AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ವಂಚನೆ ಆರೋಪ; ಅನಿಲ್ ಅಂಬಾನಿಯ ಹಲವು ಕಂಪನಿಗಳ ಮೇಲೆ ಇಡಿ ರೇಡ್

YES bank loan fraud case: ED raid on Anil Ambani's companies: 3,000 ಕೋಟಿ ರೂ ಮೊತ್ತದ ಸಾಲದ ಅಕ್ರಮ ವರ್ಗಾವಣೆ ಮತ್ತಿತರ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿಗೆ ಸೇರಿದ ವಿವಿಧ ಸ್ಥಳಗಳ ಮೆಲೆ ದಾಳಿ ಮಾಡಿದೆ. ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಗ್ರೂಪ್​ನ ಸುಮಾರು 50 ಕಂಪನಿಗಳ ಮೇಲೆ ರೇಡ್ ಆಗಿದೆ. ಯೆಸ್ ಬ್ಯಾಂಕ್​ನಿಂದ ಮಂಜೂರಾದ ಸಾಲವನ್ನು ಅಕ್ರಮವಾಗಿ ಬೇರೆ ಕಂಪನಿಗಳಿಗೆ ವರ್ಗಾವಣೆ ಮಾಡಿದ ಆರೋಪದ ಪ್ರಕರಣ ಇದು.

ಸಾಲ ವಂಚನೆ ಆರೋಪ; ಅನಿಲ್ ಅಂಬಾನಿಯ ಹಲವು ಕಂಪನಿಗಳ ಮೇಲೆ ಇಡಿ ರೇಡ್
ಅನಿಲ್ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 24, 2025 | 11:57 AM

Share

ನವದೆಹಲಿ, ಜುಲೈ 24: ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ (Anil Ambani) ಮಾಲಕತ್ವದ ರಿಲಾಯನ್ಸ್ ಗ್ರೂಪ್​ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದೆ. ವರದಿಗಳ ಪ್ರಕಾರ ಗ್ರೂಪ್​ಗೆ ಸೇರಿದ 35ಕ್ಕೂ ಹೆಚ್ಚು ಸ್ಥಳಗಳು ಹಾಗು 50 ಕಂಪನಿಗಳ ಮೇಲೆ ಇಡಿ ರೇಡ್ ಮಾಡಿರುವುದು ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಾದ ಪಿಎಂಎಲ್​ಎ ಆ್ಯಕ್ಟ್ ಸೆಕ್ಷನ್ 17 ಅಡಿಯಲ್ಲಿ ಇಡಿಯಿಂದ ಈ ದಾಳಿ ಆಗಿದೆ.

3,000 ಕೋಟಿ ರೂ ಮೊತ್ತದ ಯೆಸ್ ಬ್ಯಾಂಕ್ ವಂಚನೆಯ ಈ ಪ್ರಕರಣದಲ್ಲಿ ಸಿಬಿಐ ಎರಡು ಎಫ್​ಐಆರ್​ಗಳನ್ನು ದಾಖಲಿಸಿದೆ. ಇದರ ಆಧಾರದ ಮೇಲೆ ಹಾಗೂ ಸೆಬಿ, ಬ್ಯಾಂಕ್ ಆಫ್ ಬರೋಡಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮತ್ತಿತರ ಏಜೆನ್ಸಿಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಈ ಕ್ರಮ ತೆಗೆದುಕೊಂಡಿದೆ.

ಇದನ್ನೂ ಓದಿ: ಆದಾಯಕ್ಕೂ ಮೀರಿ ಗಳಿಕೆ ಆರೋಪ; ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ

ರಿಲಾಯನ್ಸ್ ಗ್ರೂಪ್ ಮೇಲಿರುವ ಈ ವಂಚನೆ ಆರೋಪವೇನು?

ಯೆಸ್ ಬ್ಯಾಂಕ್ 2017 ಮತ್ತು 2019ರ ನಡುವೆ ರಿಲಾಯನ್ಸ್ ಗ್ರೂಪ್​ಗೆ 3,000 ಕೋಟಿ ರೂ ಸಾಲ ಮಂಜೂರು ಮಾಡಿತ್ತು. ಆದರೆ, ಈ ಸಾಲದ ಹಣವನ್ನು ಗ್ರೂಪ್​ನ ಇತರ ಸಂಸ್ಥೆಗಳು ಹಾಗೂ ಶೆಲ್ ಕಂಪನಿಗಳಿಗೆ (ಬೇನಾಮಿ) ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಯೆಸ್ ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿರುವ ಸಾಧ್ಯತೆ ಇದೆ. ಆರಂಭಿಕ ತನಿಖೆಯಲ್ಲಿ ಈ ಸಂಬಂಧ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಎಂಬುದು ಜಾರಿ ನಿರ್ದೇಶನಾಲಯ ಮಾಡುತ್ತಿರುವ ಆರೋಪ.

ಸಾಲ ಅನುಮೋದನೆ ವಿಚಾರದಲ್ಲಿ ಯೆಸ್ ಬ್ಯಾಂಕ್ ಪ್ರಕ್ರಿಯೆ ಅನುಮಾನಾಸ್ಪದವಾಗಿದೆ. ಸರಿಯಾದ ಹಣಕಾಸು ಸ್ಥಿತಿ ಇಲ್ಲದ ಕಂಪನಿಗಳು, ಸಾಮಾನ್ಯ ನಿರ್ದೇಶಕರಿರುವ ಕಂಪನಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಸರಿಯಾಗಿ ಅವಲೋಕನ ಮಾಡುವ ಪ್ರಯತ್ನ ಆಗಿಲ್ಲ. ಸಾಲಕ್ಕೆ ಅನುಮೋದನೆ ಆಗುವ ಮುನ್ನವೇ ಅಥವಾ ಅದೇ ದಿನವೇ ಸಾಲದ ಹಣ ಬಿಡುಗಡೆ ಮಾಡಲಾಗಿದೆ ಎಂದು ಯೆಸ್ ಬ್ಯಾಂಕ್​ನ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಇಡಿ ಎತ್ತಿ ತೋರಿಸಿದೆ.

ಇದನ್ನೂ ಓದಿ: ಸೋದರರ ಕಮಾಲ್; ದಿನಸಿ ಅಂಗಡಿ ಬಿಟ್ಟು 300 ಕೋಟಿ ರೂ ‘ಕೂಲ್’ ಸಾಮ್ರಾಜ್ಯ ಕಟ್ಟಿದ ಕಥೆ

ಇಡಿ ನೀಡಿರುವ ಮಾಹಿತಿ ಪ್ರಕಾರ ರಿಲಾಯನ್ಸ್ ಗ್ರೂಪ್​ಗೆ ಸೇರಿದ 40ಕ್ಕೂ ಅಧಿಕ ಕಂಪನಿಗಳು ಹಾಗೂ 25 ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Thu, 24 July 25