AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inflation: ಮೇ ತಿಂಗಳ ಹಣದುಬ್ಬರ ಶೇ. 2.82; ಇದು ಆರು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ಮಟ್ಟ

Retail inflation in 2025 May 2.82%: 2025ರ ಮೇ ತಿಂಗಳಲ್ಲಿ ಹಣದುಬ್ಬರ ಶೇ. 2.82ಕ್ಕೆ ಇಳಿದಿದೆ. ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಶೇ. 3.16ರಷ್ಟಿತ್ತು. 2019ರ ಫೆಬ್ರುವರಿ ಬಳಿಕ ಭಾರತದಲ್ಲಿ ಕನಿಷ್ಠ ಹಣದುಬ್ಬರ ಮೇನಲ್ಲಿ ದಾಖಲಾಗಿದೆ. ಸತತ ನಾಲ್ಕು ತಿಂಗಳು ಹಣದುಬ್ಬರ ಶೇ 4ರೊಳಗೆ ಇದೆ. ಏಳು ತಿಂಗಳಿಂದ ಹಣದುಬ್ಬರವು ತಾಳಿಕೆ ಮಿತಿಯಾದ ಶೇ. 6ರ ಒಳಗೆ ಇದೆ.

Inflation: ಮೇ ತಿಂಗಳ ಹಣದುಬ್ಬರ ಶೇ. 2.82; ಇದು ಆರು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ಮಟ್ಟ
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2025 | 7:11 PM

Share

ನವದೆಹಲಿ, ಜೂನ್ 12: ಭಾರತದಲ್ಲಿ ಹಣದುಬ್ಬರದ ಸತತ ಇಳಿಕೆ ಮುಂದುವರಿದಿದೆ. ರೀಟೇಲ್ ಹಣದುಬ್ಬರವು (Retail inflation) ಮೇ ತಿಂಗಳಲ್ಲಿ ಶೇ. 2.82ಕ್ಕೆ ಇಳಿದಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ 34 ಮೂಲಾಂಕಗಳಷ್ಟು ಏರಿಕೆ ತಗ್ಗಿದೆ. ಹಲವು ಆರ್ಥಿಕ ತಜ್ಞರು ನಿರೀಕ್ಷೆ ಮಾಡಿದುದಕ್ಕಿಂತಲೂ ಹೆಚ್ಚು ಇಳಿಕೆ ಆಗಿದೆ. ಕಳೆದ ಆರು ವರ್ಷದಲ್ಲೇ ಇದು ಕನಿಷ್ಠ ಹಣದುಬ್ಬರ ಮಟ್ಟವೆನಿಸಿದೆ. 2019ರ ಫೆಬ್ರುವರಿಯ ಬಳಿಕ ದಾಖಲಾದ ಅತಿ ಕಡಿಮೆ ಹಣದುಬ್ಬರ ಇದಾಗಿದೆ.

ಆಹಾರವಸ್ತುಗಳ ಬೆಲೆ ಕಡಿಮೆ ಆಗಿರುವುದು ಹಣದುಬ್ಬರ ಏರಿಕೆ ತಗ್ಗಲು ಪ್ರಮುಖ ಕಾರಣವಾಗಿದೆ. ಏಪ್ರಿಲ್​​ನಲ್ಲಿ ಶೇ. 1.78ರಷ್ಟಿದ್ದ ಆಹಾರ ಹಣದುಬ್ಬರ ಮೇ ತಿಂಗಳಲ್ಲಿ ಶೇ. 0.99ರಷ್ಟಿದೆ. ಅಂದರೆ ಬರೋಬ್ಬರಿ 79 ಮೂಲಾಂಕಗಳಷ್ಟು ದರ ಕಡಿಮೆ ಆಗಿದೆ.

ಇದನ್ನೂ ಓದಿ: ಹೊಸ ಕೆವೈಸಿ ನಿಯಮಗಳು ಇಂದಿನಿಂದ; ಅನುಕೂಲಗಳೇನು, ನಿಮ್ಮ ಗಮನಕ್ಕಿರಲಿ

ಜೂನ್ ತಿಂಗಳಲ್ಲಿ ಇನ್ನೂ ಇಳಿಯುತ್ತಾ ಹಣದುಬ್ಬರ?

ಐಸಿಆರ್​​ಎ ಪ್ರಕಾರ ಜೂನ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆಗಳು ಮತ್ತಷ್ಟು ತಗ್ಗುವ ನಿರೀಕ್ಷೆ ಇದೆ. ಮುಂಗಾರು ಮಳೆ ಮತ್ತು ಬೆಳೆ ಉತ್ತಮವಾಗಿರುವುದರಿಂದ ಈ ಶುಭ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಜೂನ್ ತಿಂಗಳಲ್ಲಿ ಹಣದುಬ್ಬರವು ಶೇ. 2.5ರ ಆಸುಪಾಸಿನಷ್ಟಿರಬಹುದು ಎಂದು ಹೇಳಲಾಗುತ್ತಿದೆ.

ಸತತ ಇಳಿಕೆ ಆಗುತ್ತಿರುವ ಹಣದುಬ್ಬರ…

2022ರಲ್ಲಿ ಶೇ. 8ರ ಆಸುಪಾಸಿನಲ್ಲಿ ಇದ್ದ ಹಣದುಬ್ಬರ ನಂತರ ಗಣನೀಯವಾಗಿ ಇಳಿದಿದೆ. ಆರ್​​ಬಿಐ ಹಣದುಬ್ಬರವನ್ನು ಶೇ. 4ಕ್ಕೆ ನಿಲ್ಲಿಸಲು ಗುರಿ ಇಟ್ಟಿದೆ. ಮತ್ತು ಹಣದುಬ್ಬರದ ತಾಳಿಕೆ ಮಿತಿಯನ್ನು ಶೇ. 2ರಿಂದ 6ಕ್ಕೆ ನಿಗದಿ ಮಾಡಿದೆ. ಅಂದರೆ, ಹಣದುಬ್ಬರವು ಶೇ. 2ಕ್ಕಿಂತ ಕೆಳಗಿಳಿಯದಂತೆ ಮತ್ತು ಶೇ. 6ಕ್ಕಿಂತ ಮೇಲೆ ಹೋಗದಂತೆ ನೋಡಿಕೊಳ್ಳುವುದು ಬಹಳ ಆದ್ಯತೆಯ ಸಂಗತಿ.

ಇದನ್ನೂ ಓದಿ: ಯುಪಿಐ ಟ್ರಾನ್ಸಾಕ್ಷನ್ಸ್​​ಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಹಾಕೋದಿಲ್ಲ: ಸರ್ಕಾರ ಸ್ಪಷ್ಟನೆ

ಕಳೆದ ಏಳು ತಿಂಗಳಿಂದ ಹಣದುಬ್ಬರವು ಶೇ. 6ರ ಮಿತಿಯೊಳಗೆಯೇ ಇದೆ. ಕಳೆದ ನಾಲ್ಕು ತಿಂಗಳಿಂದ ಶೇ. 4ಕ್ಕಿಂತಲೂ ಕಡಿಮೆ ಹಣದುಬ್ಬರದ ಸ್ಥಿತಿ ಇದೆ. ಇದು ಆರ್​​ಬಿಐಗೆ ಬೇರೆ ಪ್ರಯೋಗ ಮಾಡಲು ಸ್ವಾತಂತ್ರ್ಯ ಕಲ್ಪಿಸಿದೆ.

ಈ ಬಾರಿ ನಡೆದ ಆರ್​​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಸುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ರಿಪೋ ದರ ಶೇ. 6.50 ಇದ್ದದ್ದು ಶೇ. 5.50ಕ್ಕೆ ಇಳಿದಿದೆ. ಹಣದುಬ್ಬರ ಸ್ಥಿತಿ ನಿಯಂತ್ರಣದಲ್ಲಿದ್ದುದರಿಂದಲೇ ಆರ್​​ಬಿಐ ರಿಪೋ ದರ ಇಳಿಸುವ ಧೈರ್ಯ ತೋರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ