AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?

China vs India on gold rush: ಚೀನಾ ಸರ್ಕಾರ ಚಿನ್ನಕ್ಕೆ ಮಹತ್ವ ಕೊಡುವುದು ಮುಂದುವರಿದಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್ ದಾಖಲೆ ಪ್ರಮಾಣದಲ್ಲಿ ಚಿನ್ನ ಶೇಖರಿಸುತ್ತಿದೆ. ತನ್ನ ನಾಗರಿಕರಿಗೂ ಚಿನ್ನ ಖರೀದಿಸಲು ಉತ್ತೇಜಿಸುತ್ತಿದೆ. ಒಂದು ವರ್ಷದಲ್ಲಿ ಚಿನ್ನದ ಅನುಭೋಗ ಶೇ. 34ರಷ್ಟು ಹೆಚ್ಚಿದೆ. ಚೀನಾ ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?

ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2025 | 12:26 PM

Share

ನವದೆಹಲಿ, ಜೂನ್ 12: ಯುವಜನಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ಮಗು ನೀತಿಯನ್ನು ಬದಲಿಸಿ ಎರಡು ಮಕ್ಕಳ ನೀತಿಯನ್ನು ಸರ್ಕಾರ ಅಳವಡಿಸಿಕೊಂಡಿದೆ. ಹೆಚ್ಚು ಮಕ್ಕಳು ಮಾಡಿಕೊಳ್ಳಿ ಎಂದು ಯುವಜನರಿಗೆ ದುಂಬಾಲು ಬೀಳುತ್ತಿರುವ ಚೀನಾ ಸರ್ಕಾರ ಈಗ ಚಿನ್ನ (gold) ಖರೀದಿಸಿ ಎಂದು ಒತ್ತಡ ಹೇರತೊಡಗಿದೆ. ಚೀನಾದ ನೀತಿಯಲ್ಲಿ ಸಾಮಾನ್ಯವಾಗಿ ದೂರದೃಷ್ಟಿ ಇರುತ್ತದಾದ್ದರಿಂದ ಅದರ ಈ ನಡೆ ಕುತೂಹಲ ಮೂಡಿಸುತ್ತಿದೆ.

ಚೀನಾ ದೇಶ ಚಿನ್ನದ ಮೇಲೆ ಗಮನ ಕೊಡುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಭೌತಿಕ ಚಿನ್ನ ಮತ್ತು ಯುವಾನ್ ಕರೆನ್ಸಿಗಳಿಗೆ ಚೀನಾ ಹೆಚ್ಚೆಚ್ಚು ಮಹತ್ವ ಕೊಡುತ್ತಿದೆ. ಚೀನಾ ಸೆಂಟ್ರಲ್ ಬ್ಯಾಂಕ್ ಯಥೇಚ್ಛವಾಗಿ ಚಿನ್ನ ಖರೀದಿ ಮಾಡುತ್ತಿದೆ. ತನ್ನ ನಾಗರಿಕರಿಗೆ ಚಿನ್ನ ಖರೀದಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಅಲ್ಲಿನ ಜನರೂ ಕೂಡ ಪೂರಕವಾಗಿ ಸ್ಪಂದಿಸುತ್ತಿರುವುದು ಕಂಡು ಬಂದಿದೆ.

ಅಲ್ಲಿನ ಹಣಕಾಸು ಸಂಸ್ಥೆಗಳಿಗೂ ಸರ್ಕಾರ ಕೆಲ ಕಟ್ಟಪ್ಪಣೆಗಳನ್ನು ವಿಧಿಸಿ ಚಿನ್ನದ ಮೇಲೆ ಹೂಡಿಕೆ ಮಾಡುವಂತೆ ಮಾಡಿದೆ. ಚೀನಾದ ಇನ್ಷೂರೆನ್ಸ್ ಕಂಪನಿಗಳು ತಮ್ಮ ಆಸ್ತಿಯ ಶೇ. 1ರಷ್ಟನ್ನಾದರೂ ಮೊತ್ತವನ್ನು ಭೌತಿಕ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎನ್ನುವ ನಿಯಮವನ್ನು ಕೆಲ ತಿಂಗಳ ಹಿಂದೆ ಸರ್ಕಾರ ಮಾಡಿತ್ತು. ಇದಕ್ಕೆ ಪೂರಕವಾಗಿ, ಇನ್ಷೂರೆನ್ಸ್ ಕಂಪನಿಗಳಿಗೆ ಶಾಂಘೈ ಫ್ಯೂಚರ್ಸ್ ಎಕ್ಸ್​​ಚೇಂಜ್​​ನಲ್ಲಿ ನೇರವಾಗಿ ಚಿನ್ನ ಖರೀದಿಸಲು ಅವಕಾಶ ಮಾಡಿಕೊಡಲಾಯಿತು.

ಇದನ್ನೂ ಓದಿ: ಯುಪಿಐ ಟ್ರಾನ್ಸಾಕ್ಷನ್ಸ್​​ಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಹಾಕೋದಿಲ್ಲ: ಸರ್ಕಾರ ಸ್ಪಷ್ಟನೆ

ಕಳೆದ ವರ್ಷ ಚೀನಾ ಸರ್ಕಾರವು ತನ್ನ ನಾಗರಿಕರಿಗೆ ಭೌತಿಕ ಚಿನ್ನ ಖರೀದಿಸಲು ಅಭಿಯಾನವನ್ನೇ ನಡೆಸಿತ್ತು. ಅದಕ್ಕೆ ಜನರೂ ಕೂಡ ಪೂರಕವಾಗಿ ಸ್ಪಂದಿಸಿದ್ದರು. ಇದರ ಪರಿಣಾಮವಾಗಿ ಚಿನ್ನದ ಅನುಭೋಗ ಶೇ. 34ರಷ್ಟು ಹೆಚ್ಚಾಗಿದೆ.

ಸೆಂಟ್ರಲ್ ಬ್ಯಾಂಕಿಂದ ಭರ್ಜರಿ ಚಿನ್ನದ ಸಂಗ್ರಹ

ಚೀನಾದ ಫಾರೆಕ್ಸ್ ರಿಸರ್ವ್ಸ್ ವಿಶ್ವದಲ್ಲೇ ಗರಿಷ್ಠ ಇದೆ. ಅದು 3.3 ಟ್ರಿಲಿಯನ್ ಡಾಲರ್ ಮೌಲ್ಯದ ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಇದರಲ್ಲಿ 2,292 ಟನ್ ಚಿನ್ನ ಇದೆ. ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಹೊಂದಿರುವುದು ಚೀನಾದ ಸೆಂಟ್ರಲ್ ಬ್ಯಾಂಕ್ ಮಾತ್ರವೇ. ಎರಡನೇ ಸ್ಥಾನವು ಭಾರತದ ಆರ್​​ಬಿಐನದ್ದು. ಇದು 879 ಟನ್ ಚಿನ್ನವನ್ನು ತನ್ನ ಫಾರೆಕ್ಸ್ ಮೀಸಲು ನಿಧಿಯಲ್ಲಿ ಹೊಂದಿದೆ. ಭಾರತದಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಚಿನ್ನವನ್ನು ಚೀನಾ ಸೆಂಟ್ರಲ್ ಬ್ಯಾಂಕ್ ಹೊಂದಿದೆ. ಕೆಲ ವಿಶ್ಲೇಷಕರ ಪ್ರಕಾರ ಚೀನಾ ಸರ್ಕಾರ 2,200 ಟನ್ ಅಲ್ಲ, ಕನಿಷ್ಠ 5,000 ಟನ್ ಚಿನ್ನವನ್ನಾದರೂ ಖರೀದಿಸಿರಬಹುದು. ಯಾಕೆಂದರೆ, ಕಳೆದ ಇಪ್ಪತ್ತು ವರ್ಷಗಳಿಂದಲೂ ಚೀನಾ ವಿವಿಧ ರೀತಿಯಲ್ಲಿ ಚಿನ್ನವನ್ನು ಖರೀದಿಸುತ್ತಲೇ ಬಂದಿದೆ.

ಚೀನಾ ಇಷ್ಟೊಂದು ಗಮನವನ್ನು ಚಿನ್ನದ ಮೇಲೆ ಇಟ್ಟಿರುವುದು ಯಾಕೆ?

ಚೀನಾದ ನೀತಿ ಸಾಮಾನ್ಯವಾಗಿ ದೂರಗಾಮಿಯಾಗಿರುತ್ತದೆ ಎನ್ನುವುದು ಹಲವರ ಅನಿಸಿಕೆ. ಜಾಗತಿಕ ಹಣಕಾಸು ಕ್ಷೇತ್ರವು ಅಮೆರಿಕದ ಡಾಲರ್ ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ಅಂತಾರಾಷ್ಟ್ರೀಯ ವಹಿವಾಟುಗಳು ಡಾಲರ್​​ನಲ್ಲಿ ನಡೆಯುತ್ತವೆ. ಜಾಗತಿಕ ರಾಜಕೀಯ ಪರಿಸ್ಥಿತಿ ಬದಲಾದಾಗ ಹಣಕಾಸು ಮಾರುಕಟ್ಟೆ ಮತ್ತು ಆರ್ಥಿಕತೆ ವಿಚಲಿತಗೊಳ್ಳಬಹುದು. ಇದನ್ನು ತಪ್ಪಿಸಲು ಚೀನಾ ಸರ್ಕಾರ ಚಿನ್ನವನ್ನು ಹೆಚ್ಚೆಚ್ಚು ಸಂಗ್ರಹಿಸಿಟ್ಟುಕೊಳ್ಳುತ್ತಿರಬಹುದು. ಯಾಕೆಂದರೆ, ಚಿನ್ನ ಯಾವತ್ತಿಗೂ ಕೂಡ ಬೇಡಿಕೆ ಕಳೆದುಕೊಳ್ಳದ ಅಮೂಲ್ಯ ಲೋಹ.

ಇದನ್ನೂ ಓದಿ: ಎಲ್​ಟಿವಿ ಏರಿಕೆಯಿಂದ ಹಿಡಿದು ಚಿನ್ನದ ಹರಾಜುವರೆಗೆ, ಆರ್​​ಬಿಐನ ಹೊಸ ಗೋಲ್ಡ್ ಲೋನ್ ನಿಯಮಗಳನ್ನು ತಿಳಿದಿರಿ

ಭಾರತದಲ್ಲಿ ಚಿನ್ನದ ಮೇಲೆ ನಿರ್ಬಂಧಗಳು?

ಇನ್ನೊಂದೆಡೆ, ಭಾರತವೂ ಕೂಡ ಚಿನ್ನದ ಖರೀದಿ ಮೇಲೆ ಆಸಕ್ತಿ ಹೊಂದಿದೆ. ಆರ್​​ಬಿಐ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚಿನ್ನ ಕೂಡಿಟ್ಟುಕೊಂಡಿದೆ. ಭಾರತದ ಜನಸಾಮಾನ್ಯರ ಬಳಿ ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತೀಯರ ಬಳಿ ಇರುವ ಹೆಚ್ಚಿನ ಚಿನ್ನವು ಆಭರಣ ಚಿನ್ನವೇ ಆಗಿದೆ. ಹೂಡಿಕೆಗಾಗಿ ಚಿನ್ನ ಖರೀದಿಸುವುದು ಇನ್ನೂ ಕಡಿಮೆಯೇ ಇದೆ. ಸರ್ಕಾರ ಈ ನಿಟ್ಟಿನಲ್ಲಿ ಉತ್ತೇಜನ ನೀಡುವ ಅವಶ್ಯಕತೆ ಇದೆ ಎಂಬುದು ತಜ್ಞರ ಸಲಹೆ. ಚಿನ್ನದ ಮೇಲಿನ ಆಮದು ಸುಂಕ ಭಾರತದಲ್ಲಿ ಹೆಚ್ಚಿದೆ. ಹಾಗೆಯೇ, ಗೋಲ್ಡ್ ಲೋನ್ ಮೇಲೆ ನಿರ್ಬಂಧಗಳನ್ನು ಹೇರಲು ಸರ್ಕಾರ ಅಣಿಯಾಗಿದೆ. ಇದು ಚಿನ್ನ ಖರೀದಿಸುವ ಉತ್ಸಾಹವನ್ನು ತಗ್ಗಿಸಬಹುದು ಎಂಬುದು ಇವರ ಆತಂಕ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್