AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಕ್ವಿಟಿಯಿಂದ ಡೆಟ್ ಫಂಡ್​ವರೆಗೆ ವಿವಿಧ ಮ್ಯುಚುವಲ್ ಫಂಡ್​ಗಳಿಗೆ ವಿಭಿನ್ನ ಟ್ಯಾಕ್ಸ್ ಅನ್ವಯ; ಇಲ್ಲಿದೆ ಡೀಟೇಲ್ಸ್

Mutual Funds taxation rule: ಆಸ್ತಿ ಮಾರಿದಾಗ ಅದರಿಂದ ಬರುವ ಲಾಭದ ಮೇಲೆ ಎಸ್​ಟಿಸಿಜಿ ಅಥವಾ ಎಲ್​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಮ್ಯುಚುವಲ್ ಫಂಡ್​ಗಳಲ್ಲೂ ಈ ತೆರಿಗೆಗಳಿರುತ್ತವೆ. ಕೆಲವೊಮ್ಮೆ ಎಸ್​ಟಿಸಿಜಿಗೆ ಶೇ. 20ರಷ್ಟು ಟ್ಯಾಕ್ಸ್ ಇದ್ದರೆ, ಕೆಲ ಪ್ರಕರಣಗಳಲ್ಲಿ ಸ್ಲ್ಯಾಬ್ ರೇಟ್ ಇರುತ್ತದೆ. ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ ಎಲ್​ಟಿಸಿಜಿಯನ್ನು ಶೇ. 20 ಬದಲು ಶೇ. 12.5ಗೆ ಟ್ಯಾಕ್ಸ್ ಇಳಿಸಲಾಗಿದೆ. ಆದರೆ, ಇಂಡೆಕ್ಸೇಶನ್ ಬೆನಿಫಿಟ್ ಇರುವುದಿಲ್ಲ.

ಈಕ್ವಿಟಿಯಿಂದ ಡೆಟ್ ಫಂಡ್​ವರೆಗೆ ವಿವಿಧ ಮ್ಯುಚುವಲ್ ಫಂಡ್​ಗಳಿಗೆ ವಿಭಿನ್ನ ಟ್ಯಾಕ್ಸ್ ಅನ್ವಯ; ಇಲ್ಲಿದೆ ಡೀಟೇಲ್ಸ್
ಮ್ಯುಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 22, 2025 | 3:02 PM

Share

ನವದೆಹಲಿ, ಜುಲೈ 22: ಯಾವುದೇ ಆಸ್ತಿಗಳನ್ನು ಮಾರಾಟ ಮಾಡಿದಾಗ ಅದಕ್ಕೆ ಸಿಗುವ ಲಾಭದ ಹಣಕ್ಕೆ ಇನ್ಕಮ್ ಟ್ಯಾಕ್ಸ್ (Income tax) ಅನ್ವಯ ಆಗುತ್ತದೆ. ಸದ್ಯ ಕಿರು ಅವಧಿ ಲಾಭ ಹೆಚ್ಚಳ ತೆರಿಗೆ (ಎಸ್​ಟಿಸಿಜಿ) ಹಾಗು ದೀರ್ಘಾವಧಿ ಲಾಭ ಹೆಚ್ಚಳ ತೆರಿಗೆ (ಎಲ್​ಟಿಸಿಜಿ) ಇದೆ. ಮ್ಯೂಚುವಲ್ ಫಂಡ್​ಗಳಿಗೂ ಈ ಇವೇ ಟ್ಯಾಕ್ಸ್ ಇರುತ್ತವೆ. ಆದರೆ, ಮ್ಯೂಚುವಲ್ ಫಂಡ್ ಇರುವ ಕೆಟಗರಿ ಪ್ರಕಾರ ಟ್ಯಾಕ್ಸ್​ನಲ್ಲಿ ತುಸು ವ್ಯತ್ಯಯ ಆಗುತ್ತದೆ. ಐಟಿ ರಿಟರ್ನ್ಸ್ ಸಲ್ಲಿಸುವ ಈ ಸಂದರ್ಭದಲ್ಲಿ ಮ್ಯುಚುವಲ್ ಫಂಡ್​ಗಳಿಗೆ ಟ್ಯಾಕ್ಸ್ ಎಷ್ಟು ಹಾಕಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ತೆರಿಗೆ ವಿಚಾರಕ್ಕೆ ಬಂದರೆ ಮ್ಯೂಚುವಲ್ ಫಂಡ್​ಗಳನ್ನು ಈಕ್ವಿಟಿ ಮ್ಯುಚುವಲ್ ಫಂಡ್ ಮತ್ತು ನಾನ್-ಈಕ್ವಿಟಿ ಮ್ಯುಚುವಲ್ ಫಂಡ್​ಗಳೆಂದು ವರ್ಗೀಕರಿಸಬಹುದು. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಂದ ಬಂದ ಲಾಭವನ್ನು ಷೇರುಗಳ ರೀತಿಯಲ್ಲಿ ತೆರಿಗೆ ಹಾಕಲಾಗುತ್ತದೆ.

ಇನ್ನು, ಡೆಟ್ ಮ್ಯುಚುವಲ್ ಫಂಡ್, ಹೈಬ್ರಿಡ್ ಮ್ಯುಚುವಲ್ ಫಂಡ್, ಇಂಟರ್ನ್ಯಾಷನಲ್ ಮ್ಯುಚುವಲ್ ಫಂಡ್, ಗೋಲ್ಡ್ ಮ್ಯುಚುವಲ್ ಫಂಡ್​ಗಳನ್ನು ನಾನ್-ಈಕ್ವಿಟಿ ಮ್ಯುಚುವಲ್ ಫಂಡ್​ಗಳೆಂದು ಪರಿಗಣಿಸಲಾಗುತ್ತದೆ. ಇವುಗಳಿಗೆ ಟ್ಯಾಕ್ಸ್ ತುಸು ಬೇರೆಯಾಗಿರುತ್ತದೆ.

ಇದನ್ನೂ ಓದಿ: ಟಿಡಿಎಸ್-ಟಿಸಿಎಸ್ ಪಾವತಿದಾರರಿಗೆ ರಿಲೀಫ್; ಡೆಡ್​ಲೈನ್​ನೊಳಗೆ ಈ ಕೆಲಸ ಮಾಡಿದರೆ ರದ್ದಾಗಲಿದೆ ಟ್ಯಾಕ್ಸ್ ನೋಟೀಸ್

ಈಕ್ವಿಟಿ ಮ್ಯುಚುವಲ್ ಫಂಡ್: ಎಸ್​ಟಿಸಿಜಿ ತೆರಿಗೆ ಶೇ. 20 + ಸೆಸ್; ಎಲ್​ಟಿಸಿಜಿ ತೆರಿಗೆ ಶೇ. 12.5.

ಡೆಟ್ ಮ್ಯುಚುವಲ್ ಫಂಡ್: 2023ರ ಮಾರ್ಚ್ 31ಕ್ಕೆ ಮುನ್ನ ಖರೀದಿಸಿದ್ದು ಮತ್ತು 2024ರ ಜುಲೈ 23ರ ಬಳಿಕ ಮಾರಿದ್ದಾಗಿದ್ದರೆ, ಸ್ಲ್ಯಾಬ್ ದರ ಪ್ರಕಾರ ಎಸ್​ಟಿಸಿಜಿ ತೆರಿಗೆ ಅನ್ವಯ ಆಗುತ್ತದೆ. ಅಂದರೆ, ಫಂಡ್ ಖರೀದಿಸಿ ಎರಡು ವರ್ಷದೊಳಗೆ ಮಾರಿದಾಗ ಎಸ್​ಟಿಜಿಸಿಜಿ ಅನ್ವಯ ಆಗುತ್ತದೆ.

ಮ್ಯುಚುವಲ್ ಫಂಡ್ ಖರೀದಿಸಿ ಎರಡು ವರ್ಷದ ಬಳಿಕ ಮಾರಿದಾಗ ಶೇ. 12.5 ಎಲ್​ಟಿಸಿಜಿ ತೆರಿಗೆ ಹೇರಿಕೆ ಆಗುತ್ತದೆ. ಇದರಲ್ಲಿ ಇಂಡೆಕ್ಸೇಶನ್ ಬೆನಿಫಿಟ್ ಇರುವುದಿಲ್ಲ.

ಹೈಬ್ರಿಡ್ ಮ್ಯುಚುವಲ್ ಫಂಡ್: ಶೇ. 65ಕ್ಕೂ ಹೆಚ್ಚು ಪ್ರಮಾಣದ ಹೂಡಿಕೆಯನ್ನು ಈಕ್ವಿಟಿ ಮೇಲೆ ಹಾಕಿದ ಹೈಬ್ರಿಡ್ ಮ್ಯುಚುವಲ್ ಫಂಡ್​ಗಳಿಗೆ ಈಕ್ವಿಟಿ ಫಂಡ್​ಗಳ ರೀತಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಶೇ. 65ಕ್ಕಿಂತ ಕಡಿಮೆ ಈಕ್ವಿಟಿ ಎಕ್ಸ್​ಪೋಷರ್ ಇದ್ದಾಗ ಡೆಟ್ ಫಂಡ್ ರೀತಿ ಸ್ಲ್ಯಾಬ್ ರೇಟ್ ಅನ್ವಯ ಆಗುತ್ತದೆ.

ಗೋಲ್ಡ್ ಮ್ಯುಚುವಲ್ ಫಂಡ್: ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ಅವಶ್ಯಕತೆ ಇಲ್ಲದವರು ಯಾರ‍್ಯಾರು? ಇಲ್ಲಿದೆ ಪಟ್ಟಿ

ಇಂಟರ್ನ್ಯಾಷನಲ್ ಮ್ಯುಚುವಲ್ ಫಂಡ್: ಇದೂ ಕೂಡ ಸ್ಲ್ಯಾಬ್ ರೇಟ್ ಪ್ರಕಾರ ಇರುತ್ತದೆ.

ಇಟಿಎಫ್: ಒಂದು ವರ್ಷದೊಳಗೆ ಮಾರಿದಾಗ ಸ್ಲ್ಯಾಬ್ ರೇಟ್ ಪ್ರಕಾರ ಎಸ್​ಟಿಸಿಜಿ ಅನ್ವಯ ಆಗುತ್ತದೆ. ಇನ್ನು ಒಂದು ವರ್ಷದ ಬಳಿಕ ಮಾರಿದಾಗ ಶೇ. 12.5 ಎಲ್​ಟಿಸಿಜಿ ಅನ್ವಯ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ