ಇನ್ಕಮ್ ಟ್ಯಾಕ್ಸ್ ಅಲರ್ಟ್: ಐಟಿ ರಿಟರ್ನ್ಸ್ ಸಲ್ಲಿಸಿದ ಬಳಿಕ ನಿಮಗೆ ರೀಫಂಡ್ ಬರದೇ ಹೋದರೆ ಹೀಗೆ ಮಾಡಿ
Steps to be taken of tax refund not issued: ನಾವು ಹೆಚ್ಚು ಆದಾಯ ತೆರಿಗೆ ಕಟ್ಟಿದ್ದರೆ ಹೆಚ್ಚುವರಿ ತೆರಿಗೆಯನ್ನು ಐಟಿಆರ್ ಮೂಲಕ ರೀಫಂಡ್ ಪಡೆಯಲು ಸಾಧ್ಯ. ಹೀಗೆ ರೀಫಂಡ್ಗೆ ಮನವಿ ಮಾಡಿಯೂ ರೀಫಂಡ್ ಬರದೇ ಹೋದರೆ ಏನು ಮಾಡಬೇಕು? ಆದಾಯ ತೆರಿಗೆ ಇಲಾಖೆ ಎರಡು ಕಾರಣಗಳನ್ನು ನೀಡಿದ್ದು, ಅದಕ್ಕೆ ಮಾರ್ಗೋಪಾಯಗಳನ್ನೂ ನೀಡಿದೆ.

ನವದೆಹಲಿ, ಜೂನ್ 20: ನಾವು ಒಂದು ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚು ಆದಾಯ ತೆರಿಗೆಯನ್ನು ಪಾವತಿಸಿರಬಹುದು. ಅಂಥ ಸಂದರ್ಭದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವಾಗ, ತೆರಿಗೆ ಬಾಧ್ಯತೆ (tax liability) ಎಷ್ಟೆಷ್ಟಿದೆ, ತೆರಿಗೆ ಕಟ್ಟಿರುವುದು ಎಷ್ಟು, ಆದಾಯ ಎಷ್ಟು ಇತ್ಯಾದಿ ಎಲ್ಲಾ ವಿವರವನ್ನೂ ಭರ್ತಿ ಮಾಡಿರುತ್ತೇವೆ. ಅಗತ್ಯಕ್ಕಿಂತ ಹೆಚ್ಚು ತೆರಿಗೆ (excessive tax) ಕಟ್ಟಿದ್ದರೆ ಅದರ ರೀಫಂಡ್ಗೆ (tax refund) ಮನವಿ ಮಾಡಬೇಕಾಗುತ್ತದೆ. ಹಾಗೆ ಮಾಡಿಯೂ ಬೇರೆ ಬೇರೆ ಕಾರಣಕ್ಕೆ ರೀಫಂಡ್ ಬರದೇ ಹೋಗಬಹುದು. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಸೋಷಿಯಲ್ ಮೀಡಿಯಾದಲ್ಲಿ ಕೆಲ ಮಾರ್ಗೋಪಾಯಗಳನ್ನು ಸೂಚಿಸಿದೆ.
ಬ್ಯಾಂಕ್ ಖಾತೆ ವ್ಯಾಲಿಡೇಟ್ ಆಗಿರದೇ ಇದ್ದರೆ ಮತ್ತು ರೀಫಂಡ್ ರೀ ಇಷ್ಯೂ ರಿಕ್ವೆಸ್ಟ್ ಸಲ್ಲಿಸದೇ ಇದ್ದಾಗ ರೀಫಂಡ್ ಬರದೇ ತಡೆದಿರುವ ಸಾಧ್ಯತೆ ಇದೆ ಎಂದು ಹೇಳಿರುವ ಆದಾಯ ತೆರಿಗೆ ಇಲಾಖೆ, ಈ ಎರಡು ಕ್ರಮ ಅನುಸರಿಸಲು ಸೂಚಿಸಿದೆ:
- ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಿ ಅಥವಾ ರೀವ್ಯಾಲಿಡೇಟ್ ಮಾಡಿ.
- ಬ್ಯಾಂಕ್ ಅಕೌಂಟ್ ವ್ಯಾಲಿಡೇಟ್ ಆದ ಬಳಿಕ ‘ರೀಫಂಡ್ ರೀಇಷ್ಯೂ ರಿಕ್ವೆಸ್ಟ್’ ಅನ್ನು ಸಲ್ಲಿಸಿ.
ಇದನ್ನೂ ಓದಿ: ಗಮನಿಸಿ, ಐಸಿಐಸಿಐ ಬ್ಯಾಂಕ್ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ
ರೀಫಂಡ್ ಹಣ ಬರಬೇಕೆಂದರೆ ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು. ಇಫೈಲಿಂಗ್ ಪೋರ್ಟಲ್ಗೆ ಹೋಗಿ ಲಾಗಿನ್ ಆಗಿ ಅಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಸರಿಯಾಗಿದೆಯಾ ಪರಿಶೀಲಿಸಿ. ಸರಿ ಇಲ್ಲದಿದ್ದರೆ ಅಪ್ಡೇಟ್ ಮಾಡಿ ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಿ.
Kind Attention Taxpayers!
If your refund has failed due to non-validation / re-validation of your bank account, please ensure your bank account is validated or re-validated, as applicable.
If you have not submitted “Refund Reissue Request” after validation/ re-validation of… pic.twitter.com/kDSyc6BNj2
— Income Tax India (@IncomeTaxIndia) June 19, 2025
ರೀಫಂಡ್ ರೀಇಷ್ಯೂ ರಿಕ್ವೆಸ್ಟ್ ಸಲ್ಲಿಸಿ…
ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಿದ ಬಳಿಕ ನೀವು ‘ರೀಫಂಡ್ ರೀಇಷ್ಯೂ ರಿಕ್ವೆಸ್ಟ್’ ಅನ್ನು ಸಲ್ಲಿಸದೇ ಹೋದಾಗಲೂ ರೀಫಂಡ್ ಬಂದಿರುವುದಿಲ್ಲ. ಹಾಗೆ ನೀವು ಮರೆತಿದ್ದರೆ ಮೊದಲು ಆ ಕೆಲಸ ಮಾಡಿ. ಅದರ ಕ್ರಮ ಈ ಕೆಳಕಂಡಂತೆ ಇದೆ:
- ಇಫೈಲಿಂಗ್ ಪೋರ್ಟಲ್ಗೆ ಲಾಗಿನ್ ಆಗಿ
- ಸರ್ವಿಸಸ್ಗೆ, ಹಾಗು ‘ರೀಫಂಡ್ ರೀಇಷ್ಯೂ’ಗೆ ಹೋಗಿ.
- ‘ರೀಫಂಡ್ ರೀಇಷ್ಯೂ ರಿಕ್ವೆಸ್ಟ್’ಗೆ ದಾಖಲೆಯನ್ನು ಆಯ್ಕೆ ಮಾಡಿ.
- ವ್ಯಾಲಿಡೇಟ್ ಮಾಡಲಾದ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ.
- ‘ಪ್ರೊಸೀಡ್ ಟು ವೆರಿಫಿಕೇಶನ್’ ಕ್ಲಿಕ್ ಮಾಡಿ.
- ಇವೆರಿಫಿಕೇಶನ್ ವಿಧಾನ- ಆಧಾರ್ ಓಟಿಪಿ/ಇವಿಸಿ/ಡಿಎಸ್ಸಿ ಆಯ್ಕೆ ಮಾಡಿ.
- ಈ ಮೂರರಲ್ಲಿ ಒಂದು ವಿಧಾನದ ಮೂಲಕ ವೆರಿಫಿಕೇಶನ್ ಸಲ್ಲಿಸಬಹುದು.
ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ, ಐಟಿಆರ್ ಫೈಲಿಂಗ್ಗೆ ಡೆಡ್ಲೈನ್ ಜುಲೈ 31 ಅಲ್ಲ, ಸೆಪ್ಟೆಂಬರ್ 15ರವರೆಗೆ ವಿಸ್ತರಣೆ
ಇದಿಷ್ಟು ಯಶಸ್ವಿಯಾಗಿ ಮಾಡಿ ಸಲ್ಲಿಸಿದ ಬಳಿಕ ಒಂದೆರಡು ತಿಂಗಳೊಳಗೆ ರೀಫಂಡ್ ಬರುವ ಸಾಧ್ಯತೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Fri, 20 June 25








