ತಿಗಳಿಗೂ ವಿನಾಯಿತಿ ಇದೆ.

ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ಅವಶ್ಯಕತೆ ಇಲ್ಲದವರು ಯಾರ‍್ಯಾರು? ಇಲ್ಲಿದೆ ಪಟ್ಟಿ
ಇನ್ಕಮ್ ಟ್ಯಾಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 21, 2025 | 12:46 PM

Share

ಭಾರತದಲ್ಲಿ ಹೆಚ್ಚಿನ ಜನರು ಮತ್ತು ಸಂಸ್ಥೆಗಳು ಆದಾಯ ತೆರಿಗೆ ಪಾವತಿಸದೇ ಇದ್ದರೂ ಟ್ಯಾಕ್ಸ್ ರಿಟರ್ನ್ (Income tax return) ಸಲ್ಲಿಸುವ ಅವಶ್ಯತೆ ಇದೆ. ಆದರೆ, ಕೆಲ ವರ್ಗದ ಜನರು ಹಾಗೂ ಪ್ರದೇಶಗಳು ಇನ್ಕಮ್ ಟ್ಯಾಕ್ಸ್ ವ್ಯಾಪ್ತಿಯಿಂದ ಹೊರಗಿರುತ್ತಾರೆ. ಐಟಿಆರ್ ಸಲ್ಲಿಸುವ ಕಾರ್ಯದಿಂದ ವಿನಾಯಿತಿ ಯಾರಿಗೆಲ್ಲಾ ನೀಡಲಾಗಿದೆ ಎನ್ನುವ ವಿವರ ಇಲ್ಲಿದೆ…

ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿನಾಯಿತಿ…

ಸಿಕ್ಕಿಂ ರಾಜ್ಯದ ನಿವಾಸಿಗಳು ಆದಾಯ ತೆರಿಗೆ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಭಾರತದೊಂದಿಗೆ 1950ರಲ್ಲಿ ವಿಲೀನವಾಗುವಾಗ ಸಿಕ್ಕಿದ ವಿನಾಯಿತಿ ಇದು.

ಅರುಣಾಚಲಪ್ರದೇಶ, ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡಗಳ (ಎಸ್​ಟಿ) ಜನರು ಇನ್ಕಮ್ ಟ್ಯಾಕ್ಸ್ ಕಟ್ಟುವ ಅಗತ್ಯ ಇಲ್ಲ.

ಇದನ್ನೂ ಓದಿ
Image
ಐಟಿ ವಂಚಕರನ್ನು ಹಿಡಿಯಲು ಇಲಾಖೆ ವ್ಯಾಪಕ ಬಲೆ
Image
ಇಪಿಎಫ್ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕಾ?
Image
ಓಮನ್​​ನಲ್ಲಿ ಬರಲಿದೆ ಆದಾಯ ತೆರಿಗೆ; ಯಾಕಿದು ವಿಶೇಷ?
Image
ಐಟಿ ರೀಫಂಡ್ ಬರದೇ ಹೋದರೆ ಹೀಗೆ ಮಾಡಿ

ಅಸ್ಸಾಮ್, ಮೇಘಾಲಯ ಮತ್ತು ಜಾರ್ಖಂಡ್​ ರಾಜ್ಯಗಳ ಕೆಲ ನಿಗದಿತ ಪ್ರದೇಶಗಳಲ್ಲಿರುವ ಬುಡಕಟ್ಟು ಜನರು ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿರುತ್ತಾರೆ.

ಇದನ್ನೂ ಓದಿ: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್

ಬೇಸಿಕ್ ಎಕ್ಸೆಂಪ್ಷನ್ ಮಿತಿಗಿಂತ ಕೆಳಗಿರುವ ವ್ಯಕ್ತಿಗಳು

ಇನ್ಕಮ್ ಟ್ಯಾಕ್ಸ್ ಸಿಸ್ಟಂನಲ್ಲಿ ಮೂಲ ವಿನಾಯಿತಿ ಮಿತಿಯಾಗಿ 2.5-3 ಲಕ್ಷ ರೂ ಅನ್ನು ನಿಗದಿ ಮಾಡಾಗಿದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿರಿಗೆ 5 ಲಕ್ಷ ರೂ ಎಕ್ಸೆಂಪ್ಷನ್ ಲಿಮಿಟ್ ಇದೆ. ಈ ಮಿತಿಯೊಳಗಿನ ಆದಾಯ ಹೊಂದಿರುವವರು ಐಟಿ ರಿಟರ್ನ್ ಫೈಲ್ ಮಾಡುವ ಅವಶ್ಯಕತೆ ಇರುವುದಿಲ್ಲ.

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು

75 ವರ್ಷ ವಯಸ್ಸು ದಾಟಿದವರು ಕೇವಲ ಪಿಂಚಣಿ ಆದಾಯ ಮತ್ತು ಬ್ಯಾಂಕ್ ಬಡ್ಡಿ ಆದಾಯ ಮಾತ್ರ ಹೊಂದಿದ್ದರೆ ಐಟಿ ರಿಟರ್ನ್ ಸಲ್ಲಿಸುವ ಅಗತ್ಯ ಇರುವುದಿಲ್ಲ.

ಕೃಷಿ ಆದಾಯ ಹೊಂದಿದವರು…

ಕೃಷಿಯಿಂದ ಮಾತ್ರ ಆದಾಯ ಹೊಂದಿರುವವರು ಐಟಿಆರ್ ಫೈಲ್ ಮಾಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಕೃಷಿಯೇತರ ಆದಾಯವು ವರ್ಷಕ್ಕೆ ಎರಡೂವರೆ ಲಕ್ಷ ರೂ ಮೀರಿದರೆ ಐಟಿ ರಿಟರ್ನ್ ಸಲ್ಲಿಸಬೇಕಾಗಬಹುದು.

ಇದನ್ನೂ ಓದಿ: ಐಟಿ ರಿಟರ್ನ್ಸ್ ವೇಳೆ ಸುಳ್ಳು ಮಾಹಿತಿ ಕೊಟ್ಟು ತೆರಿಗೆ ವಂಚಿಸುವವರನ್ನು ಜಾಲಾಡುತ್ತಿದೆ ಇನ್ಕಮ್ ಟ್ಯಾಕ್ಸ್ ಇಲಾಖೆ

ಅನಿವಾಸಿ ಭಾರತೀಯರು?

ಅನಿವಾಸಿ ಭಾರತೀಯರು ಭಾರತದಲ್ಲಿ 2.5 ಲಕ್ಷ ರೂಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಐಟಿಆರ್ ಫೈಲ್ ಮಾಡಬೇಕು. ಇಲ್ಲದಿದ್ದರೆ ಅದರ ಅವಶ್ಯಕತೆ ಇರುವುದಿಲ್ಲ.

ಎಕ್ಸೆಂಪ್ಟ್ ಇನ್ಕಮ್ ಮಾತ್ರವೇ ಇರುವ ವ್ಯಕ್ತಿಗಳು…

ಟ್ಯಾಕ್ಸ್ ಎಕ್ಸೆಂಪ್ಷನ್ ಇರುವ ಹೂಡಿಕೆಗಳಿಂದ ಬರುವ ಆದಾಯ ಮಾತ್ರವನ್ನೇ ಹೊಂದಿರುವ ವ್ಯಕ್ತಿಗಳು ಐಟಿಆರ್ ಸಲ್ಲಿಸಬೇಕಿಲ್ಲ. ಉದಾಹರಣೆಗೆ, ಮ್ಯುಚುವಲ್ ಫಂಡ್​ಗಳಿಂದ ಡಿವಿಡೆಂಡ್, ಪಿಪಿಎಫ್ ಬಡ್ಡಿ, ಸಂಬಂಧಿಕರಿಂದ ಗಿಫ್ಟ್ ಇತ್ಯಾದಿಗಳಿಂದ ಬರುವ ಆದಾಯಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Mon, 21 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ