AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI KYC rule: ಹೊಸ ಕೆವೈಸಿ ನಿಯಮಗಳು ಇಂದಿನಿಂದ; ಅನುಕೂಲಗಳೇನು, ನಿಮ್ಮ ಗಮನಕ್ಕಿರಲಿ

RBI simplifies KYC rules: ಗ್ರಾಹಕರು ಬ್ಯಾಂಕ್ ಖಾತೆ ಆರಂಭಿಸಲು ಸುಲಭವಾಗುವ ರೀತಿಯಲ್ಲಿ ಆರ್​​ಬಿಐ ಕೆಲ ಕೆವೈಸಿ ನಿಯಮಗಳನ್ನು ಬದಲಾವಣೆ ಮಾಡಿದೆ. ಆಧಾರ್ ಬಯೋಮೆಟ್ರಿಕ್ ಮುಖಾಂತರ ಕೆವೈಸಿ ಅಪ್​ಡೇಟ್ ಮಾಡುವುದು, ವಿಡಿಯೋ ಕಾಲ್ ಮೂಲಕ ಕೆವೈಸಿ ಅಪ್​ಡೇಟ್ ಮಾಡುವುದು, ಆಧಾರ್ ಒಟಿಪಿ ಮೂಲಕ ಇಕೆವೈಸಿ ನಡೆಸುವುದು ಇವೇ ಮುಂತಾದ ನಿಯಮ ಬದಲಾವಣೆಗಳನ್ನು ಆರ್​​ಬಿಐ ತಂದಿದೆ.

RBI KYC rule: ಹೊಸ ಕೆವೈಸಿ ನಿಯಮಗಳು ಇಂದಿನಿಂದ; ಅನುಕೂಲಗಳೇನು, ನಿಮ್ಮ ಗಮನಕ್ಕಿರಲಿ
ಬ್ಯಾಂಕ್ ಅಕೌಂಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2025 | 3:22 PM

Share

ನವದೆಹಲಿ, ಜೂನ್ 12: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲ ಪ್ರಮುಖ ಕೆವೈಸಿ ನಿಯಮಗಳಲ್ಲಿ (KYC norms) ಬದಲಾವಣೆ ತಂದಿದೆ. ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲಾಗಿದೆ. 2025ರ ಆರ್​​ಬಿಐ ಕೆವೈಸಿ ತಿದ್ದಪಡಿ ನಿರ್ದೇಶನದ ಮೂಲಕ, ಆಧಾರ್ ಆಧಾರಿತವಾಗಿ ಮಾಡಬಹುದಾದ ಇ-ಕೆವೈಸಿ, ವಿಡಿಯೋ ಕೆವೈಸಿ ಹಾಗೂ ಡಿಜಿಲಾಕರ್ ಡಾಕ್ಯುಮೆಂಟ್​ಗಳ ಬಳಕೆ ಬಗ್ಗೆ ಇರುವ ಪ್ರಕಿಯೆಗಳನ್ನು ಸರಳಗೊಳಿಸಲಾಗಿದೆ.

ಮೊದಲ ಬಾರಿಗೆ ಬ್ಯಾಂಕ್ ಖಾತೆ ಹೊಂದುತ್ತಿರುವವರಿಗೆ, ಅದರಲ್ಲೂ ಮುಖ್ಯವಾಗಿ ಡಿಜಿಟಿ ಇತ್ಯಾದಿ ಸ್ಕೀಮ್​​ಗೆ ಬ್ಯಾಂಕ್ ಖಾತೆ ತೆರೆಯುತ್ತಿರುವಂಥವರಿಗೆ ಪ್ರಕಿಯೆ ಕ್ಲಿಷ್ಟವಾಗಬಾರದು ಎನ್ನುವ ದೃಷ್ಟಿಯಿಂದ ಕೆವೈಸಿ ನಿಯಮ ಪರಿಷ್ಕರಿಸಲಾಗಿದೆ.

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಮೂಲಕ ಇ-ಕೆವೈಸಿ

ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿ ಇಕೆವೈಸಿ ನಡೆಸಿ ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ನೀಡಲಾಗಿದೆ. ಆಧಾರ್​​​ನಲ್ಲಿರುವ ವಿಳಾಸ ಬೇರೆ ಇದ್ದಲ್ಲಿ, ಸೆಲ್ಫ್ ಡಿಕ್ಲರೇಶನ್ ಸಲ್ಲಿಸಿದರೆ ಸಾಕು.

ಇದನ್ನೂ ಓದಿ: ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?

ಕಚೇರಿಗೆ ಹೋಗದೆ ಖಾತೆ ತೆರೆಯುವ ಅವಕಾಶ

ಬ್ಯಾಂಕ್ ಅಕೌಂಟ್ ತೆರೆಯಲು ಕಚೇರಿಗೆ ಹೋಗಬೇಕೆಂದಿಲ್ಲ. ನೀವು ಕೂತ ಜಾಗದಿಂದಲೇ ಆಧಾರ್ ಒಟಿಪಿ ಆಧಾರಿತವಾಗಿ ಇಕೆವೈಸಿ ಮಾಡಬಹುದು. ಡಿಜಿಲಾಕರ್​ನಲ್ಲಿರುವ ದಾಖಲೆಗಳು ಅಥವಾ ಇ-ಡಾಕ್ಯುಮೆಂಟ್​​ಗಳಿಗೆ ಬ್ಯಾಂಕುಗಳು ಅನುಮತಿಸುತ್ತವೆ.

ಗಮನಿಸಬೇಕಾದ ಸಂಗತಿ ಎಂದರೆ, ಈ ವಿಧಾನದಲ್ಲಿ ಬ್ಯಾಂಕ್ ಖಾತೆ ಆರಂಭಿಸಲಾಗಿದ್ದರೆ, ಒಂದು ವರ್ಷದೊಳಗೆ ಅದರ ಸಿಡಿಡಿ ಪೂರ್ಣಗೊಳಿಸಬೇಕು. ಅಂದರೆ, ಗ್ರಾಹಕರು ಬ್ಯಾಂಕ್​​ಗೆ ಮೌಖಿಕವಾಗಿ ಹೋಗಿ ಕೆವೈಸಿಯನ್ನು ವೆರಿಫೈ ಮಾಡಬೇಕಾಗಬಹುದು.

ವಿಡಿಯೋ ಆಧಾರಿತವಾಗಿ ಗ್ರಾಹಕರ ಗುರುತು

ವಿಡಿಯೋ ಆಧಾರಿತವಾಗಿ ಗ್ರಾಹಕರ ಗುರುತು ಹಿಡಿಯುವ ಪ್​ರಕ್ರಿಯೆಗೆ (ವಿ-ಸಿಐಪಿ) ಅನಮತಿಸಲಾಗುತ್ತದೆ. ಬ್ಯಾಂಕ್​​ನ ಪ್ರತಿನಿಧಿಯೊಬ್ಬರು ವಿಡಿಯೋ ಕರೆ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ನೇರವಾಗಿ ವೆರಿಫಿಕೇಶನ್ ಮಾಡಬಹುದು. ಇದು ಬ್ಯಾಂಕ್ ಕಚೇರಿಗೆ ನೇರವಾಗಿ ಹೋಗಿ ಬ್ಯಾಂಕ್ ಖಾತೆ ತೆರೆದದ್ದಕ್ಕೆ ಸಮ. ಖಾತೆ ತೆರೆಯಲು ಅಥವಾ ಕೆವೈಸಿ ಅಪ್​​ಡೇಟ್ ಮಾಡಲು ಈ ವಿಡಿಯೋ ವಿಧಾನವನ್ನು ಬಳಸಬಹುದು.

ಇದನ್ನೂ ಓದಿ: ಯುಪಿಐ ಟ್ರಾನ್ಸಾಕ್ಷನ್ಸ್​​ಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಹಾಕೋದಿಲ್ಲ: ಸರ್ಕಾರ ಸ್ಪಷ್ಟನೆ

ಸೆಂಟ್ರಲ್ ಕೆವೈಸಿ ರಿಜಿಸ್ಟರಿ ಬಳಕೆ

ಗ್ರಾಹಕರು ಬೇರೆ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಅವರ ಕೆವೈಸಿ ದಾಖಲೆಗಳು ಕೇಂದ್ರ ಕೆವೈಸಿ ರಿಜಿಸ್ಟ್ರಿಯಲ್ಲಿ ಇರುತ್ತದೆ. ಇವರು ಇನ್ನೊಂದು ಬ್ಯಾಂಕ್​​ನಲ್ಲಿ ಖಾತೆ ತೆರೆಯುವಾಗ ಮತ್ತೆ ಕೆವೈಸಿ ದಾಖಲೆ ಸಲ್ಲಿಸಬೇಕಾಗುವುದಿಲ್ಲ. ರಿಜಿಸ್ಟ್ರಿಯಲ್ಲಿರುವ ಗ್ರಾಹಕರ ಕೆವೈಸಿ ದಾಖಲೆಯನ್ನು ಬ್ಯಾಂಕು ಪಡೆಯಬಹುದು. ಇದರಿಂದ ಅಕೌಂಟ್ ಓಪನಿಂಗ್ ಪ್ರಕ್ರಿಯೆ ಸುಲಭಗೊಳ್ಳುತ್ತದೆ.

ಇದರ ಜೊತೆಗೆ ಬ್ಯಾಂಕಿಂಗ್ ವ್ಯವಸ್ಥೆಯು ಹೆಚ್ಚೆಚ್ಚು ಜನರನ್ನು ತಲುಪಲು, ಅದರಲ್ಲೂ ಗ್ರಾಮೀಣ ಮತ್ತು ಪಟ್ಟಣ ಭಾಗಗಳಲ್ಲಿ ಬ್ಯಾಂಕ್ ಖಾತೆಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ವಿಶೇಷ ಅಸ್ಥೆ ವಹಿಸಬೇಕು ಎಂದು ಆರ್​​ಬಿಐ ಹೇಳಿದೆ. ಸರ್ಕಾರದ ಯೋಜನೆಗಳಿಗಾಗಿ ಜನರು ತೆರೆದಿರುವ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡು, ಅದನ್ನು ಮತ್ತೆ ರೀಆ್ಯಕ್ಟಿವೇಟ್ ಮಾಡುವ ವೇಳೆ ಬ್ಯಾಂಕುಗಳು ಉದಾರ ಧೋರಣೆ ಹೊಂದಿರಬೇಕು ಎಂದು ಆರ್​​ಬಿಐ ಸೂಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ