Gold: ಚಿನ್ನದ ಬೆಲೆ ಶೇ. 30 ಇಳಿಯುತ್ತೆ: ತಜ್ಞರ ಭವಿಷ್ಯ; ಈ ದರ ಕುಸಿತಕ್ಕೆ ಏನಿರಬಹುದು ಕಾರಣ?
Experts predict gold rate to come down in coming months: ಚಿನ್ನದ ಬೆಲೆ ಈ ವರ್ಷ ಭಾರೀ ವೇಗದಲ್ಲಿ ಏರಿದೆ. ಜಾಗತಿಕ ರಾಜಕೀಯ ಹಿನ್ನಡೆ, ಡಾಲರ್ ಕುಸಿತ, ಆರ್ಥಿಕ ತುಮುಲ ಇತ್ಯಾದಿ ಕಾರಣವು ಬೆಲೆ ಏರಿಕೆಗೆ ಕಾರಣ. ಆದರೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಯಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಮುಂದಿನ 2-3 ತಿಂಗಳಲ್ಲಿ ಶೇ. 10, ಮುಂದಿನ 12 ತಿಂಗಳಲ್ಲಿ ಶೇ. 30ರಷ್ಟು ಬೆಲೆ ಇಳಿಕೆ ಆಗಬಹುದು ಎಂದಿದ್ದಾರೆ. ಹಾಗಾದರೆ ಏನು ಕಾರಣ?

ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಚಿನ್ನದ ಬೆಲೆ (Gold rate) ಓಲಾಡಿದೆ. ಈ ವರ್ಷ ಹಳದಿ ಲೋಹದ ಬೆಲೆ ಶೇ. 30ರಷ್ಟು ಏರಿದೆ. ಏನೇ ಬರಲಿ ಭಾರತೀಯರು ಚಿನ್ನವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಆದರೆ, ಇಷ್ಟು ಭಯಂಕರ ಬೆಲೆಯು ಮಧ್ಯಮ ವರ್ಗದ ಜನರ ಉಳಿತಾಯಕ್ಕೆ ದೊಡ್ಡ ಸಂಚಕಾರ ತಂದೇ ತರುತ್ತದೆ. ಚಿನ್ನದ ಬೆಲೆ ಯಾವಾಗ ಇಳಿಯುತ್ತೆ ಎಂದು ಹತಾಶೆಯಲ್ಲಿರುವ ಭಾರತೀಯರಿಗೆ ಖುಷಿ ಸುದ್ದಿಯೊಂದು ಇದೆ. ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
ಮುಂದಿನ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 30 ಕುಸಿತ?
ಸಿಟಿ ಬ್ಯಾಂಕ್ (Citi bank) ಪ್ರಕಾರ ಚಿನ್ನದ ಬೆಲೆ ಮುಂದಿನ ಒಂದು ವರ್ಷದಲ್ಲಿ ಶೇ. 30ರಷ್ಟು ಇಳಿಯಬಹುದು. ಮುಂದಿನ ಎರಡು ಮೂರು ತಿಂಗಳಲ್ಲೇ ಶೇ. 20ರಷ್ಟು ಬೆಲೆ ಇಳಿಕೆ ಆಗಬಹುದು ಎನ್ನಲಾಗಿದೆ. ವರದಿ ಪ್ರಕಾರ ಒಂದು ಔನ್ಸ್ಗೆ 3,500 ರೂ ಇರುವ ಚಿನ್ನದ ಬೆಲೆ ಮುಂದಿನ ಮೂರು ತಿಂಗಳಲ್ಲಿ 3,300 ಡಾಲರ್ ತಲುಪಬಹುದು. ಮುಂದಿನ 6-12 ತಿಂಗಳಲ್ಲಿ ಅದು 2,800 ಡಾಲರ್ಗೂ ಇಳಿಯಬಹುದು ಎಂದು ಸಿಟಿ ಬ್ಯಾಂಕ್ ನಿರೀಕ್ಷಿಸಿದೆ.
ಇದನ್ನೂ ಓದಿ: ಗ್ಲೋಬಲ್ ಸಮಿಟ್ನಲ್ಲಿ IMEC ಬಗ್ಗೆ ಚರ್ಚೆ; ಭಾರತಕ್ಕೆ ಈ ಕಾರಿಡಾರ್ ವರದಾನ ಹೇಗೆ?
ಚಿನ್ನದ ಬೆಲೆ ಇಳಿಕೆ ಆಗಲು ಏನು ಕಾರಣ?
ಈ ವರ್ಷ ಚಿನ್ನದ ಬೆಲೆ ಶೇ. 30ರಷ್ಟು ಏರಿದೆ. ಅದಾದ ಬಳಿಕ ಬೆಲೆ ಶಾಂತಗೊಂಡಿದೆ. ಏರಿಕೆಯೇ ಆಗುತ್ತಿಲ್ಲ. ಈಗ ಇರುವ ಸಂಘರ್ಷಮಯ ವಾತಾವರಣ ಕಳೆದ 10-20 ವರ್ಷದಲ್ಲಿ ಇದ್ದದ್ದಿಲ್ಲ. ಇಸ್ರೇಲ್ ಇರಾನ್ ಯುದ್ಧ ಆರಂಭವಾದಾಗ ಮೊದಲ ದಿನ ಚಿನ್ನದ ಬೆಲೆ ಏರಿತ್ತು. ಅದಾದ ಬಳಿಕ ಚಿನಿವಾರ ಪೇಟೆ ಸ್ಪಂದಿಸುವುದನ್ನೇ ನಿಲ್ಲಿಸಿದೆ. ಇದು ಚಿನ್ನದ ಬೆಲೆ ಗರಿಷ್ಠ ಮಟ್ಟ ಮುಟ್ಟಿರುವುದರ ಸಂಕೇತ ಎಂದು ಕೇದಿಯಾ ಅಡ್ವೈಸರಿ ಸಂಸ್ಥೆಯ ಮುಖ್ಯಸ್ಥ ಅಜಯ್ ಕೆದಿಯಾ ಹೇಳುತ್ತಾರೆ.
ಚಿನ್ನದ ಬೆಲೆ ಏರಿಕೆಗೆ ಏನೇನು ಸಂಭಾವ್ಯ ಕಾರಣ ಇವೆಯೋ ಅದೆಲ್ಲವೂ ಚಿನಿವಾರಪೇಟೆಯ ಮೇಲೆ ಪ್ರಭಾವ ಬೀರಿ ಆಗಿದೆ. ಮುಂದಿನ ಎರಡು ತಿಂಗಳಲ್ಲಿ ಚಿನ್ನದ ಬೆಲೆ ಶೇ. 8-10ರಷ್ಟು ಇಳಿಯಬಹುದು. ಮುಂದಿನ ಒಂದು ವರ್ಷದಲ್ಲಿ ಶೇ. 30ರಷ್ಟು ಕುಸಿದು 2,400 ಡಾಲರ್ ಬೆಲೆ ತಲುಪಬಹುದು ಎನ್ನುತ್ತಾರೆ ಅಜಯ್ ಕೆದಿಯಾ.
ಇದನ್ನೂ ಓದಿ: ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?
ಹಳೆಯ ಆಭರಣ ಮಾರುತ್ತಿರುವ ಜನರು..?
ಭಾರತೀಯರಿಗೆ ಚಿನ್ನ ಬಹಳ ಆಪ್ತವಾದ ಲೋಹ. ಅದರಲ್ಲೂ ಮಹಿಳೆಯರಿಗೆ ಆಗಾಗ್ಗೆ ಹೊಸ ಆಭರಣ ಪಡೆದರೆ ಸಮಾಧಾನ. ಈಗ ಚಿನ್ನದ ಬೆಲೆ ಬಹಳ ದುಬಾರಿಯಾಗಿರುವುದರಿಂದ ಹೊಸ ಚಿನ್ನ ಖರೀದಿಸಲು ಅಶಕ್ಯರಿದ್ದವರು ಹಳೆಯ ಆಭರಣಗಳನ್ನು ನೀಡಿ ಹೊಸ ಆಭರಣ ಮಾಡಿಸಿಕೊಳ್ಳುವುದು ಹೆಚ್ಚುತ್ತಿದೆಯಂತೆ.
ಹಾಗೆಯೇ, ಹಳೆಯ ಆಭರಣಗಳನ್ನು ಮಾರಿ ಅದರಿಂದ ಲಾಭ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಕಾಶಿ ಜ್ಯುವೆಲರ್ಸ್ನ ಶ್ರೇಯಾಂಶ್ ಕಪೂರ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ