EPF tax: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್
Income tax rule on Employee Provident Fund: ಇಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ. ಆದರೆ, ಒಂದು ವರ್ಷದಲ್ಲಿ ಇಪಿಎಫ್ ಕೊಡುಗೆ 2.5 ಲಕ್ಷ ರೂ ಮೀರಿದರೆ, ಆ ಹೆಚ್ಚುವರಿ ಮೊತ್ತ ಮಾತ್ರ ಟ್ಯಾಕ್ಸಬಲ್ ಇನ್ಕಮ್ ಎನಿಸುತ್ತದೆ. ಆ ಟ್ಯಾಕ್ಸಬಲ್ ಇನ್ಕಮ್ನಿಂದ ಸಿಗುವ ಬಡ್ಡಿ ಹಣ 5,000 ರೂ ಮೀರಿದಾಗ ಅದಕ್ಕೆ ಟಿಡಿಎಸ್ ಕಡಿತ ಆಗುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯಲ್ಲಿನ ಇಪಿಎಫ್ ಖಾತೆಗಳು ಟ್ಯಾಕ್ಸ್ ವ್ಯಾಪ್ತಿಯಿಂದ ಹೊರಗಿರುವುದಿಲ್ಲ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತದ ಇಪಿಎಫ್ ಹಣಕ್ಕೆ ತೆರಿಗೆ ಇರುತ್ತದೆ. ಆದಾಯ ತೆರಿಗೆ (Income Tax) ನಿಯಮಗಳ ಪ್ರಕಾರ ಖಾಸಗಿ ಕ್ಷೇತ್ರದ ಉದ್ಯೋಗಿಯೊಬ್ಬರ ಇಪಿಎಫ್ ಕೊಡುಗೆ (EPF contribution) ವರ್ಷಕ್ಕೆ 2.5 ಲಕ್ಷ ರೂ ಮೀರಿದರೆ, ಅ ಹೆಚ್ಚುವರಿ ಕೊಡುಗೆಯ ಹಣವು ಟ್ಯಾಕ್ಸಬಲ್ ಇನ್ಕಮ್ ಆಗಿರುತ್ತದೆ. ಇಷ್ಟೊಂದು ಇಪಿಎಫ್ ಕೊಡುಗೆ ಹೇಗೆ ಸಾಧ್ಯ?
ಇಪಿಎಫ್ಒ ನಿಯಮದ ಪ್ರಕಾರ ನಿಮ್ಮ ಮೂಲವೇತನ ಹಾಗೂ ಡಿಎ ಮೊತ್ತದ ಶೇ. 12ರಷ್ಟು ಹಣವನ್ನು ಇಪಿಎಫ್ ಅಕೌಂಟ್ಗೆ ಪ್ರತೀ ತಿಂಗಳು ಜಮೆ ಮಾಡಲಾಗುತ್ತದೆ. ಈ ಮೊತ್ತವು ಒಂದು ಹಣಕಾಸು ವರ್ಷದಲ್ಲಿ 2.5 ಲಕ್ಷ ರೂಗಿಂತ ಒಳಗಿದ್ದರೆ ಅದಕ್ಕೆ ತೆರಿಗೆ ಅನ್ವಯ ಆಗುವುದಿಲ್ಲ.
ಹೆಚ್ಚಿನ ಉದ್ಯೋಗಿಗಳ ಇಪಿಎಫ್ ಮೊತ್ತವು ಒಂದು ವರ್ಷದಲ್ಲಿ ಈ ಮಿತಿಗಿಂತ ಹೆಚ್ಚಿರುವುದಿಲ್ಲ. ಒಂದು ವೇಳೆ ಇದು ಹೆಚ್ಚಿದ್ದಲ್ಲಿ ಹೆಚ್ಚುವರಿ ಮೊತ್ತ ಮಾತ್ರವೇ ತೆರಿಗೆಗೆ ಅರ್ಹವಾಗಿರುತ್ತದೆ.
ಇದನ್ನೂ ಓದಿ: Cost Inflation Index: ಬೆಲೆ ಉಬ್ಬರ ಸೂಚಿಯಲ್ಲಿ ಏರಿಕೆ; ತಗ್ಗಲಿದೆ ಟ್ಯಾಕ್ಸ್ ಹೊರೆ
ಉದಾಹರಣೆಗೆ, ನಿಮ್ಮ ಇಪಿಎಫ್ ಅಕೌಂಟ್ಗೆ ಸಂದಾಯವಾಗುವ ಹಣವು ವರ್ಷದಲ್ಲಿ 3 ಲಕ್ಷ ರೂ ಇದ್ದದಲ್ಲಿ ಆಗ 2.5 ಲಕ್ಷ ರೂ ಮೇಲ್ಪಟ್ಟ ಆದಾಯ ಎಂದರೆ 50,000 ರೂ ಆಗುತ್ತದೆ. ಈ 50,000 ರೂ ಹಣವು ಟ್ಯಾಕ್ಸಬಲ್ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಒಟ್ಟಾರೆ ಆದಾಯದ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಟ್ಯಾಕ್ಸ್ ಸ್ಲ್ಯಾಬ್ ದರ ಇದಕ್ಕೆ ಅನ್ವಯ ಆಗುತ್ತದೆ.
5,000 ರೂ ಮೀರಿದ ಬಡ್ಡಿ ಆದಾಯಕ್ಕೆ ಶೇ. 10ರಷ್ಟು ಟಿಡಿಎಸ್
ನಿಮ್ಮ ಟ್ಯಾಕ್ಸಬಲ್ ಇಪಿಎಫ್ ಆದಾಯಕ್ಕೆ ಒಂದು ವರ್ಷದಲ್ಲಿ ಸಿಗುವ ಬಡ್ಡಿ ಹಣ 5,000 ರೂ ಮೀರಿದಲ್ಲಿ ಅದಕ್ಕೆ ಶೇ. 10ರಷ್ಟು ಟಿಡಿಎಸ್ ಕಡಿತ ಆಗುತ್ತದೆ. ಸರ್ಕಾರದಿಂದ ವಾರ್ಷಿಕವಾಗಿ ಬಡ್ಡಿ ಜಮೆ ಆಗುವಾಗಲೇ ಟಿಡಿಎಸ್ ಕಡಿತ ಆಗಿರುತ್ತದೆ. ಗಮನಿಸಿ, ಟಿಡಿಎಸ್ ಎಲ್ಲಾ ಇಪಿಎಫ್ ಖಾತೆಗಳಿಗೆ ಅನ್ವಯ ಆಗಲ್ಲ. ವರ್ಷದಲ್ಲಿ ಇಪಿಎಫ್ ಕೊಡುಗೆ ಎರಡೂವರೆ ಲಕ್ಷ ರೂ ಮೀರಿದರೆ, ಮತ್ತು ಹೆಚ್ಚುವರಿ ಕೊಡುಗೆಗೆ ಸಿಗುವ ಬಡ್ಡಿ ಹಣ 5,000 ರೂ ಮೀರಿದರೆ ಮಾತ್ರವೇ ಟಿಡಿಎಸ್ ಕಡಿತ ಆಗುವುದು.
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ತೆರಿಗೆಯು ಒಂದು ಹಣಕಾಸು ವರ್ಷದಲ್ಲಿ ಬಂದ ಇಪಿಎಫ್ ಕೊಡುಗೆಗೆ ಮಾತ್ರ ಅನ್ವಯ ಆಗುತ್ತದೆ. ನಿಮ್ಮ ಹಳೆಯ ಕೊಡುಗೆ ಎಲ್ಲವೂ ಸೇರಿ ಇರುವ ಇಪಿಎಫ್ ಕಾರ್ಪಸ್ಗೆ ಈ ಟ್ಯಾಕ್ಸ್ ಅನ್ವಯ ಆಗುವುದಿಲ್ಲ. ಉದಾಹರಣೆಗೆ, ನಿಮ್ಮ ಇಪಿಎಫ್ ಅಕೌಂಟ್ನಲ್ಲಿ ಒಟ್ಟು 6,00,000 ಹಣ ಜಮೆ ಆಗಿರಬಹುದು. ಹೀಗಿದ್ದಾಗ ಬಡ್ಡಿ ಹಣ 49,500 ರೂ ಸಿಕ್ಕಿರುತ್ತದೆ. ಆದರೆ, ಇದಕ್ಕೆ ಟಿಡಿಎಸ್ ಕಡಿತ ಆಗಲ್ಲ. ಅಥವಾ ಇದು ಟ್ಯಾಕ್ಸಬಲ್ ಇನ್ಕಮ್ ಆಗುವುದಿಲ್ಲ. ನಿಮ್ಮ ಒಂದು ವರ್ಷದ ಇಪಿಎಫ್ ಕೊಡುಗೆ ಹಾಗೂ ಬಡ್ಡಿ ಆದಾಯವನ್ನು ಮಾತ್ರವೇ ತೆರಿಗೆಗೆ ಪರಿಗಣಿಸಲಾಗುತ್ತದೆ.
ನಿಮ್ಮ ಇಪಿಎಫ್ ಆದಾಯವು ಟ್ಯಾಕ್ಸಬಲ್ ಇನ್ಕಮ್ ಆಗಿದ್ದರೆ ಅದನ್ನು ಐಟಿ ರಿಟರ್ನ್ ಫೈಲ್ ಮಾಡುವಾಗ ಘೋಷಿಸಬೇಕಾಗುತ್ತದೆ. ಇನ್ಕಮ್ ಫ್ರಂ ಅದರ್ ಸೋರ್ಸಸ್ ಎಂದು ನಮೂದಿಸಬೇಕಾಗುತ್ತದೆ. ಆದರೆ, ಹೆಚ್ಚಿನ ಇಪಿಎಫ್ ಖಾತೆದಾರರು ಟ್ಯಾಕ್ಸ್ ವ್ಯಾಪ್ತಿಯಿಂದ ಹೊರಗೇ ಇರುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




