AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Value: ಭಾರತೀಯ ಮನೆಗಳಲ್ಲಿದೆ ಜಗತ್ತಿನ ಅತಿಹೆಚ್ಚು ಚಿನ್ನ; ಅವಿಷ್ಟೂ ಸೇರಿಸಿದರೆ ಇವತ್ತಿನ ಮೌಲ್ಯ ಅದೆಷ್ಟು ಅಗಾಧ ಗೊತ್ತಾ?

Indian families own highest gold than any country: ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಬಳಸುವ ದೇಶಗಳೆಂದರೆ ಚೀನಾ ಮತ್ತು ಭಾರತ. ಇಲ್ಲಿ ಚಿನ್ನಕ್ಕೆ ಸಾಂಪ್ರದಾಯಿಕ ಸ್ಥಾನ ಇದೆ. ಹೀಗಾಗಿ, ಜನರು ಹೆಚ್ಚು ಚಿನ್ನ ಖರೀದಿಸುತ್ತಾರೆ. ಜಗತ್ತಿನಾದ್ಯಂತ 2.16 ಲಕ್ಷ ಟನ್ ಚಿನ್ನ ಇದ್ದರೆ, ಭಾರತೀಯರ ಮನೆಗಳಲ್ಲೇ 24,000 ಟನ್​​ಗೂ ಅಧಿಕ ಚಿನ್ನ ಇದೆ. ಚೀನಾ ಮತ್ತು ಭಾರತದ ಬಳಿ ಇರುವ ಚಿನ್ನ ಸೇರಿಸಿದರೆ 50,000 ಟನ್​​ಗೂ ಅಧಿಕ ಆಗುತ್ತದೆ.

Gold Value: ಭಾರತೀಯ ಮನೆಗಳಲ್ಲಿದೆ ಜಗತ್ತಿನ ಅತಿಹೆಚ್ಚು ಚಿನ್ನ; ಅವಿಷ್ಟೂ ಸೇರಿಸಿದರೆ ಇವತ್ತಿನ ಮೌಲ್ಯ ಅದೆಷ್ಟು ಅಗಾಧ ಗೊತ್ತಾ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2025 | 5:56 PM

Share

ನವದೆಹಲಿ, ಮೇ 20: ಚಿನ್ನ ಯಾವತ್ತೂ ಬೇಡಿಕೆ ಕಳೆದುಕೊಳ್ಳದ ಲೋಹ. ಕೇವಲ ಸೌಂದರ್ಯವರ್ಧಕ, ಪ್ರತಿಷ್ಠೆಗಾಗಿ ಮಾತ್ರವಲ್ಲ, ಇದು ಭಾರತೀಯರಿಗೆ ಪಾರಂಪರಿಕವಾಗಿ ಬಂದಿರುವ ಆಸಕ್ತಿ. ಜನರು ಅತಿಹೆಚ್ಚು ಚಿನ್ನ ಬಯಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಬರುತ್ತದೆ. ಚೀನಾಗಿಂತಲೂ ಭಾರತೀಯರೇ ಹೆಚ್ಚು ಚಿನ್ನ (gold ownership) ಹೊಂದಿದ್ದಾರೆ. ಜಗತ್ತಿನ ಶೇ. 30ಕ್ಕಿಂತ ಹೆಚ್ಚಿನ ಚಿನ್ನವನ್ನು ಭಾರತ ಮತ್ತು ಚೀನಾ ಹೊಂದಿವೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಂದಾಜು ಪ್ರಕಾರ ಇಲ್ಲಿಯವರೆಗೆ ವಿಶ್ವಾದ್ಯಂತ ಹೆಕ್ಕಿ ತೆಗೆದಿರುವ ಚಿನ್ನ 2,16,265 ಟನ್​​ನಷ್ಟಿದೆಯಂತೆ. ಅಂದರೆ, 2.16 ಲಕ್ಷ ಟನ್ ಚಿನ್ನವು ಪ್ರಸ್ತುತ ಇದೆ. ಕೆಲ ಚಿನ್ನವು ನಿಧಿಯಂತೆ ಎಲ್ಲೋ ಅಡಗಿಸಿಟ್ಟಿರಬಹುದು. ಕೆಲವು, ಮನೆಗಳಲ್ಲಿ ಪಾರಂಪರಿಕವಾಗಿ ಉಳಿದುಕೊಂಡಿರಬಹುದು. ಇನ್ನೂ ಕೆಲವು, ಬ್ಯಾಂಕ್ ಲಾಕರ್​​ಗಳಲ್ಲಿ ಇರಬಹುದು. ಈ 2.16 ಲಕ್ಷ ಟನ್ ಚಿನ್ನದ ಈಗಿನ ಮೌಲ್ಯ 22.46 ಟ್ರಿಲಿಯನ್ ಡಾಲರ್. ಇದು ಚೀನಾದ ಇಡೀ ಜಿಡಿಪಿಗಿಂತಲೂ ಹೆಚ್ಚು.

ಇದನ್ನೂ ಓದಿ: 4 ಕ್ಯಾರಟ್ ಚಿನ್ನಗಳಲ್ಲೇ ಬೆಲೆಗಳಲ್ಲಿ ಹೇಗೆ ವ್ಯತ್ಯಾಸ? ಜಿಎಸ್​​ಟಿ ಸೇರಿ ವಿವಿಧ ಹೆಚ್ಚುವರಿ ಬೆಲೆ ಬಗ್ಗೆ ತಿಳಿದಿರಿ

ಇದನ್ನೂ ಓದಿ
Image
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
Image
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
Image
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
Image
ಚಿನ್ನದ ಬೆಲೆ ಇಳಿಕೆ ಯಾವಾಗ?

ಭಾರತೀಯ ಕುಟುಂಬಗಳಲ್ಲಿ ಅತಿಹೆಚ್ಚು ಚಿನ್ನ…

ಒಂದು ವರದಿ ಪ್ರಕಾರ, ಭಾರತದಲ್ಲಿ ಜನರ ಮನೆಗಳಲ್ಲಿ ಬರೋಬ್ಬರಿ 24,000 ಟನ್ ಚಿನ್ನಗಳಿವೆಯಂತೆ. ಜಗತ್ತಿನ ಯಾವ ದೇಶದಲ್ಲೂ ಜನರ ಬಳಿ ಇಷ್ಟೊಂದು ಚಿನ್ನ ಇಲ್ಲ. ಈ ವಿಚಾರದಲ್ಲಿ ಭಾರತದ ಸಮೀಪ ಇರುವುದು ಚೀನಾ ಮಾತ್ರವೇ. ಚೀನೀ ಕುಟುಂಬಗಳಲ್ಲಿ 20,000 ಟನ್ ಚಿನ್ನ ಇದೆ. ಹೂಡಿಕೆಗೆ ಅಲ್ಲದೇ ಸಂಪ್ರದಾಯ ಮತ್ತು ಆಭರಣಕ್ಕೆ ಚಿನ್ನ ಬಳಸುವ ಪ್ರಮುಖ ದೇಶಗಳು ಇವೆರಡೆಯೇ.

ಭಾರತೀಯರ ಬಳಿ ಇರುವ 24,000 ಟನ್ ಚಿನ್ನದ ಇವತ್ತಿನ ಮೌಲ್ಯ 2.5 ಟ್ರಿಲಿಯನ್ ಡಾಲರ್. ಅಂದರೆ 213 ಲಕ್ಷ ಕೋಟಿ ರೂ. ಇದು ಭಾರತದ ಅರ್ಧ ಜಿಡಿಪಿಗಿಂತಲೂ ಹೆಚ್ಚು. ಪಾಕಿಸ್ತಾನದ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು.

ಇದನ್ನೂ ಓದಿ: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?

ಜನರ ಬಳಿ ಇರುವ 24,000 ಟನ್ ಚಿನ್ನವನ್ನೂ ಸೇರಿ, ಭಾರತದಲ್ಲಿ ಒಟ್ಟಾರೆ ಖಾಸಗಿಯಾಗಿ ಇರುವ ಚಿನ್ನ 30,000 ಟನ್​​ಗಿಂತಲೂ ಅಧಿಕ. ಆರ್​​ಬಿಐ 879.6 ಟನ್ ಚಿನ್ನವನ್ನು ತನ್ನ ಫೋರೆಕ್ಸ್ ಮೀಸಲು ನಿಧಿಯ ಭಾಗವಾಗಿ ಇರಿಸಿಕೊಂಡಿದೆ. ಇವೆಲ್ಲವನ್ನೂ ಒಟ್ಟುಗೂಡಿಸಿದರೆ 31,000 ಟನ್ ಚಿನ್ನವಾಗಬಹುದು. ಮೂರು ಟ್ರಿಲಿಯನ್ ಡಾಲರ್​​ಗೂ ಹೆಚ್ಚಿನ ಮೌಲ್ಯದ ಚಿನ್ನವು ಭಾರತದಲ್ಲಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ